ಶಿರಾ : ನಮ್ಮ ನಾಡಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯ ಗತ ವೈಭವ ಜಂಬೂ ಸವಾರಿ ಉತ್ಸವ, ಪ್ರತಿ ಗ್ರಾಮಗಳಲ್ಲಿ ನಡೆಯುವಂತ ಇಂತಹ ದೇವತಾ ಉತ್ಸವಗಳು ಜನರ ಸ್ನೇಹ-ಸಂಭಂದಗಳನ್ನು ಗಟ್ಟಿಗೊಳಿಸಿ ಸಾಮರಸ್ಯದ ಜೀವನಕ್ಕೆ ಭದ್ರ ಬುನಾದಿ ಹಾಕುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಹೇಳಿದರು.
ಅವರು ತಾಲೂಕಿನ ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮದ ಪ್ರಸಿದ್ಧ ಶ್ರೀ ಅಂಭಾ ದೇವಿ ದೇವಸ್ಥಾನ ಆವರಣದಲ್ಲಿ ನಡೆದ ವಿಜಯದಶಮಿ ಕಾರ್ಯಕ್ರಮದಲ್ಲಿ ಬನ್ನಿ ಮರಕ್ಕೆ ಬಾಣ ಹೊಡೆಯುವ ಧಾರ್ಮಿಕ ಕಾರ್ಯ ನೆರವೇರಿಸಿ ಮಾತನಾಡಿದರು. ಶಿರಾ ತಾಲೂಕಿನ ಜನತೆಗೆ ನವರಾತ್ರಿ ಹೆಚ್ಚು ಹರ್ಷ ಮೂಡಿಸಿದೆ ವರುಣನ ಕೃಪೆ ಜೊತೆಗೆ ಸತತವಾಗಿ ಶಿರಾ ಭಾಗಕ್ಕೆ ಹೇಮಾವತಿ ನೀರು ಹರಿಸಿದ ಕಾರಣ ಕಳ್ಳಂಬೆಳ್ಳ ಮತ್ತು ಶಿರಾ ದೊಡ್ಡ ಕೆರೆ ಕೊಡಿ ಬಿದ್ದಿವೆ. ಇದಲ್ಲದೇ ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿಗಳ ಜನರ ಮಹತ್ವಾಕಾಂಕ್ಷೆಯಂತೆ ಮದಲೂರು ಕೆರೆಗೆ ಸರಕಾರ ಕೊಟ್ಟ ಮಾತಿನಂತೆ 2ನೇ ವರ್ಷ ಕೊಡ ನೀರು ಹರಿಸಿರುವುದು. ಈ ಮೂರು ಕೆರೆಗಳಲ್ಲಿ ನೀರು ಇರುವ ಕಾರಣ ಕುಡಿಯುವ ನೀರಿನ ಸಮಸ್ಯೆ ದೂರವಾಗಲಿದೆ. ಈಗಾಗಲೇ ಅಪ್ಪರ ಭದ್ರ ಯೋಜನೆ ಕಾಮಗಾರಿ ಕೊಡ ಪ್ರಗತಿಯಲ್ಲಿದ್ದು 2ವರ್ಷದಲ್ಲಿ ಶಿರಾ ತಾಲೂಕಿನ 65 ಕೆರೆಗಳು ನೀರು ಕಾಣಲಿವೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಸಾರಿಗೆ ಅಧಿಕಾರಿ ತಿಮ್ಮರಾಯಪ್ಪ, ಶ್ರೀಅಂಭಾದೇವಿ ದೇವಸ್ಥಾನದ ಪ್ರಧಾನ ಆರ್ಚಕ ಶಶಿಧರ್, ಹೊಸಹಳ್ಳಿ ಸಿದ್ದಲಿಂಗಪ್ಪ, ನಾಗರಾಜು, ಹೊಸ್ಮನೆ ರಂಗನಾಥ್, ವಕೀಲ ವಿಶ್ವನಾಥ್, ನಟರಾಜು, ಪ್ರಕಾಶ್, ಪುಟ್ಟಯ್ಯ ಸೇರಿದಂತೆ ನೂರಾರು ಜನ ಭಕ್ತರು ಭಾಗವಹಿಸಿದ್ದರು.