ಮರಳುದಂಧೆಕೋರರಿಂದಲೇ ಮಸಾಲಜಯರಾಮ್ ಗೆದ್ದಿದ್ದು : ಎಂ.ಟಿ.ಕೃಷ್ಣಪ್ಪ
ಮಸಾಲೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ

ತುರುವೇಕೆರೆ : ನನ್ನನ್ನು ಕುರಿತು ಮರಳುದಂಧೆಕೋರ ಎಂದು ಹೇಳಿಕೆ ನೀಡುತ್ತಿರುವ ಮಸಾಲಜಯರಾಮ್‌ರವರೇ ನಿಮ್ಮ ಗೆಲುವಿಗೆ ಮರಳುದಂಧೇಕೋರರು ಸಾತ್ ನೀಡಿದ್ದರು ಎಂಬುದನ್ನು ಮರೆತಂತಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಟಾಂಗ್ ನೀಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲಲು ಮರಳುದಂಧೆಯನ್ನು ನಿಯಂತ್ರಿಸಿದ್ದೇ ಕಾರಣ, ಇದು ಕ್ಷೇತ್ರದ ಜನರಿಗೆ ತಿಳಿದಿರುವ ವಿಚಾರ, ನಾನು ಶಾಸಕನಾಗಿರುವ ತನಕ ಅಕ್ರಮ ಮರಳುದಂದೆಗೆ ಕಡಿವಾಣ ಹಾಕಿದ್ದೆ, ಚುನಾವಣೆ ವೇಳೆ ಅಕ್ರಮ ಮರಳುದಂಧೆ ನೆಡೆಸುತ್ತಿದ್ದವರೆಲ್ಲಾ ಮಸಾಲಜಯರಾಮ್‌ರಿಗೆ ಸಾಥ್ ನೀಡಿದ್ದರು, ಮರಳುದಂದೆ ಕೋರರಿಂದ ನಾನು ಹಣ ವಸೂಲಿ ಮಾಡುತ್ತಿದ್ದೇ ಎಂದು ಹೇಳಿರುವ ಮಸಾಲಜಯರಾಮ್ ಅದನ್ನು ಸಾಬೀತು ಮಾಡಲಿ ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವೆ ಎಂದು ಎಚ್ಚರಿಸಿದರು.
ಸಾಮಾಜಿಕ ನ್ಯಾಯಕ್ಕಾಗಿ ಹೋರಾಟಕ್ಕಿಳಿದ ನನ್ನ ವಿರುದ್ದ 6 ಪ್ರಕರಣಗಳು ದಾಖಲಾಗಿವೆ. ಇದರ ಹಿಂದೆ ಮಸಾಲಜಯರಾಮ್ ಇದ್ದಾರೆ. ಕ್ಷೇತ್ರದ ಅಬಿವೃದ್ದಿ ಮಾಡಿದ್ದೇನೆಂದು ಹೇಳುವ ಮಸಾಲಜಯರಾಮ್ ನನ್ನ ಅವಧಿಯಲ್ಲಿ ಅನುಮೋದನೆಗೊಂಡ ಕಾಮಗಾರಿಗಳಿಗೆ ಪ್ಲಕ್ಸ್ ಹಾಕಿಕೊಂಡು ಭೂಮಿಪೂಜೆ ಮಾಡುತ್ತಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೇ ಒಂಧು ನೂತನ ಶಾಲಾ ಕಾಲೇಜು ತೆರೆಯದ ಇವರ ಸಾದನೆ ಇದ್ದರೇ ಶ್ವೇತ ಪತ್ರ ಹೊರಡಿಸಿ ಜನತೆಯ ಮುಂದಿಡಲಿ ಎಂದು ಸವಾಲು ಹಾಕಿದರು.
ಕ್ಷೇತ್ರದ ಎಲ್ಲಾ ಕೆರೆಕಟ್ಟೆಗಳಿಗೆ ಹೇಮೆಯ ನೀರು ಹರಿಯಲು ಕಾರಣೀಭೂತರಾದ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರಿಗೆ ಕ್ಷೇತ್ರದ ಎಲ್ಲರ ಪರವಾಗಿ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಷೇತ್ರದ ಕೆರೆಕಟ್ಟೆಗಳನ್ನು ತುಮಭಿಸಲು ಮಸಾಲಜಯರಾಮ್ ಶ್ರಮ ಏನೂ ಇಲ್ಲ, ಬದಲಿಗೆ ಉತ್ತಮ ಮಳೆಯಾಗುತ್ತಿರುವುದರಿಂದ ಡ್ಯಾಂ ಭರ್ತಿಯಾಗಿ ನೀರು ಹರಿಸಲು ಸಾದ್ಯವಾಗಿದೆ ಅಷ್ಟೇ, ಇದನ್ನು ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಹಿಂಧೆ ಹೇಮೆಗಾಗಿ ರೈತರೊಟ್ಟಿಗೆ ಹೋರಾಟ ನೆಡೆಸಿ ಕೆರೆಗಳನ್ನು ತುಂಬಿಸಿದ್ದೇನೆ ಎಂದರು.
ತುರುವೇಕೆರೆ ಠಾಣೆಯಲ್ಲಿರುವ ಪಿ.ಎಸ್.ಐ. ಕೇಶವಮೂರ್ತಿ ಉತ್ತಮ ಅಧಿಕಾರಿಯಾಗಿದ್ದಾರೆ. ಠಾಣೆಗೆ ಬರುವ ಬಡವರ ಹಾಗೂ ನೊಂಧವರ ಪರ ನ್ಯಾಯ ನೀಡುವಲ್ಲಿ ಶ್ರಮ ವಹಿಸುತ್ತಿದ್ದಾರೆ. ಮರಳುದಂಧೆ ಇಸ್ಪೀಟ್ ದಂಧೆ, ಸೇರಿದಂತೆ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹವರ ವಿರುದ್ದ ಕೆಲವರು ತಮ್ಮ ಬೆಳೆ ಬೇಯಿಸಿಕೊಳ್ಳಲು ಸಲ್ಲದ ಹೇಳಿಕೆ ನೀಡುತ್ತಿರುವುದು ಥರವಲ್ಲ, ದಕ್ಷ ಅಧಿಕಾರಿಯಾದ ಕೇಶವಮೂರ್ತಿಯ ಕಾರ್ಯವನ್ನು ಶ್ಲಾಘನೀಯ ಎಂದರು.
ಗೋಷ್ಟಿಯಲ್ಲಿ ಜೆ.ಡಿ.ಎಸ್. ಅಧ್ಯಕ್ಷ ಸ್ವಾಮಿ, ಯುವ ಜೆ.ಡಿ.ಎಸ್. ಅದ್ಯಕ್ಷ ರಮೇಶ್,ಜಿ.ಪಂ. ಮಾಜಿ ಅಧ್ಯಕ್ಷ ಹನುಮಂತಯ್ಯ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸಬವರಾಜು, ವಕ್ತಾರ ಯೋಗಿಶ್‌ವೆಂಕಟಾಪುರ ಮ ಬಡಾವಣೆಶಿವರಾಜ್ ಮತ್ತಿತರಿದ್ದರು.