ಕೊರಟಗೆರೆ
ಪಾಳು ಬಿದ್ದ ಚನ್ನರಾಯನದುರ್ಗದ ಶುದ್ಧ ಕುಡಿಯುವ ನೀರಿನ ಘಟಕ : ರಿಪೇರಿಗೆ ಮುಂದಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಕೊರಟಗೆರೆ : ತಾಲ್ಲೂಕಿನಲ್ಲಿ ಚನ್ನರಾಯನದುರ್ಗ ಗ್ರಾಮವು ಒಂದು ದೊಡ್ಡ ಹೋಬಳಿ ಕೇಂದ್ರ ಚನ್ನರಾಯನದುರ್ಗಕ್ಕೆ ಏಳು ಸುತ್ತಿನ ಕೋಟೆ ಎಂದು ಕರೆಯಲಾಗುತ್ತದೆ ಹಿಂದೆ ರಾಜರ ಆಳ್ವಿಕೆಯಲ್ಲಿ ಮಧುಗಿರಿಯ ಪಾಳೆಗಾರನಾದ ಚಿಕ್ಕಪ್ಪ ಗೌಡ ಎಂಬ ಅರಸ ತನ್ನ ಆಳ್ವಿಕೆಯನ್ನು ನಡೆಸಿದ್ದ ನಂತರ ಮೈಸೂರು ಸಂಸ್ಥಾನದ ಚಿಕ್ಕದೇವರಾಯ ಅರಸನ ಆಳ್ವಿಕೆಯಲ್ಲಿ ಈ ಚನ್ನರಾಯನದುರ್ಗ ಗ್ರಾಮವು ಒಂದು ಬಹುಮುಖ್ಯ ಭಾಗವಾಗಿತ್ತು. ಆದರೆ ಇತಿಹಾಸವುಳ್ಳ ಈ ಚನ್ನರಾಯನದುರ್ಗ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ ಅದರಲ್ಲೂ ಶುದ್ಧಕುಡಿಯುವ ನೀರಿನ ಕೊರತೆಯು ಸಹ ಹೆಚ್ಚಾಗಿ ಕಂಡು ಬರುತ್ತಿದೆ.
ಸ್ಥಳೀಯ ಜನನಾಯಕರ ಹಾಗೂ ಅಧಿಕಾರಿಗಳ ವಿರುದ್ಧ ಚನ್ನರಾಯನದುರ್ಗ ಗ್ರಾಮದ ಗ್ರಾಮಸ್ಥರು ಹಿಡಿಶಾಪ ವನ್ನು ಹಾಕುತ್ತಿದ್ದಾರೆ..
ಸುಮಾರು 4 ವರ್ಷಗಳ ಹಿಂದೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಅಂದಾಜು 10 ಲಕ್ಷ ರೂಪಾಯಿಗಳನ್ನು ಸರ್ಕಾರ ಮಂಜೂರು ಮಾಡಿತ್ತು ಅದರಂತೆ ಶಾಸಕರ ಮಾರ್ಗದರ್ಶನದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿತ್ತು ಆದರೆ ಕಳೆದ ಒಂದೂವರೆ ವರ್ಷಗಳಿಂದ ಈ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದ್ದು ಇಲ್ಲಿಯವರೆಗೂ ಕೂಡ ಇದನ್ನ ರಿಪೇರಿ ಮಾಡಿಸಿ ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಅಧಿಕಾರಿಗಳು ಮುಂದೆ ಬಾರದೇ ಕಾರಣಗಳನ್ನು ಹೇಳಿಕೊಂಡು ಹೋರಾಡುತ್ತಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೂನಿಯರ್ ಇಂಜಿನಿಯರ್ ಚಿಕ್ಕರಾಜು ಮಾತನಾಡಿ ತಾಲ್ಲೂಕಿನಲ್ಲಿ ಒಟ್ಟು 152 ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳು ಅಂಕಿಅಂಶದಲ್ಲಿ ಇವೆ ಅದರಲ್ಲಿ 72-78 ಶುದ್ಧ ಕುಡಿಯುವ ನೀರಿನ ಘಟಕಗಳು ತನ್ನ ಕಾರ್ಯನಿರ್ವಹಣೆ ಮಾಡದೆ ಹಾಳಾಗಿವೆ.
ಈ ಸಲುವಾಗಿ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ಈ ಹಿಂದಿನಿಂದಲೂ ತರಲಾಗಿದೆ.ಸುಮಾರು ಐದು ವರ್ಷಗಳನ್ನು ಪೂರೈಸಿದ 72 ಶುದ್ಧ ಕುಡಿಯುವ ನೀರಿನ ಘಟಕಗಳು ರಿಪೇರಿಗೆ ಬಂದಿವೆ ಇದಕ್ಕೆ ನೇರ ಹೊಣೆ ಏಜೆನ್ಸಿ ದಾರರು ಎಂದು ತಿಳಿಸಿದ್ದಾರೆ.
ಇನ್ನಾದರೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೇಲಧಿಕಾರಿಗಳು ಕೊರಟಗೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸದೆ ಹಾಳಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ರಿಪೇರಿಯನ್ನು ಮಾಡಿಸಿ ಕೊಡಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.