ತಮ್ಮಡಿಹಳ್ಳಿ-ಬರದಲೇಪಾಳ್ಯ-ವೈಎಸ್ ಪಾಳ್ಯದ ರಸ್ತೆ ಕಾಮಗಾರಿ ಸ್ಥಗಿತ : ಸುಗಮ ಸಂಚಾರಕ್ಕೆ ಗ್ರಾಮಸ್ಥರ ಆಗ್ರಹ
ಹುಳಿಯಾರು : ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ-ಬರದಲೇಪಾಳ್ಯ-ವೈಎಸ್ ಪಾಳ್ಯ ಗ್ರಾಮಗಳಿಂದ ಎನ್ ಹೆಚ್ 150 ಎ ರಸ್ತೆಗೆ ಸಂಪರ್ಕಿಸುವ ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆಯ ಕಾಮಗಾರಿಯು ತಮ್ಮಡಿಹಳ್ಳಿ ಇಂದ ಬರದಲೇಪಾಳ್ಯದ ತನಕ ಮಾತ್ರ ರಸ್ತೆಯ ಕಾಮಗಾರಿ ನಡೆದಿದ್ದು, ಮುಂದಿನ ರಸ್ತೆ ಕಾಮಾಗಾರಿಯು ನಡೆಯದೆ ಅರ್ಧಕ್ಕೆ ನಿಂತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬರದಲೇಪಾಳ್ಯ ಇಂದ ವೈಎಸ್ ಪಾಳ್ಯದ ವರೆಗೆ ರಸ್ತೆಯನ್ನು ಅರ್ಧಕ್ಕೆ ಅಗಲಗೊಳಿಸಿ ಮುಂದಕ್ಕೆ ಕೆಲಸ ಮಾಡದೆ ಹಾಗೆ ಬಿಟ್ಟಿದ್ದಾರೆ, ಯಾರೋ ಒಬ್ಬ ತನ್ನ ಹೊಲದಲ್ಲಿ ರಸ್ತೆ ಕಾಮಗಾರಿ ಮಾಡಬೇಡಿ ಎಂದು ತಡೆದಿರುವುದು ರಸ್ತೆ ಕಾಮಗಾರಿಗೆ ಸ್ಥಗಿತಕ್ಕೆ ಕಾರಣ ಎಂದು ಹೇಳಲಾಗಿದೆ.
ಸುಮಾರು 25 ರಿಂದ 30 ಜನರ ಜಮೀನಿನಲ್ಲಿ ರಸ್ತೆ ಹಾದು ಹೋಗಿದೆ. ಆದರೆ ಒಬ್ಬರು ಮಾತ್ರ ಈತ ಕಾನೂನು ಮೊರೆ ಹೋಗದೆ ಎಂಜಿನಿಯರ್ ಅವರಿಗೆ ಹೆದರಿಸಿದ್ದಾರೆ ಎನ್ನಲಾಗಿದೆ. ಈತ ಪರಿಹಾರ ಕೊಡದೆ ತನ್ನ ಜಮೀನಿನಲ್ಲಿ ರಸ್ತೆ ಮಾಡಬೇಡಿ, ಪರಿಹಾರ ಕೊಟ್ಟು ರಸ್ತೆ ಮಾಡಿ ಎಂದು ಕೆಲಸ ಮಾಡುವ ಜೆಸಿಬಿ ಚಾಲಕನಿಗೆ ಇಂಜಿನಿಯರ್‌ಗೆ ಹೆದರಿಸಿದ್ದಾರೆ. ಹಾಗಾಗಿ ರಸ್ತೆ ಅಗಲಗೊಳಿಸದೆ ವಾಪಸ್ ತೆರಳಿದ್ದಾರೆ,
ಅದರೆ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ತಮ್ಮ ಜಮೀನುಗಳನ್ನು ಬಿಟ್ಟರು ಒಬ್ಬರಿಂದ ಮಾತ್ರ ರಸ್ತೆ ಕಾಮಾಗಾರಿ ನಿಂತಿರುವುದು ಗ್ರಾಮಸ್ಥರಿಗೆ ಹಾಗೂ ವಾಹನ ಚಾಲಕರಿಗೆ ತುಂಬಾ ತೊಂದರೆಯಾಗಿದೆ. ಪೊಲೀಸ್‌ರ ಸಮ್ಮುಖದಲ್ಲಿ ರಸ್ತೆ ಕಾಮಾಗಾರಿ ಮಾಡಿ ಸುಗಮ ಸಂಚಾರಕ್ಕೆ ನೆರವಾಗುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.