ಕುಡುಕರ ಅಡ್ಡೆಯಾದ ಮಡೇನಹಳ್ಳಿ ಸರ್ಕಾರಿ ಶಾಲೆ, ಶಾಲಾವರಣ ಸ್ವಚ್ಛಗೊಳಿಸಲು ಮುಖ್ಯೋಪಾಧ್ಯಯರ ನಿರ್ಲಕ್ಷ್ಯ…?
ಗುಬ್ಬಿ : ಶಾಲೆಯುದ್ದಕ್ಕೂ ಬೆಳೆದು ನಿಂತ ಗಿಡ ಗಂಟಿ ಪೊದೆಗಳು ಸ್ವಚ್ಛತೆ ಮರೀಚೀಕೆಯಾಗಿ ಶಾಲಾ ಆವರಣ ನಿತ್ಯ ಕುಡುಕರ ಅಡ್ಡೆಯಾಗಿ ಪರಿಣಮಿಸಿ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು.
ಮಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಾಲಾ ಮುಖ್ಯೋಪಾದ್ಯರ ನಿರ್ಲಕ್ಷದಿಂದ ಸ್ವಚ್ಛತೆ ಮರಿಚೀಕೆಯಾಗಿದ್ದು ಶಾಲಾ ಆವರಣದ ಸುತ್ತಲೂ ಶಾಲೆಗೆ ಹೊಂದಿಕೊಂಡಂತೆ ಹೆಮ್ಮರವಾಗಿ ಬೆಳೆದು ನಿಂತಿರುವ ಬೇಲಿ ಗಿಡ ಗಂಟೆಗಳ ನಡುವೆ ಜೀವ ಭಯದಲ್ಲಿ ವಿದ್ಯಾರ್ಥಿಗಳು ವಿಧಿ ಇಲ್ಲದೆ ವ್ಯಾಸಂಗದಲ್ಲಿ ತೊಡಗಿದ್ದು ಎಲ್ಲವನ್ನು ಅರಿತ ಶಾಲಾ ಆಡಳಿತ ಮಂಡಳಿ ಕ್ಯಾರೆ ಎನ್ನದೇ ಕೇವಲ ನಾಮಕಾವಸ್ಥೆಗಷ್ಟೇ ಪಾಠ ಪ್ರವಚನ ನಡೆಯುತ್ತಿರುವುದು ದುಸ್ತರವಾಗಿದೆ.
ಮಾದರಿ ಸರ್ಕಾರಿ ಶಾಲೆಯಾಗಬೇಕಾದ ಮಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 89 ಮಕ್ಕಳು ವಿದ್ಯಾಬ್ಯಾಸದಲ್ಲಿ ತೊಡಗಿದ್ದು ಪ್ರಸ್ತುತ ದಿನಗಳಲ್ಲಿ ಈ ಶಾಲೆ ಅಳಿವಿನ ಅಂಚಿಗೆ ಸಾಗುತ್ತಿರುವುದು ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಶಾಲಾ ಆಡಳಿತ ಮಂಡಳಿಯ ದಿವ್ಯ ನಿರ್ಲಕ್ಷ್ಯ ಎಂಬುದು ಹಳೆ ವಿದ್ಯಾರ್ಥಿಗಳ ಬೇಸರದ ನುಡಿಯಾಗಿದೆ.
ಕುಡುಕರ ಅಡ್ಡೆಯಾದ ಶಾಲಾ ಆವರಣ:- ನಿತ್ಯ ಸಂಜೆಯಾದರೆ ಮದ್ಯ ವ್ಯಸನಿಗಳ ಅಡ್ಡವಾಗಿ ಪರಿಣಮಿಸುವ ಶಾಲಾ ಆಟದ ಮೈದಾನ ಕುಡುಕರ ಅವಾಸಸ್ಥಾನವಾಗಿರುವುದು ದುರಂತ.
ಇಲ್ಲಿನ ಸರ್ಕಾರಿ ಶಾಲೆಯು ಕ್ರೀಡಾ ಚಟುವಟಿಕೆ ಹಾಗೂ ವಿದ್ಯಾರ್ಥಿಗಳ ವ್ಯಾಸಂಗದಲ್ಲಿ ಈ ಹಿಂದೆ ಪ್ರಥಮ ಸ್ಥಾನ ಪಡೆಯುತ್ತಿತ್ತು ಆದರೆ ಇತ್ತೀಚೆಗೆ ಊರಿನಲ್ಲಿ ಶಾಲೆ ಇದೆಯೋ ಇಲ್ಲವೋ ಎಂಬ ಸ್ಥಿತಿಗೆ ಬಂದು ತಲುಪಿದೆ.ಜೊತೆಗೆ ಈ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಕುಟುಂಬಸ್ಥರ ಮಕ್ಕಳು ಮಾತ್ರ ದಾಖಲಾಗಿದ್ದು ಸ್ಥಿತಿವಂತರ ಮಕ್ಕಳು ಪಟ್ಟಣದ ಖಾಸಗಿ ಶಾಲೆಗಳನ್ನು ಅವಲಂಬಿಸಿರುವುದು ಬಡ ಮಕ್ಕಳಿಗೆ ಸರ್ಕಾರಿ ಶಾಲೆಯೇ ಗತಿಯಾಗಿದೆ ಎಂಬುದು ವಾಸ್ತವಾಗಿದೆ.
ಶಾಲಾ ಮಕ್ಕಳ ಆಟದ ಮೈದಾನ ಅಡಿಕೆ ಬೆಳೆಗಾರರ ಸ್ವಂತಿಕೆಗೆ ಬಳಕೆ:- ಹೌದು ಇಲ್ಲಿನ ಸರ್ಕಾರಿ ಶಾಲೆಯ ಆಟದ ಮೈದಾನ ನಿತ್ಯ ಹಲವು ಅಡಿಕೆ ಬೆಳೆಗಾರರ ಬಳಕೆಗೆ ಸೀಮಿತವಾಗಿ ಮಕ್ಕಳ ಆಟೋಪಚಾರಕ್ಕೆ ನೆಲೆ ಇಲ್ಲದಾಗಿದೆ ಕಾರಣ ಇಲ್ಲಿನ ಶಾಲಾ ಮುಖ್ಯೋಪಾಧ್ಯಯರ ಮತ್ತು ಸ್ಥಳೀಯರ ಹೊಂದಾಣಿಕೆಯ ನಡುವೆ ಮಕ್ಕಳು ಹೈರಾಣಾಗುತ್ತಿದ್ದು ಹಲವು ಬಾರಿ ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೆಲವು ಪೋಷಕರು ದೂರು ನೀಡಿದರೂ ಪ್ರಯೋಜನ ವಾಗದಿರುವುದು ಮತ್ತೊಂದು ದುರಂತದ ಸಂಗತಿಯಾಗಿದೆ.
ಸಂಬಂಧಪಟ್ಟ ಮೇಲಾಧಿಕಾರಿಗಳು ಇಲ್ಲಿನ ವಾಸ್ತವ ಸ್ಥಿತಿಯನ್ನು ಖುದ್ದು ಭೇಟಿ ನೀಡಿ ವಾಸ್ತವ ಸ್ಥಿತಿಯಲ್ಲಿ ಅರಿತು ಸರ್ಕಾರಿ ಶಾಲೆಯನ್ನು ಉಳಿಸಬೇಕೆಂಬುದು ಇಲ್ಲಿನ ವಿದ್ಯಾರ್ಥಿಗಳ ಪೋಷಕರ ಆಶಯವಾಗಿದೆ.