ಕೊರಟಗೆರೆ
ಟೆಂಪೋ ಪಲ್ಟಿ : 20 ಕ್ಕೂ ಹೆಚ್ಚೂ ಕುರಿ ಮೇಕೆಗಳ ಸಾವು
ಕೊರಟಗೆರೆ : ರಾಜ್ಯದ ಪ್ರಮುಖ ಕುರಿ-ಮೇಕೆ ಮಾರುಕಟ್ಟೆಯಾದ ಅಕ್ಕಿ ರಾಂಪುರದಲ್ಲಿ ಇಂದು ಕುರಿ ಟೆಂಪೋ ಪಲ್ಟಿ ಹೊಡೆದು 13 ಮೇಕೆ 7 ಕುರಿ ಸಾವಿಗೀಡಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದಿರುವುದು ದೊಡ್ಡ ಅವಗಡ ತಪ್ಪಿದಂತಾಗಿದೆ.
ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಕುರಿ ಮೇಕೆ ಸಂತೆ ರಾಜ್ಯದಲ್ಲಿ ಪ್ರಸಿದ್ಧವಾದ ವಹಿವಾಟಿನ ಪ್ರಮುಖ ಸ್ಥಾನವಾಗಿದ್ದು, ರಾಜ್ಯ ಸೇರಿದಂತೆ ಹೊರರಾಜ್ಯ ಆಂಧ್ರ- ತಮಿಳುನಾಡು ಗಳಿಂದಲೂ ಇಲ್ಲಿಗೆ ಬಂದು ವೈವಾಟು ನಡೆಸುವುದು ಸಾಮಾನ್ಯವಾಗಿದ್ದು ಇಂದು ಕುರಿ-ಮೇಕೆ ತುಂಬಿಕೊಂಡು ಮಾರ್ಕೆಟ್ ನಿಂದ ಒಂದು ಹೆಜ್ಜೆ ಮುಂದೆ ಸಾಗಿದ ತಕ್ಷಣ ಸಾರ್ವಜನಿಕ ಕಿರು ನೀರು ಸರಬರಾಜು ಪೈಪ್ಲೈನ್ ಗುಂಡಿ ಇಳಿದು ಟೆಂಪೋ ಮುಗುಚಿ ಬಿದ್ದ ಪರಿಣಾಮ ಟೆಂಪೋದಲ್ಲಿದ್ದ 20 ಕುರಿ ಮೇಕೆಗಳು ಸಿಲುಕಿ ಸಾವಿಗೀಡಾಗಿದ್ದು ಅದೃಷ್ಟವಶಾತ್ ಮಾರ್ಕೆಟ್ ನಲ್ಲಿ ಹೆಚ್ಚು ಜನರಿದ್ದರು ಯಾವುದೇ ಪ್ರಾಣಾಪಾಯ ವಾಗುತ್ತಿರುವುದು ದೊಡ್ಡ ಅವಘಡವೇ ತಪ್ಪಿದಂತಾಗಿದೆ,
ರಾಜ್ಯದ ದೊಡ್ಡ ವಹಿವಾಟು ಕೇಂದ್ರದಲ್ಲೊಂದಾದ ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ಮಾರುಕಟ್ಟೆ ತುಮಕೂರಿನ ಎಪಿಎಂಸಿ ಅಧೀನದಲ್ಲಿ ನಡೆಯುತ್ತಿದ್ದು, ಹಬ್ಬ-ಹರಿದಿನಗಳಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯಲಿದ್ದು ಇಲ್ಲಿ ಮೂಲಭೂತ ಸೌಕರ್ಯಗಳ ಇಲ್ಲದಿರುವುದು ಇಲ್ಲಿನ ಕಾರ್ಯವ್ಯಾಪ್ತಿಯ ಕಾರ್ಯ ವೈಖರಿಗೆ ಹಿಡಿದ ಕನ್ನಡಿಯಾಗಿದೆ,
ಮಾರುಕಟ್ಟೆಯಲ್ಲಿ ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ಅತ್ಯಾಧುನಿಕವಾಗಿ ವ್ಯವಹರಿಸಲು ಯಾವುದೇ ವ್ಯವಸ್ಥೆ ಇಲ್ಲದಿರುವುದು ಒಂದು ದುರದೃಷ್ಟಕರ ಸಂಗತಿಯಾಗಿದ್ದು, ಬೇರೆ ಮಾರುಕಟ್ಟೆಗಳಿಗೆ ಹೋಲಿಸಿದರೆ ಹಣಕಾಸಿನ ವಹಿವಾಟಿನಲ್ಲಿ ಹೆಚ್ಚು ವ್ಯವಹಾರ ಹೊಂದಿದ್ದರು ರೈತರಿಗೆ ಹಾಗೂ ಬಡವರಿಗೆ ಆಧುನಿಕ ರೀತಿಯಲ್ಲಿ ವ್ಯವಹಾರ ದಕ್ಕದೆ ತೂಕಕ್ಕೆ ತಕ್ಕಂತೆ ಬೆಲೆ ಸಿಗದೆ ಎಲ್ಲಾ ರೀತಿಯಲ್ಲೂ ಬೇಕಾಬಿಟ್ಟಿ ವ್ಯವಹಾರ ನಡೆಯುತಿದ್ದು, ಇಂದು ವಿಜಯದಶಮಿ ಹಬ್ಬಕ್ಕೆ ಆಯುಧ ಪೂಜೆಯ ಪ್ರಯುಕ್ತ ಕುರಿ ಮೇಕೆಗಳು ಹೆಚ್ಚು ವ್ಯಾಪಾರ-ವಹಿವಾಟು ನಡೆದಿದ್ದು ಹೆಚ್ಚು ಜನಸಂದಣಿ ಇದ್ದಂತ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು ಯಾವುದೇ ಪ್ರಾಣಾಪಾಯ ವಾಗದೆ ಇರುವುದು…
ರಾಜ್ಯದಲ್ಲಿ ಹೆಚ್ಚು ವೈವಾಟು ನಡೆಯುವ ಮಾರುಕಟ್ಟೆಗಳಲ್ಲಿ ಅಕ್ಕಿರಾಂಪುರ ಮಾರುಕಟ್ಟೆಯು ಪ್ರಮುಖವಾಗಿದ್ದು ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ, ಪಾರ್ಕಿಂಗ್ ವ್ಯವಸ್ಥೆಯಾಗಲಿ, ಅತ್ಯಾಧುನಿಕ ರೀತಿಯಲ್ಲಿ ವ್ಯವಹರಿಸುವಂತ ಯಾವುದೇ ಸೌಕರ್ಯವಿಲ್ಲ ದಿರುವುದು ದುರದೃಷ್ಟಕರವಾಗಿದ್ದು , ಇಷ್ಟು ದೊಡ್ಡ ಮಟ್ಟದ ವೈವಾಟು ಕೇಂದ್ರದಲ್ಲಿ ಜನರನ್ನು ತಹಬಂದಿಗೆ ತರುವ ಪೊಲೀಸ್ ವ್ಯವಸ್ಥೆ ಸೇರಿದಂತೆ ರೈತರಿಗೆ ಅನುಕೂಲಕರವಾಗುವಂತ ಯಾವುದೇ ಸೌಕರ್ಯ ಇಲ್ಲದಿರುವುದು ದುರಾದೃಷ್ಟಕರ ಸಂಗತಿಯಾಗಿದ್ದು ಜೊತೆಗೆ ಇಂದು ನಡೆದಂತಹ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗದದಿರುವುದು ಪವಾಡ ಸದೃಶ್ಯ ವಾಗಿದ್ದು, ಈ ಘಟನೆಗೆ ಅವೈಜ್ಞಾನಿಕ ಟ್ರಂಚ್ ಗಳು ಕಾರಣವಾಗಿದೆ .