ಗುಬ್ಬಿ

ಗುಬ್ಬಿಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ, ಬಿಜೆಪಿ ಮುಖಂಡ ಬಿ.ಎಸ್.ನಾಗರಾಜು ಜೆಡಿಎಸ್ ಸೇರ್ಪಡೆ, ನಾಳೆ ಗೊಂದಲಕ್ಕೆ ಮುಕ್ತಿ..?

ಗುಬ್ಬಿ : ಗುಬ್ಬಿಯಲ್ಲಿ ನಡೆಯಲಿರುವ ಬಿಜೆಪಿ ಮುಖಂಡ ಬಿ.ಎಸ್.ನಾಗರಾಜು ಅವರ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಗ್ಗೆ ಕ್ಷೇತ್ರದಲ್ಲಿ ಸಲ್ಲದ ಗೊಂದಲ ಸೃಷ್ಟಿಯಾಗಿದ್ದು ಇದನ್ನು  ಬಗೆಹರಿಸುವ ಭರವಸೆಯನ್ನು  ಮಾಜಿ ಸಿ.ಎಂ ಎಚ್. ಡಿ.ಕುಮಾರಸ್ವಾಮಿಯವರು ತಿಳಿಸಿದ್ದಾರೆ ಎಂದು ಜೆ.ಡಿ.ಎಸ್.ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ ಸ್ಪಷ್ಟಪಡಿಸಿದರು.
ಗುಬ್ಬಿ ಪಟ್ಟಣದ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶದ ಪೂರ್ವ ತಯಾರಿ ವೀಕ್ಷಿಸಿ ಮಾತನಾಡಿದ ಅವರು ವರಿಷ್ಠರ ತೋಟದಮನೆಗೆ ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಬರಲು ಸೂಚಿಸಿದ್ದು ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಿದ್ದಾರೆ ಎಂದರು.
ಜೆಡಿಎಸ್ ನ ಯಾವ ಘಟಕಕ್ಕೂ ಪಕ್ಷ ಅಗೌರವ ತೋರಿಲ್ಲ.ಈ ಸಮಾವೇಶಕ್ಕೆ ಎಲ್ಲಾ ಘಟಕದ ಪದಾಧಿಕಾರಿಗಳಿಗೆ ಬರಲು ವರಿಷ್ಠರೇ ಸೂಚಿಸಿದ್ದಾರೆ. ಈ ಜೊತೆಗೆ ತಾಲ್ಲೂಕು ಅಧ್ಯಕ್ಷರಿಗೆ ಖುದ್ದು ಆಹ್ವಾನ ನೀಡಿ ನಂತರದಲ್ಲಿ ನಾಗರಾಜು ಅವರ ಸೇರ್ಪಡೆಗೆ ತಯಾರಿ ನಡೆಸಲು ತಿಳಿಸಿದ್ದಾರೆ. ಜೊತೆಗೆ ಏನೇ ಗೊಂದಲವಿದ್ದರೂ ನಮ್ಮನ್ನು ಭೇಟಿ ಮಾಡಿ ಬಗೆಹರಿಸಿಕೊಳ್ಳಿ ಎಂದು ಸೂಚಿಸಿದ್ದಾರೆ ಎಂದು ತಿಳಿಸಿದರು.
 ಕಳೆದ ಎರಡು ವರ್ಷಗಳಿಂದ ಕರೋನಾ ಹಿನ್ನಲೆ ಪಕ್ಷ ಸಂಘಟನೆ ಸಮಾವೇಶ ಜಿಲ್ಲೆಯಲ್ಲಿ ಮಾಡಿರಲಿಲ್ಲ. ಸ್ಥಳೀಯ ಚುನಾವಣೆ ಉದ್ದೇಶದಿಂದ ಬಲವರ್ಧನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮಾವೇಶ ಜೊತೆಗೆ ಪ್ರಭಾವಿ ಮುಖಂಡರ ಸೇರ್ಪಡೆ ಮಾಡಿಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದರು.
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಗುಬ್ಬಿ ಶ್ರೀನಿವಾಸ್ ಅವರು ಮತ್ತು ಪಕ್ಷದ ವರಿಷ್ಠರ ನಡುವಿನ ಅಂತರ ಎಲ್ಲಾ ಪಕ್ಷದಲ್ಲಿರುವ ಭಿನ್ನಾಭಿಪ್ರಾಯದಂತೆ ಇರಬಹುದು. ದೊಡ್ಡವರ ವಿಚಾರ ತಿಳಿದಿಲ್ಲ. ಆದರೆ ಸಮಾವೇಶಕ್ಕೆ ಶಾಸಕರಿಗೆ ನಾನು ಖುದ್ದು ಆಹ್ವಾನ ನೀಡಿದ್ದೇನೆ. ಜೊತೆಗೆ ಸೇರ್ಪಡೆಯಾಗುವ ನಾಗರಾಜು ಅವರು ಸಹ ಆಹ್ವಾನ ನೀಡಿದ್ದಾರೆ. ಅವರು ಕಾರ್ಯಕ್ರಮಕ್ಕೆ ಆಗಮಿಸುವ ವಿಶ್ವಾಸವಿದೆ ಎಂದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಪಕ್ಷದ ಜವಾಬ್ದಾರಿ ಹೊತ್ತ ಎಲ್ಲಾ ಪದಾಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಆಗಮಿಸಿ ಈ ಸೇರ್ಪಡೆ ಕಾರ್ಯಕ್ರಮ ಯಶಸ್ವಿ ಮಾಡಲಿದ್ದಾರೆ. ಈ ಜೊತೆಗೆ ಎಲ್ಲಾ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಬೇಕು ಎಂದು ಮನವಿ ಮಾಡಿದರು.
ನಂತರ ಮೈದಾನದಲ್ಲಿ ವೇದಿಕೆ ಸಿದ್ಧತೆ ಕುರಿತು ವೀಕ್ಷಸಿ ಕೆಲ ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬೀರಮಾರನಹಳ್ಳಿ ನರಸೇಗೌಡ, ಮಹ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಹಿರಿಯ ಉಪಾಧ್ಯಕ್ಷ ದೇವರಾಜ್, ರಾಜ್ಯ ಸಂಚಾಲಕ ಬೆಳ್ಳಿ ಲೋಕೇಶ್,  ಮುಖಂಡರಾದ ಬಿ.ಎಸ್.ನಾಗರಾಜು, ಲಕ್ಷ್ಮೀಪತಿ, ಗಂಗಣ್ಣ, ಶ್ರೀನಿವಾಸ್ ಇತರರು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker