ವಿದ್ಯಾರ್ಥಿಗಳು ಪ್ರತಿ ನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಬರಗೂರು ಕಿರಣ್
ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ

ಹುಳಿಯಾರು : ಮುದ್ರಿತ ಪತ್ರಿಕೆಗಳ ಓದುವಿಕೆಯಿಂದ ದೊರಕುವ ಜ್ಞಾನ ಆಧುನಿಕ ಡಿಜಿಟಲ್ ತಂತ್ರಜ್ಞಾನದಿಂದ ದೊರಕದು. ಹಾಗಾಗಿ ವಿದ್ಯಾರ್ಥಿಗಳು ಮುದ್ರಿತ ಪತ್ರಿಕೆಗಳನ್ನು ಓದಬೇಕು ಎಂದು ಸಮಾಜ ಸೇವಕ ಬರಗೂರು ಕಿರಣ್ ತಿಳಿಸಿದರು.
ಹುಳಿಯಾರು ಸಮೀಪದ ಬರಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪತ್ರಿಕೆಗಳ ಸುದ್ದಿಗಳು, ಲೇಖನಗಳು, ಸಾಹಿತ್ಯಗಳು ಒದಗಿಸುವ ಜ್ಞಾನವನ್ನು ಆಧುನಿಕ ತಂತ್ರಜ್ಞಾನದ ಮಾಧ್ಯಮಗಳು ನೀಡುವುದಿಲ್ಲ. ಪತ್ರಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ಓದಿದರೆ ಸಿಗುವ ಮನತೃಪ್ತಿ ಆಧುನಿಕ ಮೊಬೈಲ್ ಮಾಧ್ಯಮಗಳು ನೀಡುವ ಮಾಹಿತಿಗಳಿಂದ ದೊರಕದು ಎಂದರಲ್ಲದೆ ವಿದ್ಯಾರ್ಥಿಗಳು ಪ್ರತಿ ನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಸಾಕಷ್ಟು ಜ್ಞಾನಸಂಪಾದನೆಯಾಗಿ ವಿದ್ಯಾಭ್ಯಾಸಕ್ಕೂ ಸಾಕಷ್ಟು ನೆರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಆರ್.ಚಂಪಾ, ಪಿ.ಆರ್.ಪ್ರಿಯಾಂಕ, ರಕ್ಷಿತ್, ಚಂದನ್, ಟಿ.ಎಂ.ಪವನ್, ಜ್ವಾನಮೂರ್ತಿ, ಸಿ.ಪ್ರದೀಪ್ ಅವರುಗಳನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಮಲ್ಲಯ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷರಾದ ಮೀನಾಕ್ಷಮ್ಮ, ಸದಸ್ಯರಾದ ರುದ್ರೇಶ್, ಶಾಲೆಯ ಶಿಕ್ಷಕರುಗಳಾದ ಎಚ್.ಜಿ.ರೇಣುಕಪ್ಪ, ಎಸ್.ಚಂದ್ರಶೇಖರಯ್ಯ, ಕೆ.ಪಿ.ಜಯದೇವಮೂರ್ತಿ, ಎಚ್.ಚಂದ್ರಪ್ಪ, ಎ.ಬಿ.ಪ್ರಕಾಶ್, ಎಚ್.ಎಸ್.ಚಂದ್ರಶೇಖರ್, ಈ.ಶೇಖರಪ್ಪ, ಬಿ.ಆರ್.ಬಸವರಾಜು, ಹಿರಿಯ ವಿದ್ಯಾರ್ಥಿಗಳಾದ ಅರುಣ್‌ಕುಮಾರ್, ಯೋಗೀಶ್, ವಸಂತಕುಮಾರ್, ನಾಗೇಶ್ ಉಪಸ್ಥಿತರಿದ್ದರು.