ಅತಿಶೀಘ್ರದಲ್ಲಿ ಮದಲೂರು ಕೆರೆಗೆ ಹೇಮಾವತಿ ನೀರು : ಸಚಿವ ಜೆ.ಸಿ.ಮಾಧುಸ್ವಾಮಿ.

ಶಿರಾ : ಶಿರಾ ಕ್ಷೇತ್ರದ ಜನರ ಕುಡಿಯುವ ನೀರಿನ ಉದ್ದೇಶಕ್ಕೆ ಹೇಮಾವತಿ ಡ್ಯಾಂನಿಂದ 0.9 ಟಿಎಂಸಿ ನೀರು ನಿಗದಿಯಾಗಿದೆ. ಕಳೆದ ಹಲವಾರು ದಿನಗಳಿಂದ 0.4 ಟಿಎಂಸಿ ನೀರು ಕಳ್ಳಂಬೆಳ್ಳ ಮತ್ತು ಶಿರಾ ದೊಡ್ಡಕೆರೆ ಹರಿಸಿದ ಕಾರಣ ಜೊತೆಗೆ ವರುಣ ಕೃಪೆ ತೊರಿದ ಕಾರಣ 2.ಕೆರೆಗಳು ಭರ್ತಿಯಾಗಿವೆ. ಉಳಿಕೆ 0.5 ಟಿಎಂಸಿ ಹೇಮಾವತಿ ನೀರನ್ನು ಅತಿಶೀಘ್ರದಲ್ಲಿ ಮದಲೂರು ಕೆರೆಗೆ ಹರಿಸಲಾಗುವುದೆಂದು ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಶಿರಾ ತಾಲೂಕಿನ ಬರಗೂರು ರಂಗಾಪುರ ಗ್ರಾಮದಲ್ಲಿ ಗಡಿನಾಡು ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಆಯೋಜಿಸಿದ್ದ ಸೋಲಾರ್ ಶೀಥಲಿಕರಣ ಘಟಕ ಉದ್ಘಾಟನೆ, ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣಾಭಿವ್ರದ್ಧಿ ಇಲಾಖೆಯಿಂದ ಮದಲೂರು ಕಾಲುವೆ ಕಾಮಗಾರಿಗೆ ಒಪ್ಪಿಗೆ ನೀಡಿರುವ ಪ್ರತಿಯನ್ನು ನೀರಿನ ಅಲೋಕೇಶನ್ ಎಂದು ಜನರ ದಾರಿ ತಪ್ಪಿಸುವಂತ ಕೆಲಸ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾಡಿದ್ದಾರೆ. ಪಟ್ರವತನಹಳ್ಳಿ ಯಿಂದ ಕಳ್ಳಂಬೆಳ್ಳ ಕೆರೆಗೆ ನೀರು ಬರುವ ಮಾರ್ಗಮಧ್ಯೆ 13. ಬ್ಯಾರೇಜ್ ಆವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಕಾರಣ ಶಿರಾ ತಲುಪುವುದು ಕಷ್ಟ ಸಾಧ್ಯವಾಗುತ್ತಿದೆ. ಜನರಿಗೆ ಕುಡಿಯುವ ನೀರಿನ ಉದ್ದೇಶ ನಿರ್ಮಾಣವಾದ ಯಲಿಯೂರು ಮತ್ತು ತಾವರೆಕೆರೆ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಒಂದು ದಿನವು ನೀರು ಹರಿಸಲಿಲ್ಲ. ಆದರೆ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನೀರು ಹರಿಸುತ್ತಿದೆ. ನೈಸರ್ಗಿಕವಾಗಿ ಉಷ್ಣಾಂಶದಿಂದ ಸಿಗುವಂತ ಸೋಲಾರ್ ಶಕ್ತಿಯಿಂದ ನಿರ್ಮಾಣ ವಾದ ಶೀಥಲಿಕರಣ ಘಟಕ ಹಣ್ಣು ಬೆಳೆಗಾರರಿಗೆ ಹೆಚ್ಚು ಸಹಕಾರಿಯಾಗಿದ್ದು, ಸಣ್ಣ ಪುಟ್ಟ ರೈತರನ್ನು ಒಗ್ಗೂಡಿಸಿ ಉತ್ಪಾದಕರ ಕಂಪನಿಯಲ್ಲಿ ಸೇರಿಸಿ ಕೊಂಡು ಸರ್ಕಾರದ ಯೋಜನೆಗಳು ಸೌಲಭ್ಯಗಳು ಪ್ರತಿ ರೈತನಿಗೂ ತಲುಪ ವಂತೆ ಮಾಡ ಬೇಕಿದೆ ಎಂದರು.
ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಮಾತನಾಡಿ ಶಿರಾ ತಾಲೂಕಿನ ಜೀವನಾಡಿ ಶೇಂಗಾ ಬೆಳೆದ ರೈತ ನಷ್ಟ ಅನುಭವಿಸಿದ್ದಾನೆ 39.500 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಅನ್ನಧಾತರ ಸಂಕಷ್ಟ ವಿವರಿಸಿದ್ದೇನೆ. ಜಿಲ್ಲಾ ಉಸ್ತವಾರಿ ಸಚಿವರಾದ ತಾವುಗಳು ಸಹ ಶೇಂಗಾ ಬೆಳೆಗಾರರ ಕಷ್ಟ ಅರಿತು ಪರಿಹಾರ ದೊರಕಿಸಿ ಕೊಡ ಬೇಕೆಂದು ಸಚಿವ ಜೆ.ಸಿ.ಮಾಧುಸ್ವಾಮಿಯರಲ್ಲಿ ವಿನಂತಿಸಿದರು. ಉಪ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಮದಲೂರು ಕೆರೆಗೆ 60.ದಿನ ನೀರು ಹರಿಸಿದ್ದೇವೆ, ಈ ವರ್ಷ ಕೊಡ ಇಗಾಗಲೇ ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಒಪ್ಪಿಗೆ ಸೂಚಿಸಿದ್ದು ಅತಿಶೀಘ್ರದಲ್ಲಿ ಮದಲೂರು ಕೆರೆಗೆ ನೀರು ಹರಿಯಲಿದೆ. ಇದರಿಂದ ಸಹಸ್ರಾರು ಜನರ ಕುಡಿಯುವ ನೀರಿನ ಬವಣೆ ನಿಗಲಿದೆ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಜೀವನೋಪಾಯಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಿಸಾನ್ ಸನ್ಮಾನ್ ಯೋಜನೆಯ ವಾರ್ಷಿಕ 12.ಸಾವಿರ ರೂಪಾಯಿ ಹಣದ ಮೊತ್ತ ದ್ವಿಗುಣ ಮಾಡಲು ಚಿಂತನೆ ನಡೆಸಿದ್ದು ಕೋಟ್ಯಾಂತರ ರೈತರಿಗೆ ಅನುಕೂಲವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ ಬರಗೂರು ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ಸೊಲಾರ್ ಶೀಥಲಿಕರಣ ಘಟಕ ಸ್ಥಾಪನೆ ಮಾಡಿರುವುದು ದಾಳಿಂಬೆ ಜೊತೆಗೆ ಹಣ್ಣು ತರಕಾರಿ ಬೆಳೆಗಾರರಿಗೆ ಸಹಕಾರಿಯಾಗಿದ್ದು, ಸೊಕ್ತ ಬೆಲೆ ಸಿಗುವವರಿಗೂ ಹಣ್ಣುಗಳು ಶಿಥಲಿಕರಣ ಘಟಕದಲ್ಲಿ ಇಟ್ಟರೆ ಬೆಲೆ ಹೆಚ್ಚಾದ ಸಂಧರ್ಭದಲ್ಲಿ ಮಾರಾಟ ಮಾಡಿದರೆ ರೈತನ ಆರ್ಥಿಕ ಪ್ರಗತಿಗೆ ಹೆಚ್ಚು ಸಹಕಾರಿಯಾಗಲಿದೆ. ರೈತರಿಗೆ ಅನುಕೂಲ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ನಮ್ಮ ಅನುದಾನದಲ್ಲಿ ನೂತನ ಕೊಳವೆ ಕೊರೆಸಿ, ನೀರಿನ ಸೌಲಭ್ಯ ನೀಡಲಾಗುವುದೆಂದರು.
ರಾಜ್ಯ ನಾರು ಉದ್ಯಮ ಆಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಕೆ.ಮಂಜುನಾಥ್, ತಹಸೀಲ್ದಾರ್ ಎಂ.ಮಮತ, ಬರಗೂರು ಗ್ರಾಪಂ ಅಧ್ಯಕ್ಷ ಜಯರಾಮಯ್ಯ, ಕೃಷಿ ಸಹಾಯಕ ನಿರ್ದೇಶಕ ರಂಗನಾಥ್, ಶಿವಕುಮಾರ್, ದ್ವಾರಕೀಶ್ ಗೌಡ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ಪ್ರಕಾಶ್‌ಗೌಡ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.