ಶಿರಾ : ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಮುಗಿಸಲೇಬೇಕೆಂದು ಹೊರಟಿದ್ದಾರೆ. ಹಣಬಲದಿಂದ ಗೆಲುವು ಸಾಧಿಸಬಹುದೆಂದು ತಿಳಿದುಕೊಂಡಿದ್ದಾರೆ. ಅದನ್ನು ಜೆಡಿಎಸ್ ಪಕ್ಷದ ಮುಖಂಡರು ಒಗ್ಗಟ್ಟಾಗಿ ಹೋರಾಡಿ ಪಕ್ಷವನ್ನು ಉಳಿಸಬೇಕು ಎಂದು ಮಾಜಿ ಪ್ರಧಾನ ಹೆಚ್.ಡಿ.ದೇವೇಗೌಡ ಹೇಳಿದರು.
ಅವರು ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಜೆಡಿಎಸ್ ಪಕ್ಷದ ವತಿಯಿಂದ ವಿಧಾನಪರಿಷತ್ ಚುನಾವಣಾ ಹಿನ್ನೆಲೆಯಲ್ಲಿ ತುಮಕೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅನಿಲ್‌ಕುಮಾರ್ ಅವರ ಪರ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕದ ರಾಜ್ಯದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷ ಉಳಿದರೆ ಅದು ತುಮಕೂರಿನಿಂದಲೇ ಉಳಿಯಬೇಕು. ಇದನ್ನು ಪಕ್ಷದ ಕಾರ್ಯಕರ್ತರು ಸಾಬೀತುಮಾಡಬೇಕು ಎಂದ ಅವರು ಸರ್ಕಾರಿ ಅಧಿಕಾರಿಯಾದ ಅನಿಲ್ ಕುಮಾರ್ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಜನಸೇವೆಗಾಗಿ ಜೆಡಿಎಸ್ ಪಕ್ಷಕ್ಕೆ ಬಂದಿದ್ದಾರೆ. ಉತ್ತಮ ವ್ಯಕ್ತಿತ್ವ ಹೊಂದಿರುವ ಅವರನ್ನು ಗ್ರಾ.ಪಂ. ಸದಸ್ಯರು ಗೆಲ್ಲಿಸಿ. ಅವರಲ್ಲಿ ರಾಜಕೀಯವಾಗಿ ಬೆಳೆಯುವ ಶಕ್ತಿ ಇದೆ ಎಂದರು.
ವಿಧಾನ ಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ಮಾತನಾಡಿ ಈ ದೇಶದಲ್ಲಿ ಪ್ರಧಾನಿಗಳಾಗಿದ್ದ ಮಣ್ಣಿನ ಮಗ ಹೆಚ್.ಡಿ.ದೇವೇಗೌಡ ಅವರು ತಮ್ಮ ಅಧಿಕಾರವಧಿಯಲ್ಲಿ ಅನೇಕ ಸುಧಾರಣೆ ತಂದವರು. ಅವರು ತಂದ ಸುಧಾರಣೆಗಳಿಂದ ಹಿಂದುಳಿದ ವರ್ಗ ಸಾಕಷ್ಟು ಅನುಕೂಲ ಪಡೆದಿದೆ. ಅದೇ ರೀತಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿ ರೈತರ ಪರ ಕೆಲಸ ಮಾಡಿದ್ದಾರೆ. ಮತ್ತೆ 2023 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಬೇಕು. ನಿಮ್ಮ ಮನೆಯ ಮಗನಿಗೆ ಅವಕಾಶ ಮಾಡಿಕೊಡಿ ಎಂದರು.
ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ ವಿಧಾನಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸೋತಿದೆ. ಆದರೆ ವಿಧಾಪರಿಷತ್ ಚುನಾವಣೆಲ್ಲಿ ಗೆಲ್ಲಲೇಬೇಕು. ಶಿರಾ ತಾಲ್ಲೂಕಿನಲ್ಲಿ ಶಾಸಕರು ಇಲ್ಲದಿದ್ದರೂ ಗ್ರಾ.ಪಂ. ಸದಸ್ಯರು ಹೆಚ್ಚು ಗೆದ್ದಿದ್ದೇವೆ. ದುಡ್ಡು ಎಂದಿಗೂ ಗೆಲ್ಲುವುದಿಲ್ಲ ಒಳ್ಳೆತನ ಗೆಲ್ಲುತ್ತದೆ. ಈಗಿನ ಶಾಸಕರು ದುಡ್ಡಿನಿಂದ ಮಾತ್ರ ಗೆದ್ದಿದ್ದಾರೆ. ಒಗ್ಗಟ್ಟಾಗಿ ಕೆಲಸ ಮಾಡಿ, ಸತ್ಯಂ ಶಿವಂ ಸುಂದರಂ ಎನ್ನುವ ರೀತಿಯಲ್ಲಿ ಕೆಲಸ ಮಾಡಿ. ಜೆಡಿಎಸ್ ಗ್ರಾ.ಪಂ. ಸದಸ್ಯರು ಪ್ರಥಮ ಪ್ರಾಶಸ್ತö್ಯದ ಮತವನ್ನು ಜೆಡಿಎಸ್ ಅಭ್ಯರ್ಥಿಗೆ ಹಾಕಿ. ನಮ್ಮ ಜನಾಂಗದವನು ಎಂದು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದರೆ ಅದು ಕಾಂಗ್ರೇಸ್ ಗೆ ಅನುಕೂಲವಾಗುತ್ತದೆ. ದಯವಿಟ್ಟು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ. 2023 ರ ಚುನಾವಣೆಯಲ್ಲಿ ಹೆಚ್.ಡಿ.ಕುಮಾರ್ ಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದರು.
ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ ಬಿಜೆಪಿ ಪಕ್ಷಕ್ಕೆ ಲಕ್ಷಾಂತರ ಕೋಟಿ ಹಣ ಪಕ್ಷದಲ್ಲಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ಸಾವಿರಾರು ಕೋಟಿ ಪಕ್ಷದ ಹಣ ಇದೆ. ಆದರೆ ಜೆಡಿಎಸ್ ಪಕ್ಷ ಹಣ ನೆಚ್ಚಿಕೊಂಡಿಲ್ಲ ಪಕ್ಷದ ಕಾರ್ಯಕರ್ತರೆ ನಮಗೆ ಹಣ ಅಂತಸ್ತು. ಆದ್ದರಿಂದ ಜೆಡಿಎಸ್ ಪಕ್ಷ ಕೋಟ್ಯಾಂತರ ಕಾರ್ಯಕರ್ತರ ಪಕ್ಷ ಎಂದ ಅವರು ಲೋಕಸಭೇಯಲ್ಲಿ ದೇವೇಗೌಡರ ಸೋಲು ಇಡೀ ಕರ್ನಾಟಕದ ರೈತರ ಸೋಲು, ಕನ್ನಡಿಗರ ಸೋಲು. ಅಂತಹ ಗಟ್ಟಿ ಧ್ವನಿಯನ್ನು ನಾವು ಸೋಲಿಸಿದ್ದೇವೆ. ನಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿ. ಮತದಾರರು ಮನಸ್ಸು ಮಾಡಿ ದುಡ್ಡನ್ನು ಸೋಲಿಸಿ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಸುಧಾಕರ್ ಲಾಲ್, ಸುರೇಶ್ ಬಾಬು, ತಿಮ್ಮರಾಯಪ್ಪ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಮಾಜಿ ಜಿ.ಪಂ.ಸದಸ್ಯ ಸಿ.ಆರ್.ಉಮೇಶ್, ಎಸ್.ರಾಮಕೃಷ್ಣ, ಜಯಪ್ರಕಾಶ್, ವಿಧಾನ ಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ , ಆಂಜಿನಪ್ಪ, ನಗರ ಜೆಡಿಎಸ್ ಅಧ್ಯಕ್ಷ ಅಂಜಿನಪ್ಪ, ಮಹಿಳಾ ಘಟಕದ ಅಧ್ಯಕ್ಷ ಅಂಜಿನಪ್ಪ, ಮಾಜಿ ತಾ.ಪಂ. ಅಧ್ಯಕ್ಷ ಸತ್ಯಪ್ರಕಾಶ್, ಪಿಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರವಿಶಂಕರ್, ಎಪಿಎಂಸಿ ಅಧ್ಯಕ್ಷ ಚಂದ್ರೇಗೌಡ, ಮಾಜಿ ಗ್ರಾ.ಪಂ.ಅಧ್ಯಕ್ಷ ಟಿ.ಡಿ.ನರಸಿಂಹಮೂರ್ತಿ, ಮಾಜಿ ನಗರಸಭಾ ಸದಸ್ಯ ಆರ್.ರಾಘವೇಂದ್ರ, ಆರ್.ರಾಮು ಸೇರಿದಂತೆ ಹಲವರು ಹಾಜರಿದ್ದರು.