ರಾಜ್ಯ

ಮೈಸೂರು ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ

ಮೈಸೂರು : ನಾಡದೇವತೆಗೆ ಪೂಜೆ ಸಲ್ಲಿಸುವ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು  ಚಾಲನೆ ನೀಡಿದರು. ಕರ್ನಾಟಕದಲ್ಲಿ ಅಭಿವೃದ್ಧಿಯ ಹೊಸ ಯುಗ ಆರಂಭವಾಗಲಿದೆ ಎಂದು ಮಾತನಾಡಿದ ಅವರು, ದಸರಾ ಮಹೋತ್ಸವ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕು ತಿಳಿಸಿದರು.

ಖಂಡಿತವಾಗಿ ವಿಶ್ವದಲ್ಲಿ ಬೇರೆ ಬೇರೆ ಹಬ್ಬಗಳನ್ನು ಆಚರಣೆ ಮಾಡಲು ಟೂರಿಸಂ ಸರ್ಕಿಟ್ ಮಾಡಿ ಪ್ರಚಾರ ಕೊಟ್ಟು, ಜನರನ್ನು ಆಕರ್ಷಣೆ ಮಾಡುತ್ತಾರೆ. ಅದೇ ಮಾದರಿಯಲ್ಲಿ ಅಂತರರಾಷ್ಟ್ರೀಯ ಸರ್ಕಿಟ್ ಮಾಡಲಾಗುವುದು. ಸಂಬಂಸಿದ ಸಚಿವರುಗಳು ಜೊತೆ ಚರ್ಚಿಸಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಜಲಸಂಪನ್ಮೂಲ ಸಚಿವನಾಗಿದ್ದಾಗ ನೀರಾವರಿಯ ಕೆಲಸ ಕಾರ್ಯ ವೀಕ್ಷಿಸಲು ಬಂದಿದ್ದಾ. ಗೇಟ್ಸ್‍ಗಳನ್ನು ನೋಡಿದೆ ರಂಧ್ರ ಬಿದ್ದು ನೀರು ಹರಿದುಹೋಗುತ್ತಿತ್ತು. ಗೇಟ್ ಗಳು 40ವರ್ಷಕ್ಕೂ ಹೆಚ್ಚಿನ ಸೇವೆ ಮಾಡಿದ್ದು ಗೋಣಿಚೀಲ ನೀರು ತಡೆಯಲು ಇಟ್ಟಿದ್ದರು. ಈಗ ಯಾವುದೇ ಚರ್ಚೆ ಇಲ್ಲ ಏನಿದ್ರೂ ನಿರ್ಧಾರ ಮಾತ್ರ. ತುಂಗಭದ್ರಾ ಸ್ಟೀಲ್ ಕಂಪನಿಯ ಇಂಜಿನಿಯರ್ ಕರೆತಂದು 16ಗೇಟ್ ಗಳನ್ನು ಹೊಸದಾಗಿ ಹಾಕಿದೆವು ಎಂದರು.

14 ಮಹಾರಾಜರ ಅಣೆಕಟ್ಟುಗಳಿದ್ದು, ಶಿಥಿಲಗೊಂಡಿವೆ 90ಸಾವಿರ ಎಕರೆ ನೀರಾವರಿ ಆಗುತ್ತಿತ್ತು. 11 ಅಣೆಕಟ್ಟುಗಳ ನಾಲೆಗಳನ್ನು ಸಂಪೂರ್ಣ ಆಧುನೀಕರಣ ಮಾಡಿದ್ದೇನೆ. ವಿಸಿ ನಾಲೆ ಡಿಸ್ಟ್ರಿಬ್ಯೂಷನ್ ಆಗಿರಲಿಲ್ಲ, ಡಿಸ್ಟ್ರಿಬ್ಯೂಟ್ ಕೆಲಸ ಮಾಡಿದ್ದೇವೆ. ವರುಣಾ ನಾಲೆ 100 ಕಿಮಿ ಆಗಿದೆ. ಮುಂದಿನದನ್ನು ಮಾಡುತ್ತೇವೆ.

ಸೇವೆ ಮಾಡುವ ಅವಕಾಶ ಸಿಕ್ಕಿದ್ದು ಸಣ್ಣ ಸಂತೃಪ್ತಿ. ಇವತ್ತಿನ ಸವಾಲುಗಳು. ಆರ್ಥಿಕ ಹಿಂಜರಿಕೆ ಇತರ ರಾಜ್ಯಗಳ ಜೊತೆಗೆ ನಾವು ಕೂಡ ಅಭಿವೃದ್ಧಿ ಹೊಂದಬೇಕೆನ್ನುವ ಚಿಂತನೆ ಇದೆ ಎಂದರು. ಹಲವಾರು ಬದಲಾವಣೆ ಮಾಡಿ ಆರ್ಥಿಕ ಬದಲಾವಣೆ ತಂದು ನಾಡಿನ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಮೈಸೂರು ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅವಶ್ಯಕತೆ ಇದೆ ಎಂದ ಅವರು, ಎಲ್ಲ ರೀತಿಯ ವಿಸ್ತರಣೆಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ನಮ್ಮೆಲ್ಲರ ಬದುಕಿನಲ್ಲಿ ಸಂತೋಷ ಸಂಭ್ರಮವನ್ನು ತರಲಿ. ದುಃಖ ದುಮ್ಮಾನ ದೂರ ಮಾಡಲಿ ಎಷ್ಟೇ ಕಷ್ಟವಿದ್ದರೂ ಎದುರಿಸಲು ಶಕ್ತಿ ನೀಡಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು. ನಾನು ಒಬ್ಬನೇ ಮಾಡುತ್ತೇನೆ ಎಂದರೆ ಮೂರ್ಖತನ. ನಾವೆಲ್ಲರೂ ಸೇರಿ ಮಾಡುತ್ತೇವೆ ಎಂದರೆ ಅದಕ್ಕೊಂದು ಅರ್ಥ. ನಮ್ಮದು ಟೀಮ್ ವರ್ಕ್, ಆರ್ಥಿಕ ಪ್ರಗತಿ ಮಾಡಿ ಜನಮೆಚ್ಚುವ ಕೆಲಸ ಮಾಡುತ್ತೇವೆ. ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಕೆಲಸ ಮಾಡಿದ್ದೇವೆ. ವಿಶೇಷ ಸ್ವಚ್ಛ, ದಕ್ಷ ಜನಪರ ಆಡಳಿತ ನೀಡಲು ಕಂಕಣ ಬದ್ಧರಾಗಿದ್ದೇವೆ ಎಂದು ಪ್ರಮಾಣ ಮಾಡಿದರು.

ಸಿಎಂ ಡ್ಯಾಶ ಬೋರ್ಡ್ ಮಾಡಿದ್ದು ಎಲ್ಲ ಯೋಜನೆಗಳು ನಮ್ಮ ಕಣ್ಣಮುಂದಿರಬೇಕು. ಇದರಿಂದ ಹಲವಾರು ನಿರ್ದೇಶನಗಳನ್ನು ಕಾಲಕಾಲಕ್ಕೆ ನೀಡಲು ಸಾಧ್ಯವಾಗಲಿದೆ. ಕರ್ನಾಟಕದಲ್ಲಿ ಹೊಸ ಅಭಿವೃದ್ಧಿಯ ಯುಗ ಆರಂಭವಾಗಲಿದೆ. ಶುಭ ಹಸ್ತದಲ್ಲಿ ಉದ್ಘಾಟನೆ ಆಗಿದ್ದು, ನಮಗೆಲ್ಲರಿಗೂ ಶುಭ ತರಲಿದೆ ಎಂದರು.

ನನ್ನ ಪೂರ್ವಜನ್ಮದ ಪುಣ್ಯ:ನಾಡದೇವತೆಯ ಸೇವೆ ಮಾಡುವಂತಹ ಸದವಕಾಶ ಬಂದಿದೆ. ಈ ನಾಡದೇವತೆಯ ಆಶೀರ್ವಾದದೊಂದಿಗೆ ಈ ನಾಡನ್ನು ಸುಭೀಕ್ಷವಾಗಿರುವಂತಹ ಕನ್ನಡ ನಾಡಿನಲ್ಲಿರುವಂತಹ ಪ್ರತಿಯೊಬ್ಬ ಕನ್ನಡಿಗನ ಬಾಳನ್ನು ಹಸನು ಮಾಡುವ ಅವಕಾಶ. ಎಲ್ಲರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುವ ಪಣ, ಈ ಎಲ್ಲ ಅವಕಾಶ ಮಾಡಿಕೊಟ್ಟಿದ್ದಾಳೆ. ದೇವಿಗೆ ಕೋಟಿ ಕೋಟಿ ನಮನ ಎಂದರು.

ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಕಳೆಗುಂದಿದೆ. ತಾಯಿ ಆಶಿರ್ವಾದದೊಂದಿಗೆ ಮುಂದಿನ ವರ್ಷ ಅತ್ಯಂತ ವೈಭವಪೂರಿತವಾಗಿ ಭಕ್ತಿಭಾವದಿಂದ ಆಚರಿಸಲು ಅವಕಾಶ ಮಾಡಿಕೊಡುವಂತೆ ಪ್ರಾರ್ಥಿಸಿದ್ದೇವೆ. ಅವಕಾಶ ಕೊಟ್ಟರೆ ವೈಭವಯುತವಾಗಿ ಮಾಡುತ್ತೇವೆ. ಈ ನಾಡಹಬ್ಬ ಜನರಲ್ಲಿ ಉತ್ಸಾಹ ತುಂಬುವ ಕೆಲಸ ವಾಗಬೇಕು. ಮಳೆ ಬೆಳೆ ಸರಿಯಾಗಿ ಬಂದು ರೈತ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಕ್ಕಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು. ಈ ನಾಡು ಸಂಪದ್ಭರಿತವಾಗಬೇಕು. ಈ ನಾಡಿಜನ ಜನತೆ ಸುಖದ ಬದುಕನ್ನು ನಡೆಸಿದಾಗ ಮಾತ್ರ ಸಂಭ್ರಮದ ದಸರಾ ಆಗತ್ತೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ವಿವಿಧ ಸಾಧಕರನ್ನು ಗುರುತಿಸಿ ಮಾಡಿಸಲಾಗುವುದು. ಕೆಲಸ ಮಾಡುವುದು ಸಹಜ. ನಾಡಿಗಾಗಿ ನಾಡ ಜನತೆಗಾಗಿ ಬದುಕನ್ನು ಮುಡಿಪಿಡುವವರು ವಿರಳ ಎಂದು ತಿಳಿಸಿದರು.                                                                                ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ, ಸಚಿವರಾದ ಎಸ್.‌ ಟಿ.ಸೋಮಶೇಖರ್,ಸುದಾಕರ್‌, ಬೈರತಿ ಬಸವರಾಜು ಸೇರಿದಂತೆ ಇತರರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker