ಕುಣಿಗಲ್
ತಹಶೀಲ್ದಾರ್ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ : ತಹಶೀಲ್ದಾರ್ ಬಳಿ ಡಿ.ಕೃಷ್ಣಕುಮಾರ್ ಚರ್ಚೆ

ಕುಣಿಗಲ್ : ತಾಲ್ಲೂಕು ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಪಡೆಯಲು ಸಾವಿರಾರು ಲಂಚ ಕೇಳುತ್ತಾರೆ,ಕಚೇರಿಯಲ್ಲಿ ಬ್ರೋಕರ್ ಗಳ ಹಾವಳಿ ಜಾಸ್ತಿಯಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಪಿಎಲ್ ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ ಕೃಷ್ಣಕುಮಾರ್ ತಹಸೀಲ್ದಾರ್ ಮಹಾಬಲೇಶ್ವರ ರವರ ಬಳಿ ಈ ಸಂಬಂಧ ಕೂಲಂಕುಶವಾಗಿ ಚರ್ಚಿಸಿದ್ದಾರೆ.
ಪ್ರತಿ ಬುಧವಾರ ಇವರು ತಾಲ್ಲೂಕು ಕಚೇರಿ ಆವರಣದಲ್ಲಿ ಜನಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರ ಕಷ್ಟ ಸುಖಗಳನ್ನು ಕೇಳುವ ಸಂದರ್ಭದಲ್ಲಿ ತಾಲ್ಲೂಕಿನ ಹಲವಾರು ರೈತರು ತಾಲ್ಲೂಕು ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಪಡೆಯಬೇಕಾದರೆ ಇನ್ಯಾವುದೇ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸಿಕೊಳ್ಳಬೇಕೆಂದರೆ ಸಾವಿರಾರು ರೂಪಾಯಿಗಳ ಲಂಚ ಕೇಳುತ್ತಾರೆ ಎಲ್ಲಿಂದ ತಂದು ಕೊಡೋಣಎಂದು ಕಣ್ಣೀರಿಟ್ಟು ರೈತರು ತಮ್ಮ ಅಳಲನ್ನು ತೋಡಿಕೊಂಡಾಗ ತಕ್ಷಣ ಡಿ. ಕೃಷ್ಣಕುಮಾರ್ ರೈತರೊಂದಿಗೆ ತಹಸೀಲ್ದಾರ್ ಕಚೇರಿಗೆ ತೆರಳಿ ಈ ಸಂಬಂಧ ತಹಸೀಲ್ದಾರ್ ಮಹಾಬಲೇಶ್ ಅವರ ಬಳಿ ಕೂಲಂಕುಷವಾಗಿ ಚರ್ಚಿಸಿ ನಿಮ್ಮ ಕೆಳಹಂತದ ಅಧಿಕಾರಿಗಳು,ಸಿಬ್ಬಂದಿಗಳು, ಮಾಡುವ ತಪ್ಪಿನಿಂದ ತಾಲೂಕಿಗೆ ಹಾಗೂ ನಿಮಗೆ ಕೆಟ್ಟ ಹೆಸರು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ತಮ್ಮ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಕೊಡುವುದಕ್ಕೆ 4ಸಾವಿರಕ್ಕೂ ಹೆಚ್ಚು ಹಣವನ್ನು ಕೇಳುತ್ತಾರೆ, ಹಣ ಕೊಡದಿದ್ದರೆ ರೈತರಲ್ಲೂ ಸುಖಾಸುಮ್ಮನೆ ಕಚೇರಿಗೆ ಅಲೆಸುತ್ತಾರೆ ಇದಕ್ಕೆ ಕೆಲವು ಬ್ರೋಕರುಗಳು ಇದ್ದಾರೆ ಎಂದು ರೈತರು ಕಣ್ಣೀರಿಟ್ಟುಆರೋಪಿಸಿದ್ದಾರೆ ತಕ್ಷಣ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು ಇದಲ್ಲದೆ ಕಚೇರಿಯಲ್ಲಿ ಸಕಾಲದ ಅರ್ಜಿಗಳು ಶೀಘ್ರವಾಗಿ ವಿಲೇವಾರಿ ಆಗುತ್ತಿಲ್ಲ ಎಂದು ದೂರು ಇದೆ ಎಂದು ತಹಸೀಲ್ದಾರ್ ಮಹಾಬಲೇಶ್ ರವರನ್ನು ಪ್ರಶ್ನಿಸಿ ಈ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಮುಂದಿನ ಆಗುಹೋಗುಗಳಿಗೆ ನೀವೇ ಜವಾಬ್ದಾರರಾಗುತ್ತೀರಿ ಎಂದಾಗ ಕೂಡಲೇ ತಹಸೀಲ್ದಾರ್ ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿ ಈ ರೀತಿಯ ಆರೋಪಗಳು ಮತ್ತೆ ನನ್ನ ಗಮನಕ್ಕೆ ಬಂದರೆ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು ರೈತರು ಇಲಾಖೆಯಲ್ಲಿ ಏನೇ ಕಷ್ಟಗಳಿದ್ದರೂ ಬಂದು ನನಗೆ ನೇರವಾಗಿ ಹೇಳಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಬಲರಾಮ್ ಒಳಗೊಂಡಂತೆ ಹಲವಾರು ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.