ಸದಾಶಿವ ವರದಿ ಜಾರಿಗೆ ಒತ್ತಾಯಿಸಿ ಎಡ-ಬಲ ಸಮುದಾಯಗಳ ಒಗ್ಗಟ್ಟಿನ ಪ್ರತಿಭಟನೆ
ತುರುವೇಕೆರೆ : ಆದಿಜಾಂಬವ ಹಾಗೂ ಛಲವಾದಿ ಮಹಾಸಭಾ ಸಮನ್ವಯ ಸಮಿತಿ ವತಿಯಿಂದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋದಗ ವರದಿ ಜಾರಿಗೆ ಒತ್ತಾಯಿಸಿ ಪಟ್ಟಣದಲ್ಲಿ ಪ್ರತಿಭಟನೆ ನೆಡೆಸಿದವು.
ಜಿಲ್ಲಾ ಡಿ.ಎಸ್.ಎಸ್.ಯುವ ಪದಾದಿಕಾರಿ ಕುಂದೂರುಮುರುಳಿ ಮಾತನಾಡಿ ನಿತ್ಯವೂ ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಮೀಸಲಾತಿ ಸವಲತ್ತಿನಿಂದ ವಂಚಿತವಾಗುತ್ತಿರುವ ಅಸ್ಪೃಶ್ಯ ಜಾತಿಗಳಾದ ಹೊಲೆಯ ಮಾದಿಗ ಸಮುದಾಯಗಳು ಏಳಿಗೆ ಸದಾಶಿವ ಆಯೋಗದ ವರದಿ ಜಾರಿಗೆ ತರಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರಗಳು ಸದಾಶಿವ ಆಯೋಗದ ವರದಿಯನ್ನು ಯಥಾವತ್ತು ಜಾರಿಗೆ ತರುವಂತೆ ಆಗ್ರಹಿಸಿದರು.
ಜಿಲ್ಲಾ ರೈತ ಸಂಘದ ರಾಮಚಂದ್ರ, ಜಿ.ಪಂ. ಮಾಜಿ ಅಧ್ಯಕ್ಷ ಹನುಮಂತಯ್ಯ, ದಲಿತ ಮುಖಂಡರುಗಳಾದ ದಂಢಿನಶಿವರಕುಮಾರ್. ತಿಮ್ಮೇಶ್, ಮೋಹನ್‌ಪರಮೇಶ್, ಸುಬ್ರಹ್ಮಣ್ಯ, ಹೆಚ್.ಕೆ. ಜಗದೀಶ್, ಮಾತನಾಡಿ ಮೀಸಲು ಹೆಸರಿನಲ್ಲಿ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳುತ್ತಿರುವ ಕೊರಮ, ಲಂಬಾಣಿ, ಬೋವಿ ಸಮಾಜವನ್ನು ಪರಿಶಿಷ್ಟಜಾತಿಯ ಪಟ್ಟಿಯಿಂದ ಕೈ ಬಿಡಬೇಕು, ಸದಾಶಿವ ಆಯೋಗದ ವರದಿಯನ್ನು ಸರಕಾರ ಜಾರಿಗೊಳಿಸಬೇಕು ಇಲ್ಲವಾದಲ್ಲಿ ವಿಧಾನಸೌದ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಆದಿಜಾಂಬವ ಹಾಗೂ ಛಲವಾದಿ ಸಮಾಜದ ಬಂಧುಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನೆಡೆಸಿ ಒಗ್ಗಟ್ಟು ಪ್ರಧರ್ಶಿಸಿದರು. ಮೆರವಣಿಗೆಯುದ್ದಕ್ಕೂ ಬೇಡಿಕೆ ಈಡೆರಿಕೆಗಾಗಿ ಘೋಷಣೆಗಳನ್ನು ಮೊಳಗಿಸಿದರು. ಕೊಂಬು ಕಹಳೆ ಊದಿ ಹಾಗೂ ತಮಟೆ ವಾದನ ಮಾಡುವ ಮೂಲಕ ಪ್ರತಿಭಟನಗೆ ಮೆರುಗು ತಂಧರು. ಅಂತಿಮವಾಗಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನೆಡೆಸಿದರು. ಸದಾಶಿವ ಅಯೋಗದ ವರದಿ ಜಾರಿಗೆ ಒತ್ತಾಯಿಸಿ ಆಗ್ರಹಕ ಪೂರ್ವಕ ಮನವಿಯನ್ನು ತಾಲೂಕು ದಂಡಾದಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಿದರು.
ಈ ವೇಳೆ ಛಲವಾದಿ ಮಹಾಸಭಾದ ಆಧ್ಯಕ್ಷ ಡೊಂಕಿಹಳ್ಳಿರಾಮಣ್ಣ, ಡಾ.ಕೆ.ಟಿ.ಶ್ರೀನಿವಾಸ್,ಮುಖಂಡರಾದ ಬೀಚನಹಳ್ಳಿರಾಮಣ್ಣ,ಹೊನ್ನೇನಹಳ್ಳಿಕೃಷ್ಣಪ್ಪ,ಗುರುದತ್, ಹೆಗ್ಗೆರೆಸೋಮಶೇಖರ್, ಡಿ.ಸಿ.ಕುಮಾರ್, ನೀರಗುಂದ ಸತೀಶ್, ತಮ್ಮಯ್ಯ.ಬಿ.ಪುರ,ಪುಟ್ಟರಾಜ್, ಮಧುಸಿದ್ದಾಪುರ, ಸೇರಿದಂತೆ ಅನೇಕರು ಇದ್ದರು.