ಜೀತವಿಮುಕ್ತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹ : ತಹಶೀಲ್ದಾರ್ ಗೆ ಮನವಿ
ಮಧುಗಿರಿ : ಜೀತ ವಿಮುಕ್ತರ ಬದುಕು ಹಸನಾಗಿ ಸ್ವತಂತ್ರವಾಗಿ ಜೀವನ ನಿರ್ವಹಿಸಲು ಸರ್ಕಾರದಿಂದ ಬರುವ ಸೌಲಭ್ಯಗಳು ಅವರಿಗೆ ತಲುಪಿದಾಗ ಮಾತ್ರ ಸಾಧ್ಯ ಎಂದು ಜೀವಿಕ ಹಾಗೂ ಎಂ.ಜೆ.ಎಸ್.ಸಂಸ್ಥೆಯ ಕಾರ್ಯದರ್ಶಿ ಡಾ.ಸಂಜೀವ್ ಮೂರ್ತಿ ತಿಳಿಸಿದರು.
ತಾಲೂಕು ಕಛೇರಿಯ ಆವರಣದಲ್ಲಿ ಮಧುಗಿರಿ ತಾಲೂಕು ಜೀವಿಕ ಸಂಘಟನೆ ,ಕರ್ನಾಟಕ ಕೃಷಿ ಕಾರ್ಮಿಕರ ಒಕ್ಕೂಟ ಹಾಗೂ ಮುಕ್ತ ಜೀವನ ಸೇವಾ ಸಂಸ್ಥೆ ಇವುಗಳ ಸಹಯೋಗದೊಂದಿಗೆ ಜೀತವಿಮುಕ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟಿಸಿ ತಹಶೀಲ್ದಾರರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಜೀತ ವಿಮುಕ್ತರು ಹಾಗೂ ಕೂಲಿ ಕಾರ್ಮಿಕರು ಅನೇಕ ವರ್ಷಗಳಿಂದ ತುಳಿತಕ್ಕೊಳಗಾಗಿ ತಮ್ಮ ಕುಟುಂಬ ನಿರ್ವಹಣೆಗಾಗಿ ಬಹಳ ಕಷ್ಟಪಟ್ಟು ದುಡಿದರು ಅವರು ಸಮಾಜದಲ್ಲಿ ಮೇಲೆ ಬರಲು ಸಾಧ್ಯವಾಗಲಿಲ್ಲ ಇಂತಹವರನ್ನು ನಮ್ಮ ಸಂಘಟನೆಗಳು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಾ ಬಂದಿರುತ್ತೆ ಸರ್ಕಾರದ ಸೌಲಭ್ಯಗಳು ಸಕಾಲಕ್ಕೆ ಇವರಿಗೆ ಒದಗಿಸುವ ಮೂಲಕ ಇಂತಹ ಕಾರ್ಮಿಕರನ್ನು ಮೇಲೆತ್ತಬೇಕು ಹಾಗೂ ನಮ್ಮ ತಾಲೂಕಿನಲ್ಲಿರುವ ಜೀತ ವಿಮುಕ್ತರಿಗೆ ನಿವೇಶನ ನೀಡಬೇಕು ಇವರ ಕುಟುಂಬಕ್ಕೆ ಅಂತ್ಯೋದಯ ಪಡಿತರ ಚೀಟಿ ನೀಡಿ ಅಶಕ್ತರಾದ ಇವರಿಗೆ ಶಕ್ತಿ ತುಂಬುವು ಕೆಲಸ ಮಾಡಬೇಕಿದೆ ಎಂದು ವಿವಿಧ ಬೇಡಿಕೆಗಳನ್ನು ನೀಡುವಂತೆ ಒತ್ತಾಯಿಸಿದರು.
ತಹಶೀಲ್ದಾರ್ ಕೆ.ಅರುಂಧತಿ ರವರು ಪ್ರತಿಭಟನ ನಿರತರಿಂದ ಮನವಿ ಸ್ವೀಕರಿಸಿ ಬಳಿಕ ಮಾತನಾಡಿದ ಅವರು ನಿಮ್ಮ ವಿವಿಧ ಬೇಡಿಕೆಗಳನ್ನು ತ್ವರಿತವಾಗಿ ಪೂರೈಸಲು ಸಂಬಂಧ ಪಟ್ಟವರಿಗೆ ಕಳುಹಿಸಲಾಗುವುದು ಎಂದರು
ಪ್ರತಿಭಟನೆಯಲ್ಲಿ ದಲಿತ ಸರ್ವೋದಯ ಸಮಿತಿಯ ತಾಲೂಕ ಅಧ್ಯಕ್ಷ ನರಸಿಂಹ ಮೂರ್ತಿ ದೊಡ್ಡಹೊಸಹಳ್ಳಿ, ಸುದ್ದೆಗುಂಟೆ ಕದುರಪ್ಪ, ಹುಣಸವಾಡಿ ನರಸಿಂಹಯ್ಯ ,ತೋಟದ ಮಡು ತಿಮ್ಮಯ್ಯ, ಭದ್ರಾವತಿ ಬೆಂಕಿಸಿದ್ದಪ್ಪ,
ತೆರಿಯೂರು ಸತ್ಯನಾರಾಯಣ, ತೊಂಡೋಟಿ ಮಾಲಿಂಗ, ಅಂಜಿನಪ್ಪ,ನಾಗಪ್ಪ,ತಿಮ್ಮಪ್ಪ,ಕದ್ರಪ್ಪ,ರಾಮಯ್ಯ,ಹಾಗೂ ಒಕ್ಕೂಟದ ಪದಾಧಿಕಾರಿಗಳು ಜೀತವಿಮುಕ್ತರು ಭಾಗವಹಿಸಿದ್ದರು.