ಮಾವತ್ತೂರು ಕೆರೆಗೆ ಕಸ ತಾಜ್ಯದ ನೀರು ಬಾರದಂತೆ ತಡೆಯಲು ಅಗತ್ಯ ಕ್ರಮ : ಡಾ.ಜಿ.ಪರಮೇಶ್ವರ್
ಕೊರಟಗೆರೆ: ತಾಲ್ಲೂಕಿನ ಮಾವತ್ತೂರು ಕೆರೆಗೆ ಕಸ ತಾಜ್ಯದ ನೀರು ಬಾರದಂತೆ ತಡೆಯಲು ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಲಾಗಿದ್ದು ದೊಡ್ಡಬಳ್ಳಾಪುರ ಶಾಸಕರಿಗೂ ಈ ಬಗ್ಗೆ ಕ್ರಮ ವಹಿಸುವಂತೆ ತಿಳಿಸಲಾಗಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ತಾಲ್ಲೂಕಿನ ಕೋಳಾಲ ಹೋಬಳಿಯ ಮಾವತ್ತೂರು ಕೆರೆಗೆ ಭೇಟಿನೀಡಿ ಪತ್ರಕರ್ತರೊಂದಿಗೆ ಮಾತನಾಡಿ ಮಾವತ್ತೂರು ಕೆರೆಗೆ ದೋಡ್ಡಬಳ್ಳಾಪರ ಗಡಿ ಗ್ರಾಮದ ಬೆಂಗಳೂರು ನಗರದಿಂದ ಬರುವ ಕಸದ ವಿಲೆವಾರಿ ಘಟಕದ ತಾಜ್ಯದ ನೀರು ಬರುತ್ತಿರುವ ಬಗ್ಗೆ ವಿಷಯ ತಿಳಿದು ಸಂಬಂಧ ಪಟ್ಟ ಅಧಿಕಾರಿಗಳಿಂದ ಪೂರ್ಣವರದಿಯನ್ನು ತರೆಸಿಕೊಳ್ಳಲಾಗಿದೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ತುಮಕೂರು ಜಿಲ್ಲಾಧಿಕಾರಿಗಳ ಬಳಿ ಚರ್ಚಿಲಾಗಿದ್ದು, ಮೊದಲು ಕಸವಿಲೆವಾರಿ ಘಟಕದಿಂದ ತಾಜ್ಯದ ನೀರನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಇಬ್ಬರು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ, ಮುಂಬರುವ ದಿನಗಳಲ್ಲಿ ಕಸ ವಿಲೇವಾರಿ ಘಟಕವನ್ನು ಸ್ಥಳಾಂತರಿಸುವ ಬಗ್ಗೆ ಸರ್ಕಾರಕ್ಕೆ ಒತ್ತಡ ಹಾಕಲಾಗುವುದು, ಈ ಬಗ್ಗೆ ಪಕ್ಕದ ಶಾಸಕರಾದ ವೆಂಕಟರವಣಪ್ಪನವರ ಬಳಿಯು ಚರ್ಚಿಸಲಾಗಿದ್ದು ಅರು ಕೂಡ ಕಸವಿಲೆವಾರಿ ಘಟಕನ್ನು ಸ್ಥಳಾಂತರಲು ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ, ಸದ್ಯಕ್ಕೆ ತಾಜ್ಯದ ನೀರು ತಂತ್ರಜ್ಞಾನ ಬಳಿಸಿ ಕೆರೆಗೆ ಬರುವುದನ್ನು ತಡೆಯುಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಈ ಬಗ್ಗೆ ರೈತರು ಆತಂಕ ಪಡಬೇಕಿಲ್ಲ ಎಂದರು.
ದೊಡ್ಡಬಳ್ಳಾಪುರ ಗಡಿ ಗ್ರಾಮದ ಕಸ ತಾಜ್ಯವಿಲೆವಾರಿ ಘಟಕ ಸ್ಥಳಾಂತರಕ್ಕೆ ಮೊದಲು ಸರ್ಕಾರದ ಆಂತದಲ್ಲಿ ಪ್ರಯತ್ನಿಸಲಾಗುವುದು ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದಲ್ಲಿ ಇದರ ವಿರುದ್ದ ಸ್ಥಳೀಯ ರೈತರು ಹೋರಾಟಗಾರರು ಸ್ವಾಮೀಜಿಗಳ ಜೊತೆಗೂಡಿ ಹೋರಾಟ ಮಾಡಲಾಗುವುದು, ಕ್ಷೇತ್ರದ ರೈತರ ಜನರ ಹಿತಕ್ಕೆ ಸದಾ ಬದ್ದವಿದ್ದು ಇದಕ್ಕಾಗಿ ಎಂತಹ ಹೋರಾಟಕ್ಕೂ ಸಿದ್ದವಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪಕ್ಷ ಮುಖಂಡರು ಗ್ರಾಮಸ್ಥರು ಹಾಜರಿದ್ದರು.