ಚಿಕ್ಕನಾಯಕನಹಳ್ಳಿ

ಕನ್ನಡ ಧ್ವಜ ಸುಟ್ಟಿರುವುದನ್ನು ಖಂಡಿಸಿ ಕರವೇ ಪ್ರತಿಭಟನೆ

ಹುಳಿಯಾರು: ಕನ್ನಡ ಧ್ವಜ ಸುಟ್ಟಿರುವ ಕನ್ನಡ ವಿರೋಧಿಗಳನ್ನು ಕೂಡಲೆ ಬಂಧಿಸಿ ಅವರ ಕೈ ಕತ್ತರಿಸುವಂತ ಉಗ್ರ ಶಿಕ್ಷೆ ನೀಡಬೇಕು ಎಂದು ಕರವೇ ಅಧ್ಯಕ್ಷ ಕೋಳಿ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ದುರುದ್ದೇಶಪೂರ್ವಕವಾಗಿ ಮಹಾಮೇಳಾವ ನಡೆಸಿರುವುದು ಮತ್ತು ಕೊಲ್ಹಾಪುರದಲ್ಲಿ ಕನ್ನಡ ಬಾವುಟವನ್ನು ಸುಟ್ಟು ಹಾಕಿರುವ ಘಟನೆಯನ್ನು ಖಂಡಿಸಿ ಹುಳಿಯಾರಿನಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ಹಾಗೂ ಬೆಳಗಾವಿ ಅಧಿವೇಶನ ನಡೆಯುವ ವೇಳೆಯಲ್ಲಿ ಮಹಾರಾಷ್ಟ್ರದ ಶಿವಸೇನೆ ಮತ್ತು ಎಂಇಎಸ್ ಸಂಘಟನೆಗಳು ಕಪ್ಟು ಪಟ್ಟಿ ಧರಿಸಿ, ಪ್ರತಿಭಟನೆ ಮಾಡುವ ಮೂಲಕ ನಾಡಿಗೆ ಅವಮಾನ ಮಾಡುವುದು. ಕನ್ನಡದ ನಾಮಫಲಕಗಳ ಧ್ವಂಸ ಜೊತೆಗೆ ಧೀಮಂತ ನಾಯಕರಿಗೆ ಮತ್ತು ಕವಿಗಳಿಗೆ ಅವಮಾನ ಮಾಡುವುದು. ನಿರಂತರವಾಗಿ ಕನ್ನಡಿಗರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಈವರೆಗೂ ನಡೆಯುತ್ತಲೇ ಇವೆ. ಈ ಕುರಿತು ಹಲವು ಬಾರಿ ಹೋರಾಟ ನಡೆಸಿದರೂ, ಮಹಾರಾಷ್ಟ್ರ ಸರ್ಕಾರ ಹಾಗೂ ಶಿವಸೇನೆ, ಎಂಇಎಸ್ ಸಂಘಟನೆಗಳು ತಮ್ಮನ್ನು ಸುಧಾರಿಸಿಕೊಂಡಿಲ್ಲ. ಪದೇ ಪದೇ ಇಂತಹ ಹೇಯ್ಯಕೃತ್ಯಗಳು ಮರುಕಳಿಸುತ್ತಿದ್ದು, ಕನ್ನಡಿಗರ ತಾಳ್ಮೆಯನ್ನು ಪರೀಕ್ಷೆ ಮಾಡುವಂತೆ ಕಾಣುತ್ತಿದೆ ಎಂದರು.
ಕನ್ನಡ ನಾಡಿನ ಮಲೆ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಎಂಇಎಸ್ ಮುಖಂಡರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮಿನಾಮೇಷ ಎಣಿಸಬಾರದು ಎಂದು ಆಗ್ರಹಿಸಿದರಲ್ಲದೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಆದರೂ ಎಂಇಎಸ್‌ನವರು ಪದೇ ಪದೇ ಖ್ಯಾತೆ ತೆಗೆಯುತ್ತಲೇ ಇದ್ದಾರೆ. ಇಂಥವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ಬಾರಿ ತಕ್ಕ ಉತ್ತರ ನೀಡಿದರೂ ಅವರಿಗೆ ಬುದ್ಧಿ ಬಂದಿಲ್ಲ. ಇದು ಹೀಗೆಯೇ ಮುಂದುವರೆದರೆ ನಾರಾಯಣಗೌಡರ ನೇತೃತ್ವದಲ್ಲಿ ಕನ್ನಡಿಗರ ಬೆಳಗಾವಿ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿನಿಮಾ ಕಲಾವಿದ ಗೌಡಿ ಅವರು ಮಾತನಾಡಿ ಪ್ರಚೋದನಕಾರಿ ಭಾಷಣ, ಹೇಳಿಕೆ ನೀಡುವ ಮೂಲಕ ಎಂಇಎಸ್ ಸಂಘಟನೆ ದ್ವೇಷದ ಬೀಜ ಬಿತ್ತುವ ಮೂಲಕ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದೆ. ಮರಾಠಿಗರನ್ನು ದಿಕ್ಕುತಪ್ಪಿಸುವುದಲ್ಲದೆ ಕರ್ನಾಟಕದಲ್ಲಿನ ಶಾಂತಿ, ನೆಮ್ಮದಿಗೆ, ವಿವಿಧ ಸಮುದಾಯಗಳ ಮಧ್ಯದ ಬಾಂಧವ್ಯಕ್ಕೆ ಧಕ್ಕೆ ತರುತ್ತಿದೆ. ಈ ಹಿಂದೆ ರಾಜ್ಯೋತ್ಸವದ ವೇಳೆ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಬಾವುಟ ಹಾರಿಸಲು ಬಿಡದೆ ಕಿತಾಪತಿ ಮಾಡಿದ್ದರು. ಈಗ ನಡು ರಸ್ತೆಯಲ್ಲಿ ಕನ್ನಡ ಧ್ವಜವನ್ನು ಸುಟ್ಟಿದ್ದಾರೆ. ಇಂತಹವರನ್ನು ಸುಮ್ಮನೆ ಬಿಟ್ಟರೆ ಮುಂದೆ ನಾಡಿನ ಆಕ್ರಮಣಕ್ಕೆ ಮುಂದಾಗುತ್ತಾರೆ. ಹಾಗಾಗಿ ರಾಜ್ಯದಲ್ಲಿ ನಾಡದ್ರೋಹಿ ಕೃತ್ಯವನ್ನು ಪ್ರಚೋದಿಸುತ್ತಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿದರು.
ಕರವೇ ಗೌರವ ಅಧ್ಯಕ್ಷ ಕ್ಯಾಸೆಟ್‌ರಂಗಸ್ವಾಮಿ, ಮೆಡಿಕಲ್ ಚನ್ನಬಸವಯ್ಯ, ಬೇಕರಿ ಪ್ರಕಾಶ್, ಮಂಜುನಾಥ್, ಬಸವರಾಜು, ಗಣೇಶ್, ಸಂತೋಷ್ ಮತ್ತಿತರರು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker