46 ಕೋಟಿ ರೂ ಗಳ ವೆಚ್ಚದಲ್ಲಿ ಐ ಡಿ ಹಳ್ಳಿ ಹೋಬಳಿಯ ಸಮಗ್ರ ಅಭಿವೃದ್ಧಿ : ಶಾಸಕ ಎಂ.ವಿ.ವೀರಭದ್ರಯ್ಯ
ಮಧುಗಿರಿ : ನನ್ನ ಅವಧಿಯಲ್ಲಿ ಐ ಡಿ ಹಳ್ಳಿ ಹೋಬಳಿಯನ್ನು ಸುಮಾರು 46 ಕೋಟಿ ರೂ ಗಳ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ತಾಲ್ಲೂಕಿನ ಐ ಡಿ ಹಳ್ಳಿ ಹೋಬಳಿಯ ಗರಣಿ ಗ್ರಾಮದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಉದ್ಘಾಟನೆ ನೇರವೇರಿಸಿ ಮಾತನಾಡಿದರು. ತುಮುಲ್ ವತಿಯಿಂದ ಅನೇಕ ರೈತಪರ ಕಾರ್ಯಕ್ರಮಗಳು ನಡೆಯುತ್ತಿವೆ .ಗರಣಿ ಗ್ರಾಮಕ್ಕೆ ವಿದ್ಯುತ್ ಸಬ್ ಸ್ಟೇಷನ್ ಮಂಜೂರಾಗಿದ್ದು ಎರಡು ಎಕರೆ ಜಮೀನಿನ ಅವಶ್ಯಕತೆ ಇದೆ. ಗ್ರಾ ಪಂ ಅಧ್ಯಕ್ಷೆಯ ಪತಿ ಲಕ್ಷ್ಮೀ ನಾರಾಯಣ್ ಜಮೀನು ನೀಡಲು ಮುಂದೆ ಬಂದಿದ್ದು ಮುಂದಿನ ದಿನಗಳಲ್ಲಿ 8 ಕೋಟಿ ರೂಗಳ ವೆಚ್ಚದಲ್ಲಿ ಸಬ್ ಸ್ಟೇಷನ್ ಕಾಮಗಾರಿ ಆರಂಭಿಸಲಾಗುವುದು.ಮುದ್ದಮಲ್ಲನಹಳ್ಳಿ ಬಳಿ 3 ಕೋಟಿ ರೂ ವೆಚ್ಚದಲ್ಲಿ ಬಿಡ್ಜ್ ನಿರ್ಮಾಣ, ಕಲುವೀರನಹಳ್ಳಿ ಬಳಿ ರಸ್ತೆ ನಿರ್ಮಾಣ, ಸಾದರಹಳ್ಳಿ, ಗೂಲಹಳ್ಳಿ 1.5 ಕೋಟಿ ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣ, ವಿಶೇಷ ಯೋಜನೆಯಡಿಯಲ್ಲಿ ಮಾದೇನಹಳ್ಳಿ ಯಲ್ಲಿ 40 ಲಕ್ಷ ರೂಗಳ ಕಾಮಗಾರಿ, ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಯಲ್ಕೂರಿಗೆ 1ಕೋಟಿ ಕಂಸಾನಹಳ್ಳಿ 1 ಕೋಟಿ ರೂ ಗಳಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಪುರವರ ದಿಂದ ಐ ಡಿ ಹಳ್ಳಿ ರಸ್ತೆ ಅಭಿವೃದ್ದಿಗೆ 18 ಕೋಟಿ ರೂ , ಪಿಎಂಜಿಎಸ್ ವೈ ಯೋಜನೆಯಡಿಯಲ್ಲಿ ಬ್ರಹ್ಮ ಸಮುದ್ರ ಗೇಟ್ ನಿಂದ ಸುದ್ದೇಗುಂಟೆ ಮಾರ್ಗವಾಗಿ 5 ಕೋಟಿ ರೂ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ಸಹಕಾರ ಸಂಘಗಳು ಗ್ರಾಮಗಳ ಮಟ್ಟದಲ್ಲಿ ಅಭಿವೃದ್ಧಿ ಕಾಣುವ ಜೊತೆಗೆ ಜನರ ಅರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗುತ್ತದೆ ಈ ಗ್ರಾಮದಲ್ಲಿ ಹಾಲು ಉತ್ಪಾದಕರ ಕಟ್ಟಡವು ತುಂಬಾ ಹಳೆಯದಾಗಿದ್ದರಿಂದ ತುಮುಲ್ ವತಿಯಿಂದ 4.5 ಲಕ್ಷ ರೂ ಹಾಗೂ ಶಾಸಕರ ಅನುದಾನ 3 ಲಕ್ಷ ರೂ ಗಳ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಇಂದೂ ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದಾರೆ. ವ್ಯವಸಾಯದಲ್ಲಿ ತೊಡಗಿಸಿ ಕೊಂಡಿರುವ ರೈತರಿಗೆ ನಷ್ಟವೇ ಹೆಚ್ಚಿದೆ. ತುಮಲ್ ವತಿಯಿಂದ ಹೈನುಗಾರರಿಗೆ ಹೆಚ್ಚಿನ ಸವಲತ್ತುಗಳನ್ನು ವಿತರಿಸಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ಹಾಲಿನ ಉತ್ಪಾದನೆ ಪ್ರಮಾಣ ಇಳಿಕೆಯಾಗುತ್ತಿದ್ದು ಹಸುಗಳ ಮರಣ ಪ್ರಮಾಣವು ಹೆಚ್ಚು.ಕರೊನಾ ದಿಂದ ಮೃತಪಟ್ಟ ತಾಲ್ಲೂಕಿನ 48 ಜನರಿಗೆ 1 ಲಕ್ಷ ರೂಗಳನ್ನು ವಿತರಿಸಲಾಗಿದೆ. ಹೈನುಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜಿಸಲಾಗುತ್ತಿದೆ. ಇಡೀ ರಾಜ್ಯದಲ್ಲಿ ಎಲ್ಲಿಯೂ ಹೈನುಗಾರರ ಮಕ್ಕಳಿಗೆ ಹಾಸ್ಟಲ್ ವ್ಯವಸ್ಥೆ ಕಲ್ಪಿಸಿಲ್ಲಾ. ನಮ್ಮ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ಗುಣಮಟ್ಟದ ಹಾಲನ್ನು ನೀಡುವುದು ತುಮುಲ್ ಮುಖ್ಯ ಉದ್ದೇಶ ಎಂದರು.
ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಆರ್ ಗರಣಿ ಮಾತನಾಡಿ ಮನೆಗೊಂದು ಕಲ್ಪವೃಕ್ಷ ಹಾಗೂ ಒಂದು ಕಾಮಧೇನು ಇದ್ದರೆ ಒಂದು ಕುಟುಂಬದ ಅರ್ಥಿಕ ರಕ್ಷಣೆಗೆ ಸಹಾಯವಾಗುತ್ತದೆ ಹಾಗೆ ಗ್ರಾಮಕ್ಕೊಂದೂ ಡೇರಿ ಇದ್ದರೆ ಗ್ರಾಮವು ಸೇರಿದಂತೆ ಜನರು ಆರ್ಥಿಕವಾಗಿ ಸಧೃಡರಾಗಲು ಸಾಧ್ಯ. ನಮ್ಮ ಗರಣಿ ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿ ಹಾಗೂ ಮತ್ತಿತರ ಮೂಲಭೂತ ಸೌಕರ್ಯ ಗಳನ್ನು ಕಲ್ಪಿಸಿ ಕೊಡಬೇಕೆಂದು ಶಾಸಕರನ್ನು ಒತ್ತಾಯಿಸಿದರು.
ಮಾಜಿ ತಾ ಪಂ ಸದಸ್ಯ ರಾಜು ಮಾತನಾಡಿ ಹೈನುಗಾರಿಕೆಯನ್ನು ನಂಬಿ ಕೊಂಡು ಜೀವನ ನಡೆಸುತ್ತಿದ್ದು ಹೈನುಗಾರರಿಗೆ ನೀಡುವ ಸಹಾಯ ಧನವನ್ನು ಸರಕಾರ ಹೆಚ್ಚಿಸ ಬೇಕು ಹಾಗೂ ಗ್ರಾಮಕ್ಕೆ ಸರಕಾರಿ ಆಸ್ಪತ್ರೆಯ ಅಗತ್ಯವಿದೆ ಎಂದರು.
ಗ್ರಾ.ಪಂ.ಅಧ್ಯಕ್ಷೆ ಇಂದು ಲಕ್ಷ್ಮೀನಾರಾಯಣ ರೆಡ್ಡಿ, ಉಪಾಧಕ್ಷೆ ಸಿದ್ದಗಂಗಮ್ಮ, ಗುರುಮೂರ್ತಿ, ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಗೋಪಾಲಪ್ಪ, ಡಾ.ದೀಕ್ಷಿತ್, ತುಮುಲ್ ವಿಸ್ತರಣಾಧಿಕಾರಿ ಗಿರೀಶ್,ಗ್ರಾ.ಪಂ.ಸದಸ್ಯರು ಹಾಗೂ ಡೇರಿ ನಿರ್ದೇಶಕರು, ಗ್ರಾಮದ ಮುಖಂಡರು ಭಾಗವಹಿಸಿದ್ದರು