ಗುಬ್ಬಿ

ಜೆಡಿಎಸ್‌ ನಿಂದ ಹೊರಹಾಕಿಸಿಕೊಂಡವರ ಅಗತ್ಯ ಕಾಂಗ್ರೆಸ್ ಬಂದಿಲ್ಲ, ಪಕ್ಷಕ್ಕಾಗಿ ದುಡಿದ ನಿಷ್ಟಾಂತರಿಗೆ ಆದ್ಯತೆ : ಹೊನ್ನಗಿರಿಗೌಡ

ಗುಬ್ಬಿ: ಕಾಂಗ್ರೆಸ್ ನಲ್ಲಿ ನಿಷ್ಠಾವಂತರಾಗಿ ದುಡಿದು ಪಕ್ಷ ಕಟ್ಟಿದ ಮಂದಿ ಅಭ್ಯರ್ಥಿಯಾಗಲು ಹಂಬಲಿಸಿರುವಾಗ ಬೇರೆ ಪಾರ್ಟಿಯಿಂದ ಹೊರದಬ್ಬಿಸಿಕೊಂಡವರು ನಮಗೆ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ನೇರ ಮಾತುಗಳಾಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪಕ್ಷ ಬಲವರ್ಧನೆಗೆ ಶ್ರಮಿಸಿದ ಆಕಾಂಕ್ಷಿಗಳನ್ನು ಕೊನೆ ಗಳಿಗೆಯಲ್ಲಿ ತಿರಸ್ಕರಿಸುವ ನಡವಳಿಕೆ ಈ ಬಾರಿ ಪಕ್ಷ ಮಾಡುವುದಿಲ್ಲ. ಮೂರು ಬಾರಿ ಶಾಸಕರಾಗಿ ಈಗ ಪಕ್ಷವೇ ಹೊರ ಕಳುಹಿಸುವಾಗ ಅವರಿಗೆ ಕಾಂಗ್ರೆಸ್ ಸುಲಭವಾಗಿ ಅತಿಥ್ಯ ನೀಡುವುದಿಲ್ಲ ಎಂದು ನಂಬಿದ್ದೇವೆ ಎಂದರು.

ಈಗಾಗಲೇ ಬಿಜೆಪಿ ಆಡಳಿತವನ್ನು ತಿರಸ್ಕರಿಸುವ ಮನಸ್ಥಿತಿ ರಾಜ್ಯದ ಜನರಲ್ಲಿ ಮೂಡಿದೆ. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಇಚ್ಛಿಸಿರುವ ಮತದಾರರು ರಾಜ್ಯದಲ್ಲಿದ್ದಾರೆ. ಇದೇ ಆಪೇಕ್ಷೆಯಂತೆ ಗುಬ್ಬಿ ಕ್ಷೇತ್ರದಲ್ಲಿ ಸಹ ಕಾಂಗ್ರೆಸ್ ಒಲವು ಕಂಡಿದೆ. ಈ ಸಂದರ್ಭವನ್ನು ವಲಸೆ ಬಂದವರು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ. ನಮ್ಮಲ್ಲೇ ಆಕಾಂಕ್ಷಿಗಳು ಇರುವಾಗ ಪ್ರಾದೇಶಿಕ ಪಕ್ಷ ರಿಜೆಕ್ಟ್ ಮಾಡಿದ ವ್ಯಕ್ತಿಗೆ ಅನುವು ಮಾಡುವ ತ್ಯಾಗಮಯಿಗಳು ಇಲ್ಲಿಲ್ಲ ಎಂದು ಕಿಡಿಕಾರಿದರು.

ಪಕ್ಷ ಸಂಘಟನೆಗೆ ನಮ್ಮಲ್ಲಿ ಮೂಡಿದ್ದ ಭಿನ್ನಾಭಿಪ್ರಾಯಗಳ ಶಮನ ಮಾಡಿಕೊಂಡು ಮುಂದಿನ ಸ್ಥಳೀಯ ಚುನಾವಣೆ ಮತ್ತು ಎಂಎಲ್ಸಿ ಚುನಾವಣೆಗೆ ಸಜ್ಜಾಗುತ್ತಿರುವ ಈ ಸಮಯದಲ್ಲಿ ಹಬ್ಬಿರುವ ವದಂತಿಗಳಿಗೆ ಕಾರ್ಯಕರ್ತರು ಕಿವಿ ಕೊಡಬೇಡಿ. ಗುಬ್ಬಿ ಶಾಸಕರು ಕಾಂಗ್ರೆಸ್ ಗೆ ಬರುವ ವದಂತಿ ಸಾಕಷ್ಟು ಗೊಂದಲ ಮೂಡಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಪಕ್ಷಕ್ಕೆ ದುಡಿದ ಮುಖಂಡರು ಮತ್ತು ಕಾರ್ಯಕರ್ತರು ವಿಚಾಲಿತಗೊಳ್ಳುವ ಅಗತ್ಯವಿಲ್ಲ
ಎಂದ ಅವರು ಪಕ್ಷ ಕಟ್ಟಿದವರೇ ಕಾಂಗ್ರೆಸ್ ಉಳಿಸಿ ಬೆಳೆಸಲು ಸಾಧ್ಯ. ವಲಸಿಗರಿಗೆ ಮನೆ ಹಾಕಿ ಮತ್ತೊಮ್ಮೆ ಸೋಲು ಕಾಣುವ ಅನಿವಾರ್ಯ ನಮ್ಮ ಪಕ್ಷಕ್ಕಿಲ್ಲ. ಈ ಬಾರಿ ಕಾಂಗ್ರೆಸ್ ಎಲ್ಲಾ ಚುನಾವಣೆಯಲ್ಲೂ ತನ್ನ ವರ್ಚಸ್ಸು ತೋರಲಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಮ್ ಪಾಷಾ ಮಾತನಾಡಿ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುವ ಬಗ್ಗೆ ಸಾಕಷ್ಟು ಗೊಂದಲ ನಮ್ಮ ಪಕ್ಷದಲ್ಲಿ ಮೂಡುತ್ತಿದೆ. ಈಗಲೇ ಗೊಂದಲ ಮೂಡಿದರೆ ಪಕ್ಷ ಸಂಘಟನೆ ಕಷ್ಟವಾಗುತ್ತದೆ. ಕಾಂಗ್ರೆಸ್ ಮತಗಳು ಗುಬ್ಬಿ ಕ್ಷೇತ್ರದಲ್ಲಿ ಭದ್ರವಾಗಿದೆ. ಸೋಲು ಕಂಡು ಓಡಿ ಹೋಗುವ ಅಭ್ಯರ್ಥಿಗಳು ಅಥವಾ ವಲಸೆ ಬರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಅನಿವಾರ್ಯ ಈ ಬಾರಿ ಇಲ್ಲ. ನಮ್ಮಲ್ಲೇ ಅರ್ಹರಾದ ಹೊನ್ನಗಿರಿಗೌಡ, ಎಂ
ವಿ.ಶ್ರೀನಿವಾಸ್ ಮತ್ತು ಜಿ.ಎಸ್.ಪ್ರಸನ್ನಕುಮಾರ್ ಇದ್ದಾರೆ. ಈ ಮೂವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಎಲ್ಲಾ ಕಾರ್ಯಕರ್ತರು ಒಮ್ಮತದಲ್ಲಿ ದುಡಿಯಲಿದ್ದಾರೆ. ಆದರೆ ಐದು ವರ್ಷ ಸತತವಾಗಿ ಕ್ಷೇತ್ರದಲ್ಲಿ ಪಕ್ಷ ಕಟ್ಟಿದವರನ್ನು ಬಿಟ್ಟು ವಲಸೆ ಬಂದವರಿಗೆ ಮಣೆ ಹಾಕಿದ್ದಲ್ಲಿ ಮಾತ್ರ ಸಲ್ಲದ ಗೊಂದಲಕ್ಕೆ ಆಸ್ಪದ ನೀಡಿದಂತಾಗುತ್ತದೆ ಎಂದು ನೇರ ಸಂದೇಶವನ್ನು ಹೈಕಮಾಂಡ್ ಗೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಮ್ಮ ಸಂಬಂಧಿ ಎಂದು ಹೇಳಿದ ಗುಬ್ಬಿ ಶಾಸಕರು ಹೇಳಿಕೆಯಂತೆ ಚುನಾವಣೆಗೆ ಸಹಕಾರ ನೀಡಿದ್ದರು ಎನ್ನುವ ಬಗ್ಗೆ ಜಿಲ್ಲಾ ಘಟಕಕ್ಕೆ ದೂರು ನೀಡಿ ನೇರ ಕೆಪಿಸಿಸಿ ಗಮನಕ್ಕೆ ತರಲಾಗುವುದು ಎಂದು ಮುಖಂಡ ಜಿ.ಎಸ್.ಪ್ರಸನ್ನಕುಮಾರ್  ತಿಳಿಸಿದರು.

ಈ ಸಂದರ್ಭದಲ್ಲಿ ಗುಬ್ಬಿ ಬ್ಲಾಕ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಜಿಲ್ಲಾ ಕಾರ್ಯದರ್ಶಿ ಎಂ.ವಿ.ಶ್ರೀನಿವಾಸ್, ಮುಖಂಡರಾದ ಟಿ.ಆರ್.ಚಿಕ್ಕರಂಗಯ್ಯ, ಜಿ.ವಿ.ಮಂಜುನಾಥ್, ಕೆ.ಜಿ.ನಾರಾಯಣ್, ಜಿ.ಎಂ.ಶಿವಾನಂದ್, ಜಿ.ಎಸ್.ಮಂಜುನಾಥ್, ಜಿ.ಎಲ್.ರಂಗನಾಥ್, ವಿನಯ್, ಮಧು, ರೂಪಾ, ವಸಂತಮ್ಮ, ಬೃಂದಾ ಇತರರು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker