ಕೊರಟಗೆರೆ

ಕೊರಟಗೆರೆ ತಾಲೂಕಿನ 105 ಕೆರೆಗಳಿಗೆ ಎತ್ತಿನಹೊಳೆ ನೀರು : ಡಾ.ಜಿ.ಪರಮೇಶ್ವರ್

ಕೊರಟಗೆರೆ : ಮಹತ್ತರ ಎತ್ತಿನಹೊಳೆ ಯೋಜನೆಯಲ್ಲಿ ಕೊರಟಗೆರೆ ತಾಲೂಕಿನ 39 ಕೆರೆಗಳಿಗೆ ನೀರು ಹರಿಸುವ ಪ್ರಸ್ಥಾವನೆಯನ್ನು 105 ಕೆರೆಗಳಿಗೆ ಹೆಚ್ಚಿಸಿದ್ದು 869 ಎಂಸಿಎಫ್‌ಟಿ ನೀರಿನ ಲಭ್ಯತೆಯನ್ನು 1136.84 ಎಂಸಿಎಫ್‌ಟಿಗೆ ಹೆಚ್ಚಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ತಾಲೂಕಿನಲ್ಲಿ ಕಿರು ನೀರಾವರಿ ಇಲಾಖೆಯಿಂದ ಓಬನಹಳ್ಳಿ, ಅಳಾಲಸಂದ್ರ, ಕೋಳಾಲಗಳಲ್ಲಿ 1.90 ಕೋಟಿ ವೆಚ್ಚದ ಚೆಕ್‌ಡ್ಯಾಂ ಗಳಿಗೆ ಶಂಕುಸ್ಥಾಪನೆ, ಕೃಷಿ ಇಲಾಖೆಯಿಂದ 1.20 ಕೋಟಿ ವೆಚ್ಚದಲ್ಲಿ ಹೊಳವನಹಳ್ಳಿ ಮತ್ತು ಕೋಳಾಲ ಹೋಬಳಿ ಕೇಂದ್ರಗಳಲ್ಲಿ ರೈತ ಸಂಪರ್ಕ ಕೇಂದ್ರಗಳ ಶಂಕುಸ್ಥಾಪನೆ, ಪಿಎಂಜಿಎಸ್‌ವೈ ಅಡಿಯಲ್ಲಿ 1.20 ಕೋಟಿ ಕೋಳಾಲ-ಬೀಮಸಾಗರ ರಸ್ತೆ ಉದ್ಘಾಟನೆ ಹಾಗೂ ಚನ್ನರಾಯನದುರ್ಗಾ ಹೋಬಳಿಯ ಬೆಂಡೋಣೆ ಗ್ರಾಮದಲ್ಲಿ 18 ಲಕ್ಷ ವೆಚ್ಚದ ವಿಎಸ್‌ಎಸ್‌ಎನ್ ನೂತನ ಕಟ್ಟಡ ಉದ್ಘಾಟನೆ ಒಟ್ಟು 4.48 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತು ಉದ್ಘಾಟನೆ ಮಾಡಿ ಮಾತನಾಡಿ, ಬಯಲು ಸೀಮೆಯ ಪ್ರದೇಶಗಳ ಮಹತ್ತರ ಎತ್ತಿನಹೋಳೆ ನೀರಾವರಿ ಯೋಜನೆ ಪ್ರಾರಂಭವಾಗಿ ಯೋಜನೆಯ ವೆಚ್ಚ 13,500 ಸಾವಿರ ಕೋಟಿಗಳಿಂದ ಸದ್ಯಕ್ಕೆ 21.500 ಸಾವಿರ ಕೋಟಿಗೆ ತಲುಪಿದೆ, ಕಳೆದ ಸರ್ಕಾರದ ಅಯವ್ಯಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಯೋಜನೆಗೆ 500 ಕೋಟಿಗಳ ಹಣ ಮಾತ್ರ ನೀಡಿದ್ದರು, ಆದರೆ ನೂತನ ಮುಖ್ಯಮಂತ್ರಿಗಳಿಗೆ ಈ ಯೋಜನೆಗೆ ಹೆಚ್ಚಿನ ಹಣವನ್ನು ಬಿಡುಗಡೆಗೊಳಿಸುವಂತೆ ಕೋರಲಾಗಿದೆ, ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಹೆಚ್ಚಿನ ಹಣ ನೀಡುವ ಭರವಸೆ ಇದೆ ಅದೇ ರೀತಿಯಾಗಿ ತಾಲೂಕಿನ ಹೆಚ್ಚಿನ ಕೆರೆಗಳಿಗೆ ನೀರು ಹರಿಯಲಿದೆ ಎಂದರು.
ತುಮಕೂರು ಸಹಕಾರ ಕ್ಷೇತ್ರದಲ್ಲಿ ಕೆ.ಎನ್.ರಾಜಣ್ಣ ರಾಜ್ಯದಲ್ಲಿಯೇ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ, ಅಂಸಘಟಿತ ಬೀದಿ ವ್ಯಾಪಾರಿಗಳು, ಚರ್ಮವ್ಯಾಪಾರಿಗಳು ಸೇರಿದಂತೆ ಬಡ ಜನರಿಗೆ ಸಾಲಗಳನ್ನು ನೀಡಿ ಅವರ ಆರ್ಥಿಕ ಅಭಿವೃದ್ದಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ, ತುಮಕೂರು ಡಿಸಿಸಿ ಬ್ಯಾಂಕ್ ಸುಮಾರು 2 ಸಾವಿರ ಕೋಟಿಗಳ ಆರ್ಥಿಕ ಸದೃಡತೆಹೊಂದಿದ್ದು ಜಿಲ್ಲೆಯ ಪ್ರತಿ ರೈತನಿಗೆ, ಕೂಲಿ ಕಾರ್ಮಿಕನಿಗೆ, ವ್ಯಾಪಾರಸ್ಥನಿಗೆ ಹಾಗೂ ಕೈಗಾರಿಕೆಗೂ ಸಹ ಸಬಲತೆಯನ್ನು ನೀಡುತ್ತಿದೆ, ಇದಕ್ಕೆಲ್ಲಾ ಆದರ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಮತ್ತು ಸಹಕಾರ ಸಂಘಗಳ ಅಧಿಕಾರಿ ಮತ್ತು ನಿರ್ದೇಶಕ ಶ್ರಮ ಎಂದರು,
ತಾಲೂಕಿನ ಹಲವು ಭಾಗಗಳಲ್ಲಿ ಮಳೆಯ ನೀರು ಸಂಗ್ರಹಣೆಗೆ ಚೆಕ್‌ಡ್ಯಾಂ ಗಳನ್ನು ನಿರ್ಮಿಸಲಾಗುತ್ತಿದೆ, ಮಳೆಯ ಅರಿವಿನ ತಾಂತ್ರಿಕತೆಯನ್ನು ಗುರುತಿಸಿ ಚೆಕ್ ಡ್ಯಾಂಕ ಗಳನ್ನು ನಿರ್ಮಿಸುತ್ತಿದ್ದು ಇದರಿಂದ ಸುತ್ತಮುತ್ತಲಿನ ಪ್ರದೇಶದ ರೈತರ ಕೊಳವೆ ಬಾವಿಗಳ ಅಂತರ್ಜಲದ ನೀರಿನ ಮಟ್ಟ ಹೆಚ್ಚುತ್ತದೆ ಹಾಗೂ ಸುತ್ತಮುತ್ತಲ ಪ್ರದೇಶದ ಧನಕರುಗಳಿಗೆ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಹಕಾರಿಯಾಗಲಿದ್ದು ಕೃಷಿಗೆ ಈ ಕಾಮಗಾರಿಗಳು ಅನುಕೂಲ ಕರ ವಾತಾವರಣಗಳನ್ನು ಸೃಷ್ಠಿಸಲಿವೆ, ಅದಕ್ಕಾಗಿ ಸುಮಾರು 1.90 ಕೋಟಿ ರೂಗಳ ಚಿಕ್‌ಡ್ಯಾಂ ನಿರ್ಮಾಣಕ್ಕೆ ಅಡಿಕಗಲ್ಲನ್ನು ಹಾಕಲಾಗಿದೆ ಎಂದ ಅವರು ರೈತ ಸಂಪರ್ಕ ಕೇಂದ್ರಗಳು ರೈತರಿಗೆ ಅನೇಕ ಉಪಯುಕ್ತ ಮಾರ್ಗದರ್ಶನ ನೀಡುವುದರೊಂದಿಗೆ, ಬಿತ್ತನೆ ಬೀಜ, ಕೃಷಿಪರಿಕರಗಳನ್ನು ಹೋಬಳಿವಾರು ರೈತರಿಗೆ ನೀಡಲು ಅನುಕೂಲವಾಗುತ್ತಿದೆ, ಕೃಷಿ ಅಧಿಕಾರಿಗಳು ಸಹ ಬೆಳೆ ಬೆಳೆಯುವ ರೈತರಿಗೆ ಆಯಾ ಪರಿಸ್ಥಿತಿಗೆ ಅನುಗುಣ ಮತ್ತು ಅನುಕೂಲ ತಕ್ಕಂತೆ ಮಾರ್ಗದರ್ಶನಗಳನ್ನು ನೀಡಬೇಕು, ಈಗಾಗಲೆ ತಾಲೂಕಿನಲ್ಲಿ ಎರಡು ಹೋಬಳಿಗಳಲ್ಲಿ ರೈತ ಸಂಪರ್ಕ ಕೇಂದ್ರಗಳ ಸ್ವಂತ ಕಟ್ಟಡವಿದ್ದು ಈಗ ಹೊಳವನಹಳ್ಳಿ ಮತ್ತು ಕೋಳಾಲ ಹೋಬಳಿ ಕೇಂದ್ರಗಳಲ್ಲಿ 1.20 ಕೋಟಿ ವೆಚ್ಚದ ರೈತ ಸಂಪರ್ಕ ಕೇಂದ್ರದ ಕಟ್ಟಡ ನೀರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಮಾಡಲಾಗಿದೆ, ಕೊರಟಗೆರೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ದಿ ಕೆಲಸಗಳಿಗೆ ಶಕ್ತಿ ಮೀರಿ ದುಡಿದು ಜನರ ವಿಶ್ವಾಸಗಳಿಸುವ ಪ್ರಾಮಾಣಿಕ ಕರ್ತವ್ಯವನ್ನು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ತಂಗು ಮತ್ತು ನಾರು ಅಭಿವೃಧ್ದಿ ಮಂಡಲಿ ಮಾಜಿ ಅಧ್ಯಕ್ಷ ಜಿ.ವೆಂಕಟಾಚಲಯ್ಯ, ಮಾಜಿ ಜಿ.ಪಂ ಸದಸ್ಯ ಪ್ರಸನ್ನಕುಮಾರ್, ತುಮೂಲ್ ನಿದೇರ್ಶಕ ಈಶ್ವರಯ್ಯ, ಡಿಸಿಸಿ ಬ್ಯಾಂಕ್ ನಿದೇರ್ಶಕ ಹನುಮಾನ್, ಪ.ಪಂ.ಸದ್ಯ ಎ.ಡಿ.ಬಲರಾಮಯ್ಯ, ಮಾಜಿ ತಾ.ಪಂ.ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಬೆಂಡೋಣೆ ಜಯರಾಂ, ಕವಿತಾ, ವಿಎಸ್‌ಎಸ್‌ಎನ್ ಅಧ್ಯಕ್ಷ ಶಿವಲಿಂಗಯ್ಯ, ಕಿರು ನೀರಾವರಿ ಸಹಾಯ ಅಭಿಯಂತರ ರಮೇಶ್, ಉಪಕೃಷಿ ನಿದೇರ್ಶಕಿ ದೀಪಶ್ರೀ, ಸಹಾಯಕ ಕೃಷಿ ನೀದೇಶಕ ಹೆಚ್.ನಾಗರಾಜು, ಕೃಷಿಅಧಿಕಾರಿಗಳಾದ ಸೌಂದರ್ಯನಾಗರಾಜು, ಸಹಕಾರ ಇಲಾಖೆಯ ಅಧಿಕಾರಿಗಳಾದ ಕಾಂತರಾಜು, ಶ್ರೀಧರ್, ಜಂಗಮಪ್ಪ, ಬೋರಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker