ತುಮಕೂರು ಜಿಲ್ಲಾ ದಸರಾ ಉತ್ಸವಕ್ಕೆ ಉದ್ಯಮಿ ಎಸ್.ಪಿ.ಚಿದಾನಂದ್ ಚಾಲನೆ
ತುಮಕೂರು: ಅಕ್ಟೋಬರ್ 15 ರಂದು ನಡೆಯುವ ತುಮಕೂರು ಜಿಲ್ಲಾ ದಸರಾ ಉತ್ಸವದ ಅಂಗವಾಗಿ ಇಂದು ನಗರ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ದಸರ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಈ ಬಾರಿಯ ಉತ್ಸವ ಆಯೋಜನಾ ಸಮಿತಿಯ ಅಧ್ಯಕ್ಷರೂ ಆಗಿರುವ ಉದ್ಯಮಿ ಎಸ್.ಪಿ.ಚಿದಾನಂದ್ ಅವರು ದ್ವಜಾರೋಹಣಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಎಸ್.ಪಿ.ಚಿದಾನಂದ್,ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ತುಮಕೂರು ಜಿಲ್ಲಾ ದಸರಾ ಉತ್ಸವ ನಡೆಯುತ್ತಾ ಬಂದಿದ್ದು,ಪ್ರತಿ ವರ್ಷ ಒಂದೊಂದು ಸಮುದಾಯಕ್ಕೆ ಸೇರಿದ ಧರ್ಮಗುರುಗಳನ್ನು ಕರೆಯಿಸಿ, ಅವರ ನೇತೃತ್ವದಲ್ಲಿ ದಸರ ಉತ್ಸವದ ಮೆರವಣಿಗೆ ಮತ್ತು ಸಾಮೂಹಿಕ ಶಮಿ ಪೂಜೆ ನೆರವೇರಿಸುವ ವಾಡಿಕೆ ನಡೆದುಕೊಂಡು ಬಂದಿದ್ದು,ಈ ಬಾರಿ ಬೆಂಗಳೂರಿನ ವಾಸವಿ ಪೀಠದ ಶ್ರೀಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಗಳು ಭಾಗವಹಿಸುವರು ಎಂದರು.
ಅಕ್ಟೋಬರ್ 15ರ ಶುಕ್ರವಾರ ಮದ್ಯಾಹ್ನ 1:30 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗುಬ್ಬಿಯ ಚನ್ನಬಸವೇಶ್ವರ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಹಕಾರದಲ್ಲಿ ನಡೆಯುವ ಉತ್ಸವದಲ್ಲಿ ಬೆಂಗಳೂರಿನ ವಾಸವಿ ಪೀಠದ ಶ್ರೀಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಪಾಲ್ಗೊಳ್ಳಲಿದ್ದಾರೆ.ಧ್ವಜಪೂಜೆಯನ್ನು ಶಾಸಕರಾದ ಜಿ.ಬಿ.ಜೋತಿಗಣೇಶ್ ನಡೆಸಿದರೆ, ವರದಾಯಿನಿ ಸೇವಾ ಟ್ರಸ್ಟ್ನ ಶ್ರೀಮತಿ ಗಾಯಿತ್ರಿ ನಾರಾಯಣ್ ಗಣಪತಿ ಪೂಜೆ ನೆರವೇರಿಸುವರು. ಮೇಯರ್ ಬಿ.ಜಿ.ಕೃಷ್ಣಪ್ಪ ಮೆರವಣಿಗೆಯನ್ನು ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಸುಮಾರು 80ಕ್ಕು ಹೆಚ್ಚು ಮುಜರಾಯಿ ಮತ್ತು ಖಾಸಗಿ ದೇವಾಲಯಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.ನಗರದ ಟೌನ್‌ಹಾಲ್ ನಿಂದ ಹೊರಡುವ ಮೆರವಣಿಗೆ ಎಂ.ಜಿ.ರಸ್ತೆ, ಜನರಲ್ ಕಾರ್ಯಪ್ಪ ರಸ್ತೆಯ ಮೂಲಕ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳಲಿದೆ ಎಂದರು.
ಅಕ್ಟೋಬರ್ 15ರ ಸಂಜೆ 4 ಗಂಟೆಗೆ ತುಮಕೂರು ತಾಲೂಕು ತಹಶೀಲ್ದಾರ್ ಜಿ.ಬಿ.ಮೋಹನ್ ಕುಮಾರ್ ಸಾಮೂಹಿಕ ಶಮಿ ಪೂಜೆ ನೆರವೇರಲಿದ್ದು,ನಗರ ನಡೆಯುವ ಸಾರ್ವಜನಿಕ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀವಾಸವಿ ಪೀಠದ ಶ್ರೀಶ್ರೀಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ವಹಿಸಲಿದ್ದಾರೆ.ಅಧ್ಯಕ್ಷತೆಯನ್ನು ದಸರಾ ಸಮಿತಿ ಕಾರ್ಯಾಧ್ಯಕ್ಷ ಎಸ್.ಪಿ.ಚಿದಾನಂದ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಎಷ್ಯಾನೆಟ್ ಸುವರ್ಣ ವಾಹಿನಿಯ ಸಂಪಾದಕ ಅಜಿತ್ ಹನುಮಕ್ಕ ನವರ್ ಆಗವಹಿಸುವರು.ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ,ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಂಸದರಾದ ಜಿ.ಎಸ್.ಬಸವರಾಜು, ಶಾಸಕರಾದ ಜಿ.ಬಿ.ಜೋತಿಗಣೇಶ್,ದಸರಾ ಸಮಿತಿ ಗೌರವಾಧ್ಯಕ್ಷರಾದ ಬಿ.ಎಸ್.ಮಂಜು ನಾಥ್, ಮಹಿಳಾ ಸಮನ್ವಯ ಸಮಿತಿ ನಗರ ವ್ಯವಸ್ಥಾ ಪ್ರಮುಖ್ ಶ್ರೀಮತಿ ತೇಜಶ್ವಿನಿ ವಿನಾಯಕ್, ಶ್ರೀಮತಿ ಓಂಕಾರೇಶ್ವರಿ ನಾಗರಾಜು ಅವರುಗಳು ಭಾಗವಹಿಸಲಿದ್ದಾರೆ.ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿAದ ನಗೆಹಬ್ಬ ಕಾರ್ಯಕ್ರಮ ಜರುಗಲಿದೆ ಎಂದು ಎಸ್.ಪಿ.ಚಿದಾನಂದ ವಿವರಿಸಿದರು.
ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಕೋರೋನ ಮೂರನೇ ಅಲೆ ಇಲ್ಲದಂತಾಗಿದೆ. ಹಾಗೆಯೇ ಮುಂದೆಯೂ ಭಾರತದಂತೆ ದೇವಿಯಲ್ಲಿ ಪ್ರಾರ್ಥಿಸಿ ಶ್ರೀರಾಮ ಮಂದಿರದಲ್ಲಿ ದುರ್ಗಾ ಹೋಮ, ಗಣಪತಿ ಹೋಮ ಹಾಗೂ ಶಾಂತಿ ಹೋಮಗಳನ್ನು ದಸರಾ ಸಮಿತಿಯಿಂದ ನೆರವೇರಿಸಲಾಗಿದೆ.ಕೋರೋನ ನಿಯಾಮಳಿಗಳ ಅನ್ವಯ ನಡೆಯುತ್ತಿರುವ ಈ ದಸರಾ ಉತ್ಸವ,ಸಾರ್ವಜನಿಕರು ಮಾಸ್ಕ್ ಧರಿಸಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ,ಯಶಸ್ವಿಗೊಳಿಸುವಂತೆ ದಸರಾ ಉತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಎಸ್.ಪಿ.ಚಿದಾನಂದ ಮನವಿ ಮಾಡಿದರು.
ದ್ವಜಸ್ತಂಭ ನಿರ್ಮಾಣದ ಭೂಮಿ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ತುಮಕೂರು ನಗರ ಶಾಸಕ ಜಿ.ಬಿ.ಜೋತಿ ಗಣೇಶ್,ಕಳೆದ ಮೂವತ್ತು ವರ್ಷಗಳಿಂದ ಸರಕಾರದ ಯಾವುದೇ ಅನುದಾನ ಪಡೆಯದೆ ತುಮಕೂರು ನಗರ ಮತ್ತು ಜಿಲ್ಲೆಯ ನಾಗರಿಕರು ದಸರಾ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸರಕಾರದ ನಿಯಮಾವಳಿಗಳ ಅನ್ವಯ ಕಾರ್ಯಕ್ರಮ ನಡೆಯಲಿದೆ.ಉತ್ಸವ ಮೂರ್ತಿಗಳ ಮೆರವಣಿಗೆ, ಸಾಮೂಹಿಕ ಶಮಿಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿವೆ. ಬಾಳೆಹೊನ್ನೂರು ಶ್ರೀಗಳಿಂದ ಆರಂಭವಾದ ಉತ್ಸವ ಮೂರ್ತಿಗಳ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಸಮುದಾಯದ ಮಠಾಧೀಶರು ಪಾಲ್ಗೊಂಡು ಐಕ್ಯತೆಯನ್ನು ಮೆರೆದಿದ್ದಾರೆ. ನಗರದ ನಾಗರಿಕರು ಉತ್ಸವದಲ್ಲಿ ಪಾಲ್ಗೊಳ್ಳು ವಂತೆ ಮನವಿ ಮಾಡಿದರು.
ಈ ವೇಳೆ ದಸರಾ ಸಮಿತಿ ಅಧ್ಯಕ್ಷರಾದ ಬಿ.ಎಸ್.ಮಂಜುನಾಥ್‌ಉತ್ಸವ ಸಮಿತಿಯ ಕೋರಿ ಮಂಜುನಾಥ್, ಕಾರ್ಯದರ್ಶಿ ಬಿ.ಎಸ್.ಮಹೇಶ್,ಸಹಕಾರ್ಯದರ್ಶಿ ಚೇತನ್ ಬಿ.ಹೆಚ್.,ಹೆಚ್.ಕೆ.ಬಸವರಾಜು,ಸಂಯೋಜಕರಾದ ಕೆ.ಎನ್.ಗೋವಿಂದರಾವ್, ಖಜಾಂಚಿ ಜಿ.ಎಸ್.ಬಸವರಾಜು,ದೆಸರಾ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ವಿಶ್ವನಾಥ್,ಗುರುಕುಲ ಮಲ್ಲಿಕಾರ್ಜುನ್,ನಾಟಕ ಅಕಾಡೆಮಿ ಸದಸ್ಯರಾದ ಟಿ.ಎಸ್.ಸದಾಶಿವಯ್ಯ ಸೇರಿದಂತೆ ಹಲವು ಗಣ್ಯರು,ಮಹಿಳೆಯರು ಭೂಮಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.