ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನ ಆಚರಣೆ
ತುಮಕೂರು : ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಅವರಣದಲ್ಲಿ ಸಂವಿಧಾನ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎಂ ಪಿ ಶಂಕರಪ್ಪನವರು ಮುಖ್ಯ ಅಥಿತಿಗಳಾಗಿ ಅಗಮಿಸಿ ಮಾತನಾಡುತ್ತಾ ಸ್ವಾತಂತ್ರ್ಯ ತಂದುಕೊಡುವಲ್ಲಿ ಲಕ್ಷಾಂತರ ಮಂದಿಯ ತ್ಯಾಗ ಬಲಿದಾನ, ಜೈಲುವಾಸ ಅನುಭವಿಸಿ ಪ್ರಾಣ ತ್ಯಾಗ ಮಾಡಿರುತ್ತಾರೆ ಅಂತಹವರನ್ನ ನೆನೆಯುವುದರಲ್ಲೇ ಸಂವಿಧಾನದ ಅಶಯವನ್ನು ಕಾಣಬಹುದು.ಜಗತ್ತಿನ ಬಹುದೊಡ್ಡ ಸಂವಿಧಾನ ನಮ್ಮದು ಎಂಬ ಹೆಮ್ಮೆ ನಮ್ಮದಾಗಬೇಕು. ಭ್ರಾತೃತ್ವ, ಸಮಾನತೆ, ವೆಕ್ತಿ ಗೌರವಗಳನ್ನು ಬೆಳೆಸಿಕೊಂಡರೆ ಸಂವಿಧಾನಕ್ಕೆ ಗೌರವ ನೀಡಿದಂತಾಗುತ್ತದೆ ಎಂದು ನುಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ರಮೇಶ್ ಮಣ್ಣೆ ರವರು ಸಂವಿಧಾನದ ಪ್ರತಿಜ್ಞಾವಿಧಿಯನ್ನು ಭೋದಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಸ್, ಕುಮಾರ್‌ರವರು ವಹಿಸಿ, ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ಎಂ.ಆರ್ ರಂಗಸ್ವಾಮಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅರ್ಥಶಾಸ್ತç ವಿಭಾಗದ ಮುಖ್ಯಸ್ಥರಾದ ಪ್ರೊ.ಅಮರನಾರಯಣಸ್ವಾಮಿ ರವರು ಉಪಸ್ಥಿತಿಯಿದ್ದರು ಅರ್ಪಿತ ಮತ್ತು ಸಂಗಡಿಗರು ಪ್ರಾರ್ಥಿಸಿ ತೃತೀಯ ಬಿ ಎ ವಿದ್ಯಾರ್ಥಿ ಶ್ರೇಯಸ್ ನಿರೂಪಿಸಿದರು ರವಿಕುಮಾರ್ ಸ್ವಾಗತಿಸಿ ರಮ್ಯ ವಂದಿಸಿದರು.