ಮಣೆಚಂಡೂರು ಗ್ರಾ.ಪಂ.ನೂತನ ಉಪಾದ್ಯಕ್ಷರಾಗಿ ಸೈಯ್ಯದ್‌ಯೂನಿಸ್ ಆಯ್ಕೆ
ತುರುವೇಕೆರೆ: ತಾಲೂಕಿನ ಮಣೆಚಂಡೂರು ಗ್ರಾಮ ಪಂಚಾಯಿತಿ ನೂತನ ಉಪಾದ್ಯಕ್ಷರಾಗಿ ಸೈಯ್ಯದ್ ಯೂನಿಸ್ ಅವಿರೋಧವಾಗಿ ಆಯ್ಕೆಯಾದರು.
ಮಣೆಚಂಡೂರು ಗ್ರಾ.ಪಂ.ನ ಉಪಾದ್ಯಕ್ಷರಾಗಿದ್ದ ಲಕ್ಷö್ಮಮ್ಮರಮೇಶ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನೆಡೆಯಿತು. 14 ಸದಸ್ಯ ಬಲವುಳ್ಳ ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಸೈಯ್ಯದ್ ಯೂನಿಸ್ ನಾಮಪತ್ರ ಸಲ್ಲಿಸಿದ್ದರು ಉಳಿದ ಯಾವ ಸದಸ್ಯರು ನಾಮ ಪತ್ರ ಸಲ್ಲಿಸಿರಲಿಲ್ಲ. ಅಂತಿಮವಾಗಿ ಸೈಯ್ಯದ್ ಯೂನಿಸ್ ಕಣದಲಲಿ ಏಕೈಕರಾಗಿ ಉಳಿದರು. ಅಂತಿಮವಾಗಿ ಚುನಾವಣಾದಿಕಾರಿಗಳಾದ ತಹಶೀಲ್ದಾರ್ ನಯೀಮುನ್ನಿಸ್ಸಾ ಸೈಯ್ಯದ್ ಯೂನಿಸ್ ರವರು ಅವಿರೋಧವಾಗಿ ಉಪಾದ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.
ನೂತನ ಉಪಾದ್ಯಕ್ಷ ಸೈಯ್ಯದ್ ಯೂನಿಸ್ ಮಾತನಾಡಿ ನಾನು ಉಪಾದ್ಯಕ್ಷನಾಗಿ ಆಯ್ಕೆಯಾಗಕಲು ಸಹಕರಿಸಿದ ಎಲ್ಲಾ ಸದಸ್ಯರುಗಳಿಗೂ ಹಾಗೂ ಹಿತೈಷಿಗಳಿಗೂ ಕೃತಜ್ಞತೆ ಸಮರ್ಪಿಸುತ್ತೇನೆ. ಮುಂಬರುವ ದಿನಗಳಲ್ಲಿ ಸರ್ವ ಸದಸ್ಯರ ಹಾಗೂ ಅಧ್ಯಕ್ಷರ ಸಹಕಾರದೊಂದಿಗೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳೀಗೆ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡುತ್ತೇನೆ ಎಂದರು.
ನೂತನ ಉಪಾದ್ಯಕ್ಷರನ್ನು ಅಧ್ಯಕ್ಷರಾದ ಲಕ್ಷ್ಮೀ ಲಕ್ಕಣ್ಣಗೌಡ, ನಿಕಟಪೂರ್ವ ಉಪಾದ್ಯಕ್ಷರಾದ ಲಕ್ಷ್ಮಮ್ಮರಮೇಶ್, ಗ್ರಾ.ಪಂ. ಸದಸ್ಯರಾದ ಮುಕುಂದ,ಯಶೋಧ, ಶ್ರೀನಿವಾಸ್ ಸೇರಿದಂತೆ ಅನೇಕರು ಅಭಿನಂದಿಸಿ ಶುಭ ಕೋರಿದರು.