ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ದಲಿತ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ
ತುಮಕೂರು : ಗಣರಾಜ್ಯೋತ್ಸವ ಆಚರಣೆ ವೇಳೆ ಅಂಬೇಡ್ಕರ್ ಭಾವಚಿತ್ರವನ್ನು ಹೊರತೆಗೆದರೆ ಧ್ವಜಾರೋಹಣ ಮಾಡುವುದಾಗಿ ಆದೇಶಿಸಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಹೇಳಿಕೆ ಖಂಡನೀಯ ಎಂದು ತುಮಕೂರು ಜಿಲ್ಲೆಯ ವಿವಿಧ ದಲಿತ ಪರ ಸಂಘಟನೆ ಗಳು ಪ್ರತಿಭಟನೆ ನಡೆಸಿದವು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು ಕೂಡಲೇ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ರಾಯಚೂರು ಜಿಲ್ಲೆಯ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಿ ಗಡಿಪಾರು ಮಾಡಬೇಕೆಂದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು. ಪ್ರತಿಭಟನಾ ಸ್ಥಳಕ್ಕೆ ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆಗಮಿಸಿ ಪ್ರತಿಭಟನಾ ಕಾರರ ಮನವಿಯನ್ನು ಸ್ವೀಕರಿಸಿ ಮುಂದಿನ ಕ್ರಮದ ಬಗ್ಗೆ ಭರವಸೆ ನೀಡಿದರು.
ಈ ನಡುವೆ ಹೋರಾಟಗಾರ ಪಾವಗಡ ಶ್ರೀರಾಮ್ ಮಾತನಾಡಿ ಸಂವಿಧಾನ ಆಶಯಗಳಡಿ ನ್ಯಾಯಾಧೀಶ ಸ್ಥಾನಕ್ಕೇರಿರುವ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಅವರು ನೀಡಿದ ಸ್ವಾತಂತ್ರ‍್ಯದಿಂದಲೇ ಆದರೆ ಅದನ್ನು ಮರೆತು ರಾಷ್ಟ್ರೀಯ ಹಬ್ಬದಲ್ಲಿ ಅಂಬೇಡ್ಕರ್ ಪೋಟೋ ತೆಗೆಯಲು ಹೇಳಿರಿವುದು ಖಂಡನೀಯ ದಲಿತ ವಿರೋಧಿಯಾದ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ವಿರೋಧಿ ಯಾಗಿದ್ದಾನೆ ಎಂದರು. ಅಂಬೇಡ್ಕರ್ ಅವರ ಬರೆದ ಸಂವಿಧಾನದಡಿಯಲ್ಲಿ ಓದಿ ನ್ಯಾಯಾಧೀಶನಾಗಿ ಇಂದು ಉಂಡ ಮನೆಗೆ ದ್ರೋಹ ಮಾಡಿದ್ದಾರೆ ಆದ್ದರಿಂದ ಘನವೆತ್ತ ಉಚ್ಚ ನ್ಯಾಯಾಲಯ, ಮುಖ್ಯ ನ್ಯಾಯಾಧೀಶರು ಕೂಡಲೇ ಅವರನ್ನು ನ್ಯಾಯಾಧೀಶರ ಸೇವೆಯಿಂದ ವಜಾಗೊಳಿಸಿ ಗಡಿಪಾರು ಮಾಡಿ ರಾಜ್ಯದಲ್ಲಿ ಈ ರೀತಿಯಾಗಿ ಅಂಬೇಡ್ಕರ್ ಅವರಿಗೆ ಅವಮಾನ ವೆಸಗಿದ್ದ ದ್ರೋಹಿಗಳಿಗೆ ಶಿಕ್ಷೆಯಾಗಬೇಕು ಎಂದರು. ಈ ವೇಳೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ ರಾಯಚೂರು ಜಿಲ್ಲೆಯ ನ್ಯಾಯಾಧೀಶರು ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ ಅಪಮಾನ ಮಾಡಿದ್ದಾರೆ. ಕೂಡಲೇ ರಾಷ್ಟ್ರಪತಿಗಳಲ್ಲಿ ಮನವಿ ಮಾಡುವುದೆನೆಂದರೆ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಿ ಗಡಿಪಾರು ಮಾಡಬೇಕು ಎಂದರು. ಪ್ರತಿಭಟನೆ ವೇಳೆ ಮಾದಿಗ ದಂಡೋರದ ಕುಮಾರ್, ಛಲವಾದಿ ಸಮುದಾಯದ ಮುಖಂಡ ಸಿ.ಭಾನುಪ್ರಕಾಶ್, ದಲಿತ ಮುಖಂಡ ಕೋರ ರಾಜು, ಛಲವಾದಿ ಶೇಖರ್, ಜಯಣ್ಣ, ಆಟೋ ಶಿವರಾಜು, ಕೋಡಿಯಾಲ ಮಹಾದೇವ್, ರಾಜಣ್ಣ ,ರತ್ನಮ್ಮ, ಕೆ.ಸಿ ಗೋಪಾಲ್, ಜಗದೀಶ್ ,ಸುಮನ್, ರಾಮಮೂರ್ತಿ ಹೆಚ್ ಆರ್ ,ರಾಮಯ್ಯ ಟಿ.ಸಿ, ಗ್ರಾಮ ಪಂಚಾಯತ್ ಸದಸ್ಯ ರಂಗಸ್ವಾಮಿ ಸೇರಿದಂತೆ ಹಲವು ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.