ಚಿಕ್ಕನಾಯಕನಹಳ್ಳಿ

ಮಕ್ಕಳಲ್ಲಿನ ಅನಾರೋಗ್ಯಕರ ಆಹಾರದ ಹಂಬಲ ಬಿಡಿಸಿ : ರಾಮಕೃಷ್ಣಪ್ಪ

ಹುಳಿಯಾರು : ಮಕ್ಕಳೀಗ ಸೋಷಿಯಲ್ ಮೀಡಿಯಾದ ಪ್ರಭಾವದಿಂದ ಅನಾರೋಗ್ಯಕರ ಆಹಾರದ ಹಂಬಲಕ್ಕೆ ಬಲಿಯಾಗಿ ತಮ್ಮ ಮುಂದಿನ ಬದುಕನ್ನು ಅಸಹನೀಯಗೊಳಿಸಿಕೊಳ್ಳುತ್ತಿದ್ದಾರೆ ಎಂದು ಸುವರ್ಣ ವಿದ್ಯಾ ಚೇತನದ ಅಧ್ಯಕ್ಷರಾದ ರಾಮಕೃಷ್ಣಪ್ಪ ಆತಂಕ ವ್ಯಕ್ತಪಡಿಸಿದರು.
ಹುಳಿಯಾರು ಸಮೀಪದ ಯಗಚಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಹುಳುಕಾಗುವಂತೆ ಮಾಡುವ, ಬಣ್ಣಗಳಿಂದ ಅಲರ್ಜಿಗೆ ಕಾರಣವಾಗುವ, ಕೆಫಿನ್‌ನಿಂದ ನರದೌರ್ಬಲ್ಯ ಸೃಷ್ಠಿಸುವ ತಂಪು ಪಾನೀಯಗಳು ಮಕ್ಕಳನ್ನು ಆಕರ್ಷಸಿವೆ ಎಂದರು.
ಖ್ಯಾತ ಆಹಾರ ತಜ್ಞ, ವಿಜ್ಞಾನಿ ಡಾ.ಖಾದರ್ ಅವರ ಪ್ರಕಾರ ಮಕ್ಕಳು ಬಹುವಾಗಿ ಇಷ್ಟ ಪಡುವ ಚಾಕೋಲೆಟ್‌ಗಳಲ್ಲಿ ಶೇಕಡ 4 ರಷ್ಟು ಜಿರಲೆಯ ಭಾಗಗಳಿದ್ದು ಆವು ಮಕ್ಕಳಿಗೆ ಆಸ್ತಮಾದಂತಹ ಕಾಯಿಲೆಗಳನ್ನು ತಂದೊಡ್ಡುತ್ತವೆ, ಹಲ್ಲುಗಳು ಹಾಳಾಗುತ್ತವೆ. ದೇಹದ ತೂಕ ಹೆಚ್ಚಿಸುವ, ಮೂಳೆಗಳಲ್ಲಿ ರಂದ್ರಗಳನ್ನುಂಟು ಮಾಡುವ ಚಾಕಲೇಟ್‌ಗಳಿಂದ ಮಕ್ಕಳನ್ನು ದೂರವಿಡಿ ಎಂದು ಸಲಹೆ ನೀಡಿದರು.
ಮಕ್ಕಳು ಪೋಷಕರನ್ನು ಕೊಡಿಸಿ ಎಂದು ಪೀಡಿಸುವ ಆಹಾರಗಳೆಂದರೆ ಮೈದಾ ಹಿಟ್ಟಿನಿಂದ ತಯಾರಿಸಿದ ಬ್ರೆಡ್, ಬಿಸ್ಕತ್, ಕೇಕ್‌ನಂತಹ ಬೇಕರಿ ತಿವನಿಸುಗಳು. ಅಲಾಕ್ಸಿನ್, ಬೆಂಜೈಲ್ ಪರಾಕ್ಸೆöÊಡ್ ನಂತಹ ಮೈದಾಹಿಟ್ಟನ್ನು ಬ್ಲೀಚ್ ಮಾಡಲು ಬಳಸುವ ರಾಸಾಯನಿಕಗಳು ಮೇದೋಜೀರಕವನ್ನು ನಿಷ್ಕಿçಯಗೊಳಿಸಿ ಮಧುಮೇಹವನ್ನುಂಟು ಮಾಡುವುದಲ್ಲದೆ ನಾರಿನಂಶ ಇಲ್ಲದ ಕಾರಣ ಮೈದಾ ಮಲಬದ್ದತೆಗೂ ಕಾರಣವಾಗುತ್ತದೆ. ಬೇಕರಿ ತಿನಿಸುಗಳಲ್ಲಿನ ಡಾಲ್ಡಾ, ಸಕ್ಕರೆ, ಹಾರ್ಮೋನ್‌ಯುಕ್ತ ಹಾಲಿನಿಂದಲೂ ಸಹ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇಂತಹ ಅನಾರೋಗ್ಯಕರ ಆಹಾರದ ಹಂಬಲವನ್ನು ಬಿಡಿಸಿ ಮಕ್ಕಳಿಗೆ ಕಷಾಯಗಳು, ಮಜ್ಜಿಗೆ ಎಳನೀರಿನಂತಹ ಪಾನೀಯಗಳು, ಸಿರಿಧಾನ್ಯಗಳು, ಸ್ಥಳೀಯ ಹಣ್ಣುಗಳು, ತರಕಾರಿಗಳನ್ನು ಬಳಸುವಂತೆ ಪ್ರೇರೇಪಿಸಬೇಕು. ಆಗ ಷೋಷಣಾ ಅಭಿಯಾನದ ಆಶಯವು ಸಾಕಾರಗೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀಕಾಂತ್ ವಹಿಸಿದ್ದರು.
ಗ್ರಾಮ ಪಂಚಾಯ್ತಿ ಸದಸ್ಯ ಬಾಪು ಗಿರೀಶ್, ಎಸ್.ಡಿ.ಎಂ. ಸಿ .ಸದಸ್ಯರಾದ, ನಾಗರಾಜು, ನಸ್ರೀಮಾ ಬಾನು, ಸದಾನಂದ್, ಸಿ.ಆರ್.ಪಿ.ಗಳಾದ ಸಿ.ಲೋಕೇಶ್, ರೋಹಿಯಾ ಖಾನಂ, ಪೋಷಕರಾದ ಮಂಜುಳಾ, ಪುಟ್ಟಮ್ಮ, ಜಯಮ್ಮ, ತಮ್ಮಯ್ಯ, ಸಿದ್ಧಲಿಂಗಯ್ಯ, ರಾಮಯ್ಯ ಮುಂತಾದವರು ಭಾಗವಹಿಸಿದ್ದರು.
ಪೋಷಣಾ ಅಭಿಯಾನದ ಅಂಗವಾಗಿ ತಾಲೂಕು ವಿಜ್ಞಾನ ಕೇಂದ್ರದ ಅಧ್ಯಕ್ಷೆ ಎನ್.ಇಂದಿರಮ್ಮ, ಯು.ಪಿ.ಉಮಾದೇವಿ ಇವರು ಸಂಗ್ರಹಿದ್ದ ಔಷಧಿ ಸಸ್ಯಗಳು, ಹುಳಿಯಾರು ಸೃಜನಾ ಅಧ್ಯಕ್ಷೆ ಪೂರ್ಣಮ್ಮ ಸಿದ್ಧಪಡಿಸಿದ್ಧ ಸಿರಿಧಾನ್ಯಗಳು ಶಾಲಾ ಮುಖ್ಯ ಶಿಕ್ಷಕ ಶಿವಣ್ಣ, ಶಿಕ್ಷಕರಾದ ಲತಾ, ದುರ್ಗಮ್ಮ, ಸಿದ್ಧಲಿಂಗಯ್ಯ ಸ್ಥಳೀಯವಾಗಿ ಲಭ್ಯವಿರುವ ಧಾನ್ಯಗಳು, ಬೇಳೆ ಕಾಳುಗಳು, ಎಣ್ಣೆಕಾಳುಗಳು, ಹಣ್ಣು- ಕಾಯಿಗಳು, ತರಕಾರಿ ಗಳನ್ನು ಪ್ರದರ್ಶನಕ್ಕಿಟ್ಟು ಅವುಗಳ ಮಹತ್ವವನ್ನು ನೋಡುಗರಿಗೆ ತಿಳಿಸಿಕೊಟ್ಟರು.
ಯಗಚಿಹಳ್ಳಿ, ಮಾರುಹೊಳೆ, ಕೆ,ಎಸ್.ಪಾಳ್ಯ, ಕಾರೆಹಳ್ಳಿ ಮಕ್ಕಳು ಭಾಗವಹಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker