ಆಕಸ್ಮಿಕ ಬೆಂಕಿ ಬಿದ್ದು ಉರಿದು ಬೂದಿಯಾದ ಹುಲ್ಲಿನ ಬಣವೆ
ತುರುವೇಕೆರೆ : ತಾಲೂಕಿನ ದಬ್ಬೇಘಟ್ಟ ಹೋಬಳಿ ಗೊಟ್ಟಿಕೆರೆ ಗ್ರಾಮದಲ್ಲಿ ರಾಸುಗಳ ಉದರಪೋಷಣೆ ಸಲುವಾಗಿ ಶೇಖರಿಸಲಾಗಿದ್ದ ಹುಲ್ಲಿನ ಬಣವೆ ಬೆಂಕಿ ಆಕಸ್ಮಿಕಕ್ಕೆ ತಗುಲಿ ಮಂಗಳವಾರ ರಾತ್ರಿ ಉರಿದು ಬೂದಿಯಾಗಿದೆ.
ಹುಲ್ಲಿನ ಬಣವೆ ಗೊಟ್ಟಿಕೆರೆ ಗ್ರಾಮದಲ್ಲಿನ ರೈತ ಕೃಷ್ಣೇಗೌಡ ಎಂಬುವರಿಗೆ ಸೇರಿದ್ದಾಗಿದೆ. ಗ್ರಾಮ ಸಮೀಪದಲ್ಲಿ ಶೇಖರಿಸಲಾಗಿದ್ದ ಹುಲ್ಲಿನ ಬಣವೆಯನ್ನು ಹೊತ್ತಿ ಉರಿಯುತ್ತಿರುವುದನ್ನು ಕಂಡ ಗ್ರಾಮಸ್ಥರ ನಂದಿಸಲು ಮುಂದಾಗಿದ್ದಾರೆ. ಆದರೇ ಬೆಂಕಿಯ ಕೆನ್ನಾಲಿಗೆ ತೀವ್ರತೆ ಹೆಚ್ಚಾಗಿದ್ದ ಹಿನ್ನಲೆಯಲ್ಲಿ ಗ್ರಾಮಸ್ಥರು ಬೆಂಕಿ ನಂದಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ರೈತ ಕೃಷ್ಣೇಗೌಡರಿಗೆ ಮುಂದಿನ ದಿನಗಳಲ್ಲಿ ರಾಸುಗಳನ್ನು ಸಾಕುವುದು ಸವಾಲೆಸಿದೆ. ಹುಲ್ಲನ್ನು ಕಳೆದುಕೊಂಡಿರುವ ರೈತನಿಗೆ ಸರಕಾರದ ವತಿಯಿಂದ ಪರಿಹಾರ ದೊರಕಿಸಿಕೊಡಬೇಕೆಂಬುದು ಸ್ಥಳೀಯ ರೈತರ ಆಗ್ರಹವಾಗಿದೆ.
ಈ ಕುರಿತು ರೈತ ಕೃಷ್ಣೇಗೌಡ ನೀಡಿದರುವ ದೂರಿನ ಮೇರೆಗೆ ತುರುವೇಕೆರೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.