ಕೊರಟಗೆರೆ

ರಾಜೇಂದ್ರ ಗೆಲುವಿಗೆ ಪಕ್ಷದ ಎಲ್ಲರೂ ಒಂದಾಗಿ ಶ್ರಮಿಸಬೇಕಿದೆ : ಡಾ.ಜಿ.ಪರಮೇಶ್ವರ್

ಕೊರಟಗೆರೆ: ತುಮಕೂರು ವಿಧಾನಪರಿಷತ್ ಚುನಾವಣಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜೇಂದ್ರರಾಜಣ್ಣ ಸ್ಥಳೀಯರು ಜನಸಂಕರ್ಪದ ಸಮಾಜಿಕ ಸೇವೆಯ ಯುವಕರಾಗಿದ್ದು ಪಕ್ಷ ಒಮ್ಮತದ ಅಭ್ಯರ್ಥಿಯಾದ ಅವರ ಗೆಲುವಿಗೆ ಪಕ್ಷದ ಎಲ್ಲರೂ ಒಂದಾಗಿ ಶ್ರಮಿಸಬೇಕಿದೆ ಎಂದು ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ಪಟ್ಟಣದ ಹೊರವಲಯದಲ್ಲಿ ವಿಧಾನಪರಿಷತ್ ಚುನಾವಣಾ ಪ್ರಚಾರದ ಸಭೆಯಲ್ಲಿ ಪಕ್ಷದ ಕ್ಷೇತ್ರದ ಮುಖಂಡರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ವಿಧಾನ ಪರಿಷತ್ ಚನಾವಣೆಯಲ್ಲಿ ರಾಜೇಂದ್ರ ರವರನ್ನು ಅಭ್ಯರ್ಥಿ ಮಾಡಲು ನಾನು ಕೂಡ ಶ್ರಮ ಕಾಳಜಿ ವಹಿಸಿದ್ದೇನೆ. ಈಗ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮಗಳ ಮೇಲಿದೆ ಕೊರಟಗೆರೆ ಕ್ಷೇತ್ರ ಅತಿ ಹೆಚ್ಚು ಮತಗಳ ಮುನ್ನಡೆಯನ್ನು ರಾಜೇಂದ್ರರವರಿಗೆ ನೀಡಿದರೆ ಶಾಸಕನಾದ ನನಗೆ ಬೆಂಬಲಿಸಿದಂತೆ ಎಂದರು. ನಾನು ಉಪಮುಖ್ಯಮಂತ್ರಿ ಗೃಹ ಸಚಿವ ಮತ್ತು ಶಾಸಕನಾಗಿ ಕ್ಷೇತ್ರಕ್ಕೆ ಹಲವು ಅಭಿವೃದಿ ಜನಪರ ಜನಸ್ಪಂದನೆ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ, ಕ್ಷೇತ್ರದಲ್ಲಿ ಪಕ್ಷ ಹೆಚ್ಚು ಗ್ರಾಮಪಂಚಾಯತಿ ಸದಸ್ಯರು ಗೆದ್ದಿದ್ದಾರೆ ಜಿಲ್ಲೆಯ ಪಕ್ಷ ಎಲ್ಲಾ ನಾಯಕರು ಒಟ್ಟಾಗಿ ಶ್ರಮಿಸುತ್ತೇವೆ, ನಮ್ಮ ಪಕ್ಷದ ಅಭ್ಯರ್ಥಿ ಇತರ ಅಭ್ಯರ್ಥಿಗಳಿಗಿಂತ ಉತ್ತಮವಾಗಿದ್ದಾರೆ, ಸಾರ್ವಜನಿಕ ಸಂಪರ್ಕದಲ್ಲಿದ್ದಾರೆ ಅವರ ತಂದೆ ಕೆ,ಎನ್.ರಾಜಣ್ಣ ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ರಾಜೇಂದ್ರ ವಿಧಾನಪರಿಷತ್ ಆಭ್ಯರ್ಥಿಯಾದರೆ ತುಮಕೂರು ಜಿಲ್ಲೆಯ ಜನರಿಗೆ ಉತ್ತಮ ಸೇವೆ ದೊರೆಯಲಿದೆ ಎಂದರು.
ಕಾಂಗ್ರೆಸ್ ಪಕ್ಷ ಜನಪರ ಕಾರ್ಯಕ್ರಮ ಗ್ರಾಮಪಂಚಾಯತಿ ಅಭಿವೃದಿಗೆ ಸಮಾನನ್ಯಾಯದ ಮಹಿಳಾ ಮೀಸಲಾತಿ ನೀಡದೆ, ಬಡವರಿಗೆೆ ಗ್ರಾಮಗಳಲ್ಲಿ ನರೆಗಾಯೋಜನೆ ನೀಡಿ ನಿರುದ್ಯೋಗ ನಿವಾರಣೆಯಲ್ಲಿ ನೀಡಿದೆ ಇದರಿಂದ ನಮ್ಮ ಪಕ್ಷ ಅಭ್ಯರ್ಥಿ ಗೆಲುವು ಖಚಿತ,ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಡಿಸೆಂಬರ್ 7 ಮಂಗಳವಾರ ಮತ್ತು 8 ಬುಧವಾರದ ಎರಡು ದಿನಗಳ ಕಾಲ ಪ್ರತಿ ಗ್ರಾಮ ಪಂಚಾಯತಿಗೂ ಭೇಟಿ ನೀಡಿ ಸದಸ್ಯರಿಂದ ಮತಯಾಚನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ರಾಮಕೃಷ್ಣ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವಥನಾರಾಯಣ ಅರೆಕೆರೆಶಂಕರ್ ತೆಂಗುನಾರು ಅಭಿವೃಧಿ ನಿಗಮ ಮಾಜಿ ಅದ್ಯಕ್ಷ ವೆಂಕಟಾಚಲಯ್ಯ ತುಮುಲ್ ಅದ್ಯಕ್ಷ ಈಶ್ವರಯ್ಯ ಪಿಎಲ್‌ಡಿ ಬ್ಯಾಂಕ್ ಅದ್ಯಕ್ಷ ಪುಟ್ಟನರಸಯ್ಯ ಪ.ಪಂ ಸದಸ್ಯರಾದ ಎ.ಡಿ.ಬಲರಾಮಯ್ಯ ಕೆ.ಅರ್.ಓಬಳರಾಜು ನಂದೀಶ್ ಮಾಜಿ ಅದ್ಯಕ್ಷ ಸೈಯದ್‌ಸೈಪುಲ್ಲಾ ಉಪಾದಕ್ಷ ಕೆ.ವಿ.ಮಂಜುನಾಥ ಮುಖಂಡರಾದ ಕೊಳಾಲವೆಂಕಟೇಶ್ ವಾಲೆಚ್ರಂದ್ರಯ್ಯ ಎಲ್.ರಾಜಣ್ಣ ಜಯರಾಮ್ ಸಿದ್ದಲಿಂಗಪ್ಪ ಗಣೇಶ್ ಗೊಂದಿಹಳ್ಳಿರಂಗರಾಜು ಕಿರಣ್ ನವೀನ್ ಸೇರಿದಂತೆ ಇತರರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker