ಗೋಣಿತುಮಕೂರು ಪಿ.ಎ.ಸಿ.ಎಸ್. ನೂತನ ಅಧ್ಯಕ್ಷರಾಗಿ ಜಿ.ಕೆ.ರವೀಂದ್ರಕುಮಾರ್ ಆಯ್ಕೆ
ತುರುವೇಕೆರೆ : ತಾಲೂಕಿನ ಗೋಣಿತುಮಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಿ.ಕೆ. ರವೀಂದ್ರಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೋಣಿತುಮಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿಂದಿನ ಅಧ್ಯಕ್ಷ ಶಿವಣ್ಣ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. 13 ಮಂದಿ ನಿರ್ದೇಶಕರ ಬಲವುಳ್ಳ ಸಂಘದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಜಿ.ಕೆ.ರವೀಂದ್ರಕುಮಾರ್ ಹೊರೆತುಪಡಿಸಿ ಬೇರೆ ಯಾವ ನಿರ್ದೇಶಕರೂ ನಾಮಪತ್ರ ಸಲ್ಲಿಸಲಿಲ್ಲ. ಈ ಹಿನ್ನಲೆಯಲ್ಲಿ ಜಿ.ಕೆ.ರವಿಂದ್ರಕುಮಾರ್‌ರವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಸಹಕಾರಿ ಅಭಿವೃದ್ದಿ ಅಧಿಕಾರಿ ಶಿವಕುಮಾರ್ ಘೋಷಿಸಿದರು.
ನೂತನ ಅಧ್ಯಕ್ಷರಾದ ಜಿ.ಕೆ.ರವಿಂದ್ರಕುಮಾರ್ ಮಾತನಾಡಿ ನನ್ನನ್ನು ಅವಿರೋಧವಾಗಿ ಅಧ್ಯಕ್ಷನನ್ನಾಗಿ ಮಾಡಲು ಕಾರಣೀಭೂತರಾದ ಎಲ್ಲರಿಗೂ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ. ಎಲ್ಲಾ ನಿರ್ದೇಶಕರುಗಳ ಸಲಹೆ ಸಹಕಾರದೊಂದಿಗೆ ಸಂಘವನ್ನು ಪ್ರಗತಿಯತ್ತ ಕೊಂಡೊಯ್ಯಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ನೂತನ ಅಧ್ಯಕ್ಷರನ್ನು ಶಾಸಕ ಮಸಾಲಜಯರಾಮ್ ,ಸಂಘದ ಉಪಾಧ್ಯಕ್ಷರಾದ ಜ್ಯೋತಿ, ನಿಕಟಪೂರ್ವ ಅಧ್ಯಕ್ಷರಾದ ಶಿವಣ್ಣ, ನಿರ್ದೇಶಕರುಗಳಾದ ರಾಮೇಗೌಡ,ನಂಜುಂಡೇಗೌಡ,ಬಿ.ಎಸ್.ತ್ಯಾಗರಾಜ್,ಎನ್.ಸಿ.ಚಂದ್ರಣ್ಣ,ರಂಗಾಚಾರ್, ರಂಗಯ್ಯ,ಕೃಷ್ಣಮೂರ್ತಿ, ಶಿಕ್ಷಕರಾದ ಜಯರಾಮ್,ಪುಟ್ಟರಂಗಪ್ಪ, ನಂದೀಶ್, ಮಹೇಶ್,ಮೇಲ್ವಿಚಾರಕರಾದ ಹರೀಶ್, ಸಿ.ಇ.ಓ.ಪ್ರಕಾಶ್ ಸೇರಿದಂತೆ ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.