ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುಣಾವಣೆ : ಬಿ.ಸಿ.ಶೈಲಾನಾಗರಾಜ್ ಬೆಂಬಲಿಸಲು ನಿಕಟಪೂರ್ವ ಅದ್ಯಕ್ಷೆ ಬಾ.ಹ.ರಮಾಕುಮಾರಿ ಮನವಿ

ಕೊರಟಗೆರೆ : ಕನ್ನಡ ಭಾಷೆ ಸಾಹಿತ್ಯ ಸಂಸೃತಿಯನ್ನು ಬೆಳಸಲು ಉಳಿಸಲು ಸಾಹಿತ್ಯ ಪರಿಷತ್ತು ಮುಖಾಂತರ ಸರ್ವಸದಸ್ಯ ರೊಂದಿಗೆ ಶ್ರಮಿಸುವ ಪ್ರಮಾಣಿಕ ಸೇವೆ ಮಾಡಲಾಗುವುದು ಎಂದು ಲೇಖಕಿ ಡಾ.ಬಿ.ಸಿ.ಶೈಲಾನಾಗರಾಜ್ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ನಾನು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2021 ರ ಚುಣಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಜಿಲ್ಲಾದ್ಯಂತ ಪ್ರವಾಸ ಮಾಡಲಾಗಿ ಕೊರಟಗೆರೆ ತಾಲೂಕು ಸೇರಿದಂತೆ ಎಲ್ಲಾ ತಾಲೂಕಿನಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ,ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ 4 ಕವನ ಸಂಕಲನ 6 ವಿಚಾರ ಕೃತಿಗಳು, 5 ಮಹಿಳಾ ಅಧ್ಯಯನ 5 ವ್ಯಕ್ತಿಚಿತ್ರ ಸೇರಿದಂತೆ ಹಲವು ಬರಹಗಳನ್ನು ಬರೆದಿದ್ದು, ಸಾಹಿತ್ಯ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ಜಿಲ್ಲಾ ರಾಜ್ಯಪ್ರಶಸ್ತಿಗಳನ್ನು ಪಡೆದ್ದದು ಹಲವು ಸಮಾಜಿಕ ಶೈಕ್ಷಣಿಕ ಸಾಹಿತ್ಯ ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ,ಅದ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಬಳಿಕ ಸಾರ್ವಸದಸ್ಯರ ಒಟ್ಟುಗೂಡಿ ಜಿಲ್ಲೆಯ ಉಳಿದ ತಾಲ್ಲೂಕಿನಲ್ಲಿ ಸ್ವಂತ ಕಟ್ಟಡಗಳು ಪ್ರತಿ ಇಂಗ್ಲೀಷ್ ಶಾಲೆಗಳಲ್ಲಿ ಕನ್ನಡ ಬಾಷೆಯ ಸಾಹಿತ್ಯ ಅಧ್ಯಯನ,ಹೊರ ರಾಜ್ಯದವರಿಗೆ ಕನ್ನಡ ಪರೀಕ್ಷೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡಲಾಗುವುದು ಎಂದರು.
ನಿಕಟಪೂರ್ವ ಜಿಲ್ಲಾ ಕ.ಸಾ.ಪ ಅದ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ ನನ್ನ ಅಧಿಕಾರ ಅವಧಿಯಲ್ಲಿ ಎಲ್ಲರ ಸಹಕಾರದೋದಿಗೆ ಜಿಲ್ಲೆಯಲ್ಲಿ ನೂತನ ಕ.ಸಾ.ಪ.ಕಟ್ಟಡವನ್ನು ಪೂರ್ಣಗಳಿಸಿ ಉದ್ಘಾಟಿಸಿಲಾಯಿತು, ಕೆಲವು ತಾಲೂಕುಗಳಲ್ಲಿ ಸ್ವಂತ ಕಟ್ಟಡ ಹಾಗೂ ತಾತ್ಕಾಲಿಕ ಕಟ್ಟಡಗಳನ್ನು ಉದ್ಘಾಟಿಸಲಾಗಿದೆ,ಹಲವಾರು ಕಾರ್ಯಕ್ರಮಗಳು ಕನ್ನಡ ಪರ ಕೆಲಸಗಳನ್ನು ಮಾಡಿದ್ದು, ಜಿಲ್ಲಾ ಕ.ಸಾ.ಪ ಮತದಾರರು ಡಾ.ಶೈಲಾನಾಗರಾಜು ರವನ್ನು ಜಿಲ್ಲಾದ್ಯಕ್ಷರನ್ನಾಗಿ ಮಾಡಿ ಮುಂದಿನ ಸೇವೆಗಳನ್ನು ಮುಂದುವರೆಸಲು ಸಹಕರಿಸುವಂತೆ ಕೋರಿದ ಅವರು ಶೈಲಾರವರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದು ಉತ್ತಮ ಕೆಲಸ ಮಾಡುವ ಭರವಸೆ ವ್ಯಕ್ತ ಪಡಿಸಿದರು.
ಮಾಜಿ ಜಿಲ್ಲಾ ಕ.ಸಾ.ಪ. ಕೋಷಾಧ್ಯಕ್ಷ ಮರುಳಯ್ಯ ಮಾತನಾಡಿ ಮದುಗಿರಿ ತಾಲೂಕು ನನ್ನ ಜನ್ಮ ಸ್ಥಳ ಅದರೆ ನನಗೆ ಸಾಮಾಜಿಕ ನೆಲಗಟ್ಟು ನೀಡಿದ್ದು ಕೊರಟಗೆರೆ ತಾಲೂಕು,ರಾಜ್ಯ ಸರ್ಕಾರದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ಹಲವು ಸಾಧನೆ ಮಾಡಿರುವ ಡಾ.ಬಿ.ಸಿ.ಶೈಲಾನಾಗರಾಜು ಜಿಲ್ಲಾ ಕ.ಸಾ.ಪ ಅದ್ಯಕ್ಷ ಸ್ಥಾನಕ್ಕೆ ಏಕೈಕ ಅರ್ಹ ಅಭ್ಯರ್ಥಿಯಾಗಿದ್ದಾರೆ ಎಂದರು.
ಗೋಷ್ಟಿಯಲ್ಲಿ ಮಾಜಿ.ತಾಲ್ಲೂಕು ಕಸಾಪ ಅದ್ಯಕ್ಷ ಎಸ್.ಕೆ.ನಾಗರಾಜು.ಮದುಗಿರಿಮಾಜಿ ಸ.ನೌ.ಸಂಘದ ಅದ್ಯಕ್ಷ ಮಹಾಲಿಂಗೇಶ್ ಹನುಮಂತರಾಯಪ್ಪ ಮಾಜಿಪ.ಪಂ ಉಪಾದ್ಯಕ್ಷ ಕೆ.ವಿ.ಮಂಜುನಾಥ ಸೊಗಡುಶ್ರೀನಿವಾಸ್ ಅರುಣ್ ದಯಾನಂದಸ್ವಾಮಿ ರಾಜಣ್ಣ ಲೋಕೇಶ್ ರಾಮಕೃಷ್ಣಪ್ಪ ಸೇರಿದಂತೆ ಇತರರು ಹಾಜರಿದ್ದರು.
ಚಿತ್ರ-ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಡಾ.ಶೈಲಾನಾಗರಾಜು ಬಾ.ಹ.ರಾಮಾಕುಮಾರಿ ಮರುಳಯ್ಯ ಸೇರಿದಂತೆ ಇತರರಿದ್ದರು.