ಕುಣಿಗಲ್ಕ್ರೈಂ ನ್ಯೂಸ್
ಪೊಲೀಸ್ ಎಂದು ಸುಳ್ಳು ಹೇಳಿ ಒಂಟಿ ಮಹಿಳೆಯರನ್ನು ವಂಚಿಸುತ್ತಿದ್ದ ಆರೋಪಿ ಸೆರೆ
ಕುಣಿಗಲ್ : ಪೊಲೀಸ್ ಇಲಾಖೆ ಎಂದು ಸುಳ್ಳು ಹೇಳಿ ಮಹಿಳೆ ಓರ್ವಳನ್ನು ಎದುರಿಸಿ, ಜನನಿಬಿಡ ಪ್ರದೇಶಕ್ಕೆ ಕರೆದೊಯ್ದು ಬಲಾತ್ಕಾರ ಮಾಡಿ , ಮಹಿಳೆಗೆ ಚಾಕು ತೋರಿಸಿ ಹಣ ಸೇರಿದಂತೆ, ಮೊಬೈಲ್ ,ಮಾಂಗಲ್ಯ ಸರ, ಕಿತ್ತುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದ ಆರೋಪಿಯನ್ನು ಬಂಧಿಸಿಸುವಲ್ಲಿ ಅಮೃತೂರು ಪೊಲೀಸರು ಯಶಸ್ವಿಯಾಗಿದ್ದಾರೆ,
ಬಂಧಿತ ಆರೋಪಿ (37)ವರ್ಷದ ಪ್ರದೀಪ್ ಅಲಿಯಾಸ್ ಕೆಂಚಪ್ರದಿ ಈತ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ದೇವಲಾಪುರ ಹೋಬಳಿ ದೊಡ್ಡ ನಗನಹಳ್ಳಿ ಗ್ರಾಮದ ವಾಸಿ ಕಾರು ಚಾಲಕನಾಗಿದ್ದಾನೆ .
ಘಟನೆಯ ವಿವರ : ಇತ್ತೀಚೆಗೆ ಸಂಜೆ ಸಮಯದಲ್ಲಿ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ಚಿಕ್ಕಕಲ್ಯಾ ಗ್ರಾಮದ ಮಹಿಳೆ ಕುಣಿಗಲ್ ಪಟ್ಟಣಕ್ಕೆ ಬಂದು, ತಮ್ಮ ಸ್ವಗ್ರಾಮಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ವಾಪಸ್ಸ್ ತೆರಳುವ ವೇಳೆ , ಖದೀಮ ಪದೀಪ್ ಕುಣಿಗಲ್ ಪಟ್ಟಣದ ಬಿದನಗೆರೆ ಬಳಿ ಈಕೆಯನ್ನು ಅಡ್ಡಗಟ್ಟಿ ನಾನು ಪೊಲೀಸ್ ಎಂದು ಹೇಳಿ ಯಾವುದೋ ಒಂದು ಪ್ರಕರಣ ಸಂಬಂಧ ನಿಮ್ಮನು ಠಾಣೆಗೆ ಕರೆದುಕೊಂಡು ಬನ್ನಿ ಎಂದು ಸಬ್ ಇನ್ಸ್ಸ್ಪೆಕ್ಟರ್ ತಿಳಿಸಿದ್ದಾರೆ ಎಂದು ಮಹಿಳೆಯನ್ನು ಭಯಪಡಿಸಿ ಬಲವಂತದಿಂದ ಆಕೆಯ ಬೈಕಿನಲ್ಲಿಯೇ ಎಡಿಯೂರು ಬಳಿ ಇರುವ ಶ್ರೀನಿವಾಸ ದೇವರ ಗುಡ್ಡದ ಸಮೀಪದ ನಿರ್ಜನ ಪ್ರದೇಶಕ್ಕೆ ಕೆರೆದುಕೊಂಡು ಹೋಗಿ ಸಬ್ ಇನ್ಸ್ಸ್ಪೆಕ್ಟರ್ ಅವರು ಇಲ್ಲೇ ಬರುತ್ತಾರೆ ಎಂದು ನಂಬಿಸಿ ಆರೋಪಿ ನೀವು ಇಲ್ಲಿಯೇ ಇರಿ ಎಂದು ಇರಿಸಿಕೊಂಡು, ನಂತರ ಆಕೆಯನ್ನು ಬೆದರಿಸಿ, ಸ್ಥಳದಲ್ಲಿ ಯಾರೂ ಇಲ್ಲದ ಬಗ್ಗೆ ಖಾತ್ರಿ ಪಡಿಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಮಾಡಿದ ನಂತರ ಚಾಕು ತೋರಿಸಿ ಆಕೆಯ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಮಾಂಗಲ್ಯ ಸರ, ಮೋಬೈಲ್ ಪೋನ್, ಎಟಿಎಂ ಕಾರ್ಡ್ ಮತ್ತು ಹಣವಿದ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದ
ಈ ಸಂಬಂಧ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಟಿ.ಜಿ.ಉದ್ದೇಶ್ ಅವರ ಮಾರ್ಗದರ್ಶನದಲ್ಲಿ ಕುಣಿಗಲ್ ಡಿವೈಎಸ್‌ಪಿ ಜಿ.ಆರ್.ರಮೇಶ್, ಸಿಪಿಐ ಗುರುಪ್ರಸಾದ್, ಪಿಎಸ್‌ಐ ಮಂಜುನಾಥ್ ಅವರ ನೇತೃತ್ವದ ಪೊಲೀಸ್ ತಂಡ ದೇವಲಾಪುರ ಹೋಬಳಿಯ ದೊಡ್ಡನಗನಹಳ್ಳಿ ಗ್ರಾಮದ ತನ್ನ ಮನೆಯಲ್ಲಿ ಅವಿತುಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ, ಬಂಧಿತನಿಂದ ಮಾಂಗಲ್ಯ ಸರ, ಪರ್ಸ್, ಬೈಕ್, ಚಾಕವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಆರೋಪಿ 17 ಪ್ರಕರಣದಲ್ಲಿ ಭಾಗಿ : ಆರೋಪಿ ಪ್ರದೀಪನು ಈಗಾಗಲೇ ಬೆಂಗಳೂರು ನಗರದ ಬ್ಯಾಟರಾಯನಪುರ, ಬಸವೇಶ್ವರನಗರ, ಚನ್ನಪಟ್ಟಣ, ಶಿವಳ್ಳಿ, ಮೈಸೂರು ನಗರದ ಜಯಪುರ, ಸರಸ್ವತಿಪುರ, ವಿಜಯನಗರ, ಹೋಳನರಸಿಪುರ, ನಾಗಮಂಗಲ, ಬೆಳ್ಳೂರು ಕ್ರಾಸ್, ತಾವರೇಕೆರೆ, ಪಾಂಡುಪುರ, ಗೊರೂರು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಹಲವಾರು ಭಾರಿ ಒಂಟಿ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಅವರಿಗೆ ಪೊಲೀಸ್ ಎಂದು ಸುಳ್ಳು ಹೇಳಿಕೊಂಡು ಮಹಿಳೆಯನ್ನು ಬೆದರಿಸಿ ಬೆಲೆ ಬಾಳುವ ಚಿನ್ನದ ವಡವೆ ಹಾಗೂ ಇತರೆ ವಸ್ತುಗಳನ್ನು ಸುಲಿಗೆ ಮಾಡಿ ಹಲವಾರು ಭಾರಿ ಜೈಲಿಗೆ ಹೋಗಿ ಬಂದಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.