ಶಿಂಷಾ ನದಿಯ ರಭಸದ ನೀರಿಗೆ ಕೊಚ್ಚಿ ಹೋಗಿದ್ದ ನಾಲ್ವರಲ್ಲಿ ಇಬ್ಬರ ಮೃತದೇಹ ಪತ್ತೆ
ಕುಣಿಗಲ್ : ಶಿಂಶಾ ನದಿಯ ರಭಸದ ನೀರಿಗೆ ಭಾನುವಾರ ಕೊಚ್ಚಿ ಹೋಗಿದ್ದ 4 ಮಂದಿ ಯುವಕ ಯುವತಿಯರಲ್ಲಿ ಒಬ್ಬ ಯುವಕ ಹಾಗೂ ಒಬ್ಬ ಯುವತಿಯ ಮೃತದೇಹ ಸೋಮವಾರ ಪತ್ತೆಯಾಗಿದೆ.
ತಾಲ್ಲೂಕಿನ ಅಮೃತೂರು ಹೋಬಳಿ ಮಾರ್ಕೋನಹಳ್ಳಿ ಜಲಾಶಯದ ಆಟೋಮೆಟಿಕ್ ಸೈಫನ್ ನೀರು ಜಾಸ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಡ್ಯಾಂ ವೀಕ್ಷಣೆಗೆಂದು ಬಂದು ನೀರಿನಲ್ಲಿ ಆಟವಾಡಲು ಇಳಿದಿದ್ದ ಕುಣಿಗಲ್ ಪಟ್ಟಣದ ಇಬ್ಬರು ಮುಸ್ಲಿಂ ಹೆಣ್ಣು ಮಕ್ಕಳಾದ ಪರ್ವೀನ್ತಾಜ್, ಸಾದಿಕ್, ಹಾಗೂ ಸೆಲ್ಫೀ ತೆಗೆಯಲು ಹೋಗಿ ನೀರಿಗೆ ಕಾಲು ಜಾರಿ ಬಿದ್ದು ಯಡಿಯೂರು ಸಮೀಪದ ಬೀರಗಾನಹಳ್ಳಿ ಗ್ರಾಮದ ರಾಜು, ಅಪ್ಪು, ಇಬ್ಬರು ಯುವಕರು ನೀರಿನ ರಭಸಕ್ಕೆ ಸಿಕ್ಕಿ ಶಿಂಷಾ ನದಿಯಲ್ಲಿ ಕೊಚ್ಚಿ ಹೋಗಿದ್ದರು ಈ ಸಂಬಂಧ ಎಸ್ ಡಿಆರ್ ಎಫ್ ,ಎನ್ ಡಿಆರ್ ಎಫ್ಹಾಗೂ ಅಗ್ನಿಶಾಮಕ ಠಾಣೆಗಳಾದ ‘ನಾಗಮಂಗಲ, ಮಂಡ್ಯ, ಕುಣಿಗಲ್, ನಾ ಒಟ್ಟು ಅರುವತ್ತು ಮಂದಿ ಸಿಬ್ಬಂದಿಗಳು ಒಟ್ಟುಗೂಡಿಕೊಂಡು ಅರ್ಧ ಕಿಲೋ ಮೀಟರ್ ನೀರಿನಲ್ಲಿ ಕೊಚ್ಚಿಹೋಗಿದ್ದ ಮೃತದೇಹಗಳನ್ನು ಶೋಧ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಸೋಮವಾರ 1ಗಂಡು 1ಹೆಣ್ಣು ಮೃತದೇಹ ಪತ್ತೆಯಾಗಿವೆ ಸಂಜೆಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು ಮತ್ತೆ ಮಂಗಳವಾರ ಮತ್ತೆರಡು ಮೃತದೇಹಗಳನ್ನು ಹುಡುಕಲು ಕಾರ್ಯಾಚರಣೆಯನ್ನು ಕೈಗೊಳ್ಳುತ್ತಾರೆ ಇದನ್ನು ವೀಕ್ಷಿಸಲು ಸಾರ್ವಜನಿಕರ ದಂಡೇ ನೆರೆದಿತ್ತು.ಇದನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.