ತಿಪಟೂರು
ಪಶುವೈದ್ಯಕೀಯ ಪರೀಕ್ಷಕರ ಸಂಘಕ್ಕೆ ನೂತನ ಪದಾದಿಕಾರಿಗಳ ಆಯ್ಕೆ
ತಿಪಟೂರು : ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘ ಬೆಂಗಳೂರು ಇದರ ತುಮಕೂರು ಜಿಲ್ಲಾ ಘಟಕದ ನೂತನ ಪದಾದಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ವೀರಭದ್ರಸ್ವಾಮಿ, ಅಧ್ಯಕ್ಷರಾಗಿ ಶ್ರೀನಿವಾಸ್ ಟಿ.ವಿ, (ಗುಬ್ಬಿ) ಉಪಾಧ್ಯಕ್ಷರಾಗಿ ರಾಮಮೋಹನ್, (ತುಮಕೂರು) ಕಾರ್ಯದರ್ಶಿಯಾಗಿ ಕೆ ಎಸ್ ರುದ್ರಸ್ವಾಮಿ(ತಿಪಟೂರು) ಜಂಟಿ ಕಾರ್ಯದರ್ಶಿಯಾಗಿ ಮಹೇಶ್, (ಕೊರಟಗೆರೆ) ಖಜಾಂಚಿ ಬಾಣಪ್ಪ (ತುಮಕೂರು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ಕೇಂದ್ರ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಸಿ ಸೋಮಶೇಖರ್ ತಿಳಿಸಿದ್ದಾರೆ. ಜೊತೆಯಲ್ಲಿ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘದ ರಾಜ್ಯಾಧ್ಯಕ್ಷ ವೆಂಕಟರಾಜು ಹಾಜರಿದ್ದರು.