ಕುಣಿಗಲ್
ಆರ್‌ಟಿಒ ಅಧಿಕಾರಿ ಸದ್ರುಲ್ಲಾ ಶರೀಫ್ ಕ್ಷೀಪ್ರ ಕಾರ್ಯಾಚರಣೆ : ಓವರ್‌ಲೋಡ್ ತುಂಬಿದ 60 ವಾಹನಗಳ ವಶ
ಕುಣಿಗಲ್ : ಆರ್ ಟಿಒ ಅಧಿಕಾರಿ ಸದ್ರುಲ್ಲಾ ಶರೀಫ್ ಮಿಂಚಿನ ಕಾರ್ಯಾಚರಣೆ ನಡೆಸಿ ಸುಮಾರು 60 ವಿವಿಧ ವಾಹನಗಳನ್ನು ತಮ್ಮ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕುಣಿಗಲ್ ಪೊಲೀಸರ ವಶಕ್ಕೆ ನೀಡಿದ್ದಾರೆ.
ಪಟ್ಟಣದ ಮದ್ದೂರು ರಸ್ತೆಯಲ್ಲಿ ಗುರುವಾರ ಸಂಜೆ ಸುಮಾರು 60 ವಾಹನಗಳನ್ನು ತಪಾಸಣೆಗೆ ಒಳಪಡಿಸಿ ಇದರಲ್ಲಿ ಓವರ್ ಲೋಡ್ ತುಂಬಿದ ವಾಹನ, ಟಿಂಬರ್ ಲಾರಿ, ಒಳಗೊಂಡಂತೆ ಸುಮಾರು ಹತ್ತು ವಾಹನಗಳನ್ನು ವಿವಿಧ ಪ್ರಕರಣಗಳ ಅಡಿಯಲ್ಲಿ ಸೀಜ್ ಮಾಡಿದ್ದಾರೆ ಇದಲ್ಲದೆ ತೆರಿಗೆ ಪಾವತಿಸದ, ಡಿಎಲ್ ಇಲ್ಲದ, ಎಫ್ ಸಿ, ಇಲ್ಲದ ಸುಪ್ರೀಂಕೋರ್ಟ್ ಬ್ಯಾನ್ ಮಾಡಿರುವ ವಾಹನ,ಒಳಗೊಂಡಂತೆ ವಿವಿಧ ದಾಖಲೆಗಳನ್ನು ಹೊಂದಿಲ್ಲದ 50 ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಪತ್ರಿಕೆ ಆರ್ ಟಿಒ ಅಧಿಕಾರಿ ಸದ್ರುಲ್ಲಾ ಶರೀಫ್ ಅವರನ್ನು ಸಂಪರ್ಕಿಸಿ ಈ ಸಂಬಂಧ ಹೇಳಿಕೆ ಪಡೆದಾಗ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದ ಅವರು ಸೀಜ್ ಮಾಡಿರುವ ಹಾಗೂ ಪ್ರಕರಣ ದಾಖಲಿಸಿರುವ 4 ಚಕ್ರ, ದ್ವಿಚಕ್ರ, ತ್ರಿಚಕ್ರ,ವಾಹನಗಳು ನಮ್ಮ ಇಲಾಖೆಯ ಕಣ್ತಪ್ಪಿಸಿ ತುಂಬಾ ದಿನಗಳಿಂದ ಓಡಾಡುತ್ತಿದ್ದವು ಏಕಾಏಕಿ ವಾಹನ ಸವಾರರಿಗೆ ಅರಿವಿಲ್ಲದೆ ಗುರುವಾರ ಸಂಜೆ ಕುಣಿಗಲ್ ಪಟ್ಟಣದ ಮದ್ದೂರು ರಸ್ತೆಯಲ್ಲಿ ಸುಮಾರು ವಾಹನಗಳನ್ನುತಪಾಸಣೆಗೆ ಒಳಪಡಿಸಿ ಅದರಲ್ಲಿ 60 ಅನಧಿಕೃತ ವಾಹನಗಳನ್ನು ವಶಕ್ಕೆ ಪಡೆದು ಕೆಲವು ಪ್ರಕರಣಗಳ ಅಡಿಯಲ್ಲಿ 10 ವಿವಿಧ ವಾಹನಗಳನ್ನು ಸೀಜ್ ಮಾಡಿ 50 ವಿವಿಧ ವಾಹನಗಳಿಗೆ ಸಮರ್ಪಕವಾದ ದಾಖಲೆಗಳು ಇಲ್ಲದ ಕಾರಣ ಅಂತಹ ವಾಹನಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸಿ, ಕುಣಿಗಲ್ ಪೊಲೀಸರ ವಶಕ್ಕೆ ನೀಡಿದ್ದೇವೆ ಎಂದು ತಿಳಿಸಿದರು.