ಬಡವರು ಸ್ಮಾರ್ಟ್ ಸಿಟಿಯಲ್ಲಿ ಮನೆ ಪಡೆದಿದ್ದು ಹೆಮ್ಮೆ: ಡಾ.ಜಿ ಪರಮೇಶ್ವರ್
ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಮಾರಿಯಮ್ಮ ಯುವಕ ಸಂಘದಿಂದ ಡಾ.ಜಿ ಪರಮೇಶ್ವರ್ ಅವರಿಗೆ ಅಭಿನಂದನೆ
ತುಮಕೂರು : ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಮಾರಿಯಮ್ಮ ಯುವಕ ಸಂಘದಿಂದ ಭಾನುವಾರ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ ಪರಮೇಶ್ವರ್ ಅವರನ್ನು ಅಭಿನಂದಿಸಲಾಯಿತು. ಅಭಿನಂದನ ಸ್ವೀಕರಿಸಿ ಮಾತನಾಡಿದ ಪರಮೇಶ್ವರ್ ಅವರು ತುಮಕೂರು ನಗರದ ಹೃದಯ ಭಾಗದಲ್ಲಿ ಮಾರಿಯಮ್ಮ ನಗರದ ಬಡವರು ಹೋರಾಟ ಮಾಡಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭೂಮಿ ಮತ್ತು ಆಧುನಿಕ ವಸತಿ ಸಂಕೀರ್ಣಗಳನ್ನು ಪಡೆದಿರುವುದು ನನಗೆ ಹೆಮ್ಮೆಯ ವಿಚಾರ ಈ ಜಾಗದಲ್ಲಿ ದಲಿತರಿಗೆ ಮನೆ ನೀಡಬಾರದೆಂದು ಹಲವಾರು ಒತ್ತಡಗಳು ನಾನೂ ಉಪಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಬಂದರು ಇಲ್ಲಿರುವ ಪರಿಶಿಷ್ಟ ಸಮುದಾಯಕ್ಕೆ ವಸತಿ ನೀಡುವುದು ನ್ಯಾಯಬದ್ಧವಾಗಿದ್ದ ಕಾರಣ ಭೂಮಿಯ ವಿಚಾರವಾಗಿ ಐ.ಎ.ಎಸ್ ಅಧಿಕಾರಿ ಕೆ.ಪಿ ಮೋಹನ್ ರಾಜ್ ನನಗೆ ಮನನಮಾಡಿದ ಹಿನ್ನೆಲೆಯಲ್ಲಿ ಈ ನಗರಕ್ಕೆ ಕೊಡುಗೆ ನೀಡುತ್ತಿರುವ ಮಾರಿಯಮ್ಮ ನಗರದ ನಿವಾಸಿಗಳಿಗೆ ಮನೆ ಮಂಜೂರು ಮಾಡಲು ನಾನೂ ಆದೇಶಿಸಿದ್ದು, ಇಂದು ಉಪಯುಕ್ತವಾಗಿದೆ ಇಲ್ಲಿರುವ ಬಡವರು ಮುಂದಿನ ದಿನಗಳಲ್ಲಿ ವಸತಿ ಸಮುಚ್ಛಯಗಳನ್ನು ಉಪಯುಕ್ತಗೊಳಿಸಿಕೊಂಡು ಸಾರ್ತಕ ಬದುಕನ್ನು ನಡೆಸಬೇಕು.
ತುಮಕೂರು ಸ್ಮಾರ್ಟ್ ಸಿಟಿಯ ಕೆಲವೇ ಯೋಜನೆಗಳಲ್ಲಿ ನನಗೆ ತೃಪ್ತಿತಂದಿರುವ ಈ ವಸತಿ ಯೋಜನೆಯು ಅಭಿವೃದ್ಧಿಯಲ್ಲಿ ಬಡವರ ಪಾಲು ಧಕ್ಕಿಸಿಕೊಂಡಿರುವುದು ಬುದ್ಧ ಮತ್ತು ಅಂಬೇಡ್ಕರ್ ಅವರ ಆಶಯ ಈಡೇರಿದಂತೆ ಇದು ಭಾರತದ ಮಟ್ಟಕ್ಕೆ ಮಾದರಿಯಾಗಬೇಕು. ದೇಶದಲ್ಲಿ ಬೆಲೆ ಏರಿಕೆ, ಸಾಮಾನ್ಯ ಜನರ ಬದುಕು ದುಬಾರಿಯಾಗುತ್ತಿದ್ದು ಸಂವಿಧಾನದ ಮೌಲ್ಯಗಳು ದಿನದಿಂದ ದಿನಕ್ಕೆ ಕುಸಿಯುತ್ತಿದ್ದರು ಜನರು ಕೋಮುವಾದಿ ಸಿದ್ದಾಂತದ ಕಡೆಗೆ ವಾಲುತ್ತಿರುವುದು ಅಪಾಯಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಪಿ ಮಹೇಶ್, ಕೊಳಗೇರಿ ಸಮಿತಿ ಅಧ್ಯಕ್ಷರಾದ ಎ.ನರಸಿಂಹಮೂರ್ತಿ, ಮಾರಿಯಮ್ಮ ಯುವಕ ಸಂಘದ ಕಣ್ಣನ್, ಮುರುಗ, ರಾಜ, ಕಾಶಿರಾಜ್, ಗೋಂವಿದ ಸ್ವಾಮಿ, ಚಕ್ರಮಪಾಣಿ, ಚಲುವರಾಜು ಉಪಸ್ಥಿತರಿದ್ದರು.