ಜಿಲ್ಲೆತುಮಕೂರುಶಿರಾ

ಕೇಂದ್ರ ಹಾಗೂ ರಾಜ್ಯ ಸರಕಾರಗಳ ದುರಾಡಳಿತದಿಂದ ಜನಸಾಮಾನ್ಯರು ನೆಮ್ಮದಿಯಾಗಿಲ್ಲ : ಕೆ.ಹೆಚ್.ಮುನಿಯಪ್ಪ

ಶಿರಾ : ಕೇಂದ್ರ ಹಾಗೂ ರಾಜ್ಯಗಳ ದುರಾಡಳಿತದಿಂದ ಸಾಮಾನ್ಯಜನರು ನೆಮ್ಮದಿಯಾಗಿಲ್ಲ. ಆದ್ದರಿಂದ ಇಂತಹ ಕೆಟ್ಟ ಸರಕಾರಗಳಿಗೆ ಬುದ್ಧಿ ಕಲಿಸಲು ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.
ಅವರು ನಗರದ ಕಲ್ಯಾಣ ಮಂಟಪದಲ್ಲಿ ಮಂಗಳವಾರ ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಅವರ ಪರ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ 25 ಅಭ್ಯರ್ಥಿಗಳು ಗೆಲ್ಲಬೇಕು ಈ ಚುನಾವಣೆಯ ಫಲಿತಾಂಶದ ಮೂಲಕ ಬಿಜೆಪಿ ಸರಕಾರಗಳಿಗೆ ಸ್ಪಷ್ಟ ಸಂದೇಶ ನೀಡಬೇಕು ಎಂದರು.
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ಬೆಲೆ ಏರಿಕೆ, ಶೋಷಣೆ, ಭ್ರಷ್ಟಾಚಾರದಲ್ಲಿ ಬಿಜೆಪಿ ಸರಕಾರ ಮುಳುಗಿದೆ. ನಮ್ಮ ಸರಕಾರ ಇದ್ದಾಗ 13 ಲಕ್ಷ ಮನೆಗಳನ್ನು ನೀಡಿದ್ದೆವು. ಬಿಜೆಪಿ ಸರಕಾರದಲ್ಲಿ ಹೊಸ ಮನೆಗಳಿರಲಿ, ನಮ್ಮ ಕಾಲದ ಮನೆಗಳ ಬಿಲ್ ನೀಡಿದರೆ ಸಾಕು ಎನ್ನುವಂತಾಗಿದೆ. ನಮ್ಮ ಸಮ್ಮಿಶ್ರ ಸರಕಾರದ ಕಾಲದಲ್ಲಿ ಬಿಡುಗಡೆಯಾಗಿದ್ದ ಹಲವಾರು ಅನುದಾನಗಳನ್ನು ವಾಪಸ್ ಪಡೆದಿದ್ದಾರೆ. ಪ್ರಸ್ತುತ ವಿಧಾನ ಪರಿಷತ್ ಚುನಾವಣೆ 2023ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಬೇಕು. ಕೆಟ್ಟ ಬಿಜೆಪಿಯನ್ನು ತೊಲಗಿಸಲು ನೀವು ಧ್ವನಿ ಆಗಬೇಕು. ರಾಜೇಂದ್ರಗೆ ಭವಿಷ್ಯ ಕಟ್ಟಿಕೊಡುವ ಮೂಲಕ ಕಾಂಗ್ರೆಸ್ ಬಲಪಡಿಸಿ ಎಂದು ಕರೆ ನೀಡಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಯಾವುದೇ ಬಿಲ್ ವಿಧಾನಸಭೆ ಅಥವಾ ಪಾರ್ಲಿಮೆಂಟ್‌ನಲ್ಲಿ ಬಿದ್ದು ಹೋದರೆ, ಸರಕಾರದ ಮುಖ್ಯಸ್ಥರು ರಾಜೀನಾಮೆ ನೀಡುವುದು ವಾಡಿಕೆ. ಕೃಷಿ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 700 ಮಂದಿ ರೈತರು ಅಸುನೀಗಿದ್ದಾರೆ. ಈಗ ಸರಕಾರ ಕೃಷಿ ಮಸೂದೆ ವಾಪಸ್ ಪಡೆಯುತ್ತೇವೆ ಎನ್ನುತ್ತಿದೆ. ಇದರ ನೈತಿಕ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಮಾತನಾಡಿ, ನಾನು ಶಿರಾ ತಾಲ್ಲೂಕಿನಲ್ಲಿ ಈವರೆವಿಗೆ ಪಕ್ಷಾತೀತ ಪ್ರಿತಿಯನ್ನು ಅನುಭವಿಸಿದ್ದೇನೆ. ಶಿರಾ ನನ್ನ ತಾಯಿಯ ತವರು ಮನೆ, ಹಾಗಾಗಿ ನಾನು ಶಿರಾದ ಮೊಮ್ಮಗನೇ ಅಗಿದ್ದೇನೆ. ನಿಮ್ಮನ್ನು ನೀವು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಪ್ರಾರ್ಥಿಸಿದರು.
ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಅನ್ಯ ಪಕ್ಷಗಳು ಹಣವಂತರನ್ನು ಕರೆತಂದು ಅಭ್ಯರ್ಥಿಗಳನ್ನಾಗಿ ಮಾಡುವ ಮೂಲಕ ಮೂಲ ಕಾರ್ಯಕರ್ತರನ್ನು ಕಡೆಗಣಿಸಿವೆ. ಹಣ ಇರುವವರು ಬಡವರ ಸೇವೆ ಮಾಡುತ್ತಾರೆಯೇ?ಎಂದು ಪ್ರತಿಪಕ್ಷಗಳ ಬಗ್ಗೆ ಮಾರ್ಮಿಕವಾಗಿ ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಶಿವಾಜಿ ನಗರದ ಶಾಸಕ ರಿಜ್ವಾಜ್ ಹರ್ಷದ್, ಮಾಜಿ ಶಾಸಕ ಷಫಿಅಹ್ಮದ್, ಷಡಕ್ಷರಿ, ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ, ಹನುಮಂತಪ್ಪ, ಕೆಂಚಮಾರಯ್ಯ, ಮಾಜಿ ನಗರಸಭಾ ಅಧ್ಯಕ್ಷ ಅಮಾನುಲ್ಲಾಖಾನ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ಕೋಡಿಹಳ್ಳಿ ಚಂದ್ರಶೇಖರ್, ಕಲ್ಕೆರೆರವಿಕುಮಾರ್, ಸಂತೋಶ್ ಜಯಚಂದ್ರ, ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಕೊಟ್ಟ ಶಂಕರ್, ಅಜಯಕುಮಾರ್, ಗುಳಿಗೇನಹಳ್ಳಿ ಆರ್.ನಾಗರಾಜು, ಶೇಷಾನಾಯ್ಕ, ಹಾರೋಗೆರೆ ಮಹೇಶ್, ರೂಪೇಶ್‌ಕೃಷ್ಣಯ್ಯ, ಭೂವನಹಳ್ಳಿ ಸತ್ಯನಾರಾಯಣ, ಶೇಷಾನಾಯ್ಕ, ಪಿ.ಆರ್.ಮಂಜುನಾಥ್, ಜಿ.ಎಸ್.ರವಿ, ಶಶಿಧರಗೌಡ, ಜಿ.ಎನ್.ಮೂರ್ತಿ, ಬರಗೂರು ನಟರಾಜು, ಮಹಿಳಾ ಘಟಕದ ಶೋಭಾ, ಮಂಜುಳಾಬಾಯಿ ಮೊದಲಾದವರುಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker