ಕೊರಟಗೆರೆ

ಕಾಂಗ್ರೆಸ್ ಸೇರ್ಪಡೆಗೆ ಸಿ.ಚನ್ನಿಗಪ್ಪ ಪುತ್ರರಾದ ಡಿ.ಸಿ. ಅರುಣ್ ಕುಮಾರ್ ಹಾಗೂ ಡಿ.ಸಿ. ವೇಣುಗೋಪಾಲ್ ನಿರ್ಧಾರ

ಕೊರಟಗೆರೆ : ಜೆಡಿಎಸ್ ನ ಮಾಜಿ ಸಚಿವ ಸಿ.ಚನ್ನಿಗಪ್ಪನವರ ಹಿರಿ ಮಗ  ಹಾಗೂ ಹಾಲಿ ತುಮಕೂರು ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್ ಸಹೋದರ  ಡಿಸಿ ಅರುಣ್ ಕುಮಾರ್ ಹಾಗೂ ತಮ್ಮ ವೇಣುಗೋಪಾಲ್ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.
ಅವರು ಭಾನುವಾರ ಕೊರಟಗೆರೆ ತಾಲೂಕಿನ ಎಲೆರಾಂಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬೈಚೇನಹಳ್ಳಿ ಬಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮುಂದಿನ ನನ್ನ ರಾಜಕೀಯ ಭವಿಷ್ಯವನ್ನು ಕಾಂಗ್ರೆಸ್ ಪಕ್ಷದಿಂದ ರೂಪಿಸಿಕೊಳ್ಳಲ್ಲಾಗುವುದು ಎಂದರು.
ಜೆಡಿಎಸ್ ನ ಮಾಜಿ ಜನಪ್ರಿಯ ಸಚಿವರಾದ ಸಿ.ಚನ್ನಪ್ಪನವರು ಕೊರಟಗೆರೆ ತಾಲೂಕಿನಲ್ಲಿ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆಯೊಂದಿಗೆ ಕೊರಟಗೆರೆ ಮನೆ ಮಗನಾಗಿ ಸತತ ಜನರ ಸೇವೆ ಮಾಡುತ್ತಾ ಜನ ಬೆಂಬಲದೊಂದಿಗೆ ಹಲವು ಖಾತೆಗಳ ಮೂಲಕ ಜನಪ್ರಿಯರಾದ ಅಂತ ನಮ್ಮ ತಂದೆ ಆಶಯದಂತೆ ಕೊರಟಗೆರೆ ತಾಲೂಕಿನಲ್ಲಿ ನನ್ನ ರಾಜಕೀಯ ಭವಿಷ್ಯವನ್ನು ಪ್ರಾರಂಭಿಸಲಾಗುವುದು ಎಂದು ಇಂಗಿತ ವ್ಯಕ್ತಪಡಿಸಿದ್ದರು.
ನನಗೆ ಈ ಬಾರಿ ಕಾಂಗ್ರೆಸ್ ನಿಂದ ಜಿಲ್ಲಾ ಪಂಚಾಯಿತಿಗೆ ಬರುವ ಆಶಯವಿದು, ಅವಕಾಶ ನೋಡಿ ನಿರ್ಧರಿಸಲಾಗುವುದು ಆದರೆ ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ. ಜಿ ಪರಮೇಶ್ವರ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಮನೆಮನೆಗೂ ಅವರ ಗೆಲುವಿಗೆ ಟೊಂಕಕಟ್ಟಿ ನಿಲ್ಲುವುದರ ಜೊತೆಗೆ ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಕೆ.ಎನ್. ರಾಜಣ್ಣನವರ ಮಗ ರಾಜೇಂದ್ರ ಅವರ ಗೆಲುವಿಗೂ ಶ್ರಮ ವಹಿಸುವುದಾಗಿ ಅಭಿಪ್ರಾಯಪಟ್ಟರು.
ನಮ್ಮ ತಂದೆ ಸಿ ಚನ್ನಿಗಪ್ಪ ನವರಿಗೆ ಜೆಡಿಎಸ್ ನ ಅದಿನಾಯಕ ಎಚ್ ಡಿ ದೇವೇಗೌಡರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ರೇವಣ್ಣ ಆದಿಯಾಗಿ ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ನೀಡುವುದರಿಂದ ಹಿಡಿದು ಗೆಲುವು ಸಾಧಿಸುವುದರ ಜೊತೆಗೆ 3-4 ಸಚಿವ ಸ್ಥಾನ ನೀಡಿ ನಮ್ಮ ಕುಟುಂಬವನ್ನ ರಾಜಕೀಯ ಉನ್ನತಿಗೆ ಕಾರಣರಾಗಿದ್ದು, ಈ ಪಕ್ಷದಲ್ಲಿಯೇ  ಡಿ .ಸಿ. ಗೌರಿಶಂಕರ್ ಮುಂದುವರಿಯಲಿದ್ದು ಅವರು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷವನ್ನು ಬಿಟ್ಟು ಬೇರೆ ಯಾವುದೇ ಪಕ್ಷಕ್ಕೂ ಬರುವುದಿಲ್ಲ, ನಮ್ಮ ತಂದೆಯವರ ರೀತಿಯಲ್ಲಿ ಜೆಡಿಎಸ್ ತಮ್ಮನಾದ ಗೌರಿಶಂಕರ್ ಅವರಿಗೆ ಆಶೀರ್ವಾದವಿದ್ದು ಅವರು ಅಲ್ಲಿಯೇ ಮುಂದುವರೆಯಲಿದ್ದಾರೆ ಎಂದರು.
 ಡಿಸೆಂಬರ್ ಮಾಹೆಯಲ್ಲಿ ಸೇರ್ಪಡೆ
ನಮ್ಮ ಕುಟುಂಬದವರು ಕುಳಿತು ನಿರ್ಧರಿಸಿದ್ದೇವೆ ಅರುಣ್ ಕುಮಾರ್ ಹಾಗೂ ವೇಣುಗೋಪಾಲ್ ಇಬ್ಬರು ಮಕ್ಕಳು ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಜೀವನವನ್ನು ಪ್ರಾರಂಭಿಸಲಿದ್ದು ಮುಂದಿನ ಡಿಸೆಂಬರ್ ತಿಂಗಳಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಡಾ.ಜಿ ಪರಮೇಶ್ವರ್ ಹಾಗೂ ಕೆ ಎನ್ ರಾಜಣ್ಣನವರು ಮೂಲಕ ನಮ್ಮ ಹುಟ್ಟೂರು ಬೈರನಾಯಕನಹಳ್ಳಿ ಯಲ್ಲಿ ದೊಡ್ಡ ಸಮಾರಂಭದ ಮೂಲಕ ಇಡೀ ತುಮಕೂರಿನ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಸೇರಿಸಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳಲಾಗುವುದು ಎಂದು ಅಧಿಕೃತ ಘೋಷಣೆ ಮಾಡಿದರು.
 ತಂದೆ ನೆನೆದು ಕಣ್ಣೀರಿಟ್ಟ ಅರುಣ್ ಕುಮಾರ್ :
ನಮ್ಮ ತಂದೆ ಸಿ ಚನ್ನಿಗಪ್ಪ ನವರನ್ನ ಕೊರಟಗೆರೆ ಜನತೆ ಮೂರು ಬಾರಿ ಗೆಲ್ಲಿಸುವುದರ ಮೂಲಕ ನಮ್ಮ ಕುಟುಂಬವನ್ನು ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೆ ಏರಿಸಿದ್ದೀರಿ, ನನ್ನನ್ನು ಸಹ ಕೊರಟಗೆರೆ ಕ್ಷೇತ್ರಕ್ಕೆ ಹೋಗಿ ರಾಜಕಾರಣ ಮಾಡು ಅಲ್ಲಿನ ಜನ ತುಂಬಾ ಒಳ್ಳೆಯವರು ನಮ್ಮ ಕುಟುಂಬವನ್ನು ಎಂದೂ ಕೈ ಬಿಡುವುದಿಲ್ಲ ಎಂದಿದ್ದರು ಅವರ ಆಶಯದಂತೆ ನಾನು ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ರಾಜಕೀಯ ಪ್ರಾರಂಭಿಸಲು ಇಚ್ಚಿಸಿದ್ದೇನೆ ನಮ್ಮ ತಂದೆಯ ಆದಿಯಲ್ಲಿ ನನ್ನನ್ನು ಆಶೀರ್ವದಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ತಂದೆ ನೆನೆದು ಭಾವುಕರಾಗಿ ಕಣ್ಣೀರಿಟ್ಟರು.
ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರದ ಕಾರ್ಮಿಕ ಒಕ್ಕೂಟದ ಸಂಪತ್ ಕುಮಾರ್, ಸ್ಥಳಿಯ ಕಾಂಗ್ರೆಸ್ ಮುಖಂಡ ಸಿ.ರಂಗಯ್ಯ  ತುಮಕೂರು ಗ್ರಾಮಾಂತರ ಮುಖಂಡರುಗಳಾದ ಕುಮಾರಣ್ಣ, ಮಹೇಶ್, ಚಂದ್ರು, ಕೆಂಪರಾಜು ಎಲೆರಾಂಪುರ ಗ್ರಾ.ಪಂ ಅಧ್ಯಕ್ಷ ಗಂಗಾದೇವಿ, ಗ್ರಾಮ ಪಂಚಾಯತಿ ಸದಸ್ಯರುಗಳಾದ ರಂಗಶಾಮಯ್ಯ ಗೀತಾ ನರಸಿಂಹರಾಜು ,ಮಮತಾ ರಂಗಮುತ್ತಯ್ಯ, ಗಂಗಮ್ಮ ರಾಕೇಶ್, ಹನುಮಂತರಾಯಪ್ಪ, ತ್ರಿವೇಣಿ ತಿಮ್ಮರಾಜು, ಕುಮಾರ್, ಚಂದ್ರಣ್ಣ, ಸರ್ವೇಶ್ ಎನ್ ಎಚ್  ಮುಖಂಡ ಸಿಂಗ್ರೀಹಳ್ಳಿ ಚಂದ್ರಣ್ಣ,ಕಾಂತರಾಜು ದೇವರಾಜು ,ರಾಮಣ್ಣ ಜಯರಾಮಯ್ಯ ಹಲವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker