ದೇಗುಲದ ಪಾವಿತ್ರ್ಯತೆ ಕಾಪಾಡುವುದು ಭಕ್ತರ ಜವಾಬ್ದಾರಿ : ಡಾ.ವೀರೇಂದ್ರ ಹೆಗಡೆ
ತುಮಕೂರು : ದೇಗುಲದ ಪಾವಿತ್ರತೆಯನ್ನು ಕಾಪಾಡಿಕೊಳ್ಳಬೇಕಿರುವುದು ಆಯಾ ದೇಗುಲದ ಭಕ್ತರ ಜವಾಬ್ದಾರಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅಭಿಪ್ರಾಯಪಟ್ಟರು.
ಧರ್ಮಸ್ಥಳದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆದ ಶಬರಿಮಲೆ ಸ್ವಾಮಿ ಅಯ್ಯಪ್ಪ ಸೇವಾ ಸಮಾಜಂನ ರಾಜ್ಯ ಕಾರಣಿ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಗುಲದ ಪಾವಿತ್ರ್ಯತೆ ಹಾಳಾಗದಂತೆ ರಕ್ಷಣೆ ಮಾಡಬೇಕಿರುವುದು ಭಕ್ತರೇ, ಯಾವುದೇ ದೇಗುಲದ ಪಾವಿತ್ರ್ಯತೆಗೆ ಹಾನಿಯಾಗದಂತೆ ಉಳಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ತಿಳಿಸಿದರು.
ನಂಬಿಕೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಂಧಾನುಕರಣೆ ಮಾಡದೇ, ದೇವರಲ್ಲಿ ನಂಬಿಕೆ ಇಟ್ಟು, ಕಾರ್ಯಸಾಧನೆ ಮಾಡಬೇಕೆ ಹೊರತು, ಅಂಧಾನುಕರಣೆ ಮಾಡುವುದನ್ನು ಬಿಟ್ಟು, ವೈಜ್ಞಾನಿಕ ವಿಚಾರಗಳನ್ನು ಮನಗಾಣಬೇಕು ಎಂದು ಸಲಹೆ ನೀಡಿದ ಅವರು ಭಕ್ತರು ನೇತ್ರಾವತು ನದಿ ನೀರನ್ನು ಮಲೀನ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಶಬರಿಮಲೆ ಸೇವಾ ಸಮಾಜಂನ ರಾಷ್ಟ್ರೀಯ ಪೋಷಕರಾಗಿ ನೇಮಕವಾಗುವಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರಿಗೆ ಶಬರಿಮಲೆ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷರಾದ ತುಮಕೂರಿನ ಟಿ.ಬಿ. ಶೇಖರ್ ಮಾಡಿದ ಮನವಿಗೆ ಹೆಗಡೆಯವರು ಇದೇ ಸಂದರ್ಭದಲ್ಲಿ ಒಪ್ಪಿಗೆ ಸೂಚಿಸಿದರು.
ಶಬರಿಮಲೆ ಸೇವಾ ಸಮಾಜಂನ ರಾಷ್ಟ್ರೀಯಅಧ್ಯಕ್ಷರು ಹಾಗೂ ತುಮಕೂರು ನಗರ ವೀರಶೈವ ಸಮಾಜದ ಅಧ್ಯಕ್ಷರಾದ ಟಿ.ಬಿ.ಶೇಖರ್ ಅವರು ಪ್ರಸ್ತಾವಿಕವಾಗಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು, ಧರ್ಮಸ್ಥಳಕ್ಕೂ ಅಯ್ಯಪ್ಪನಿಗೂ ಇರುವ ನಂಟು ಹೆಚ್ಚಿದ್ದು, ಇಲ್ಲಿಯ ಧರ್ಮಸ್ಥಳ ಅಲ್ಲಿನ ಧರ್ಮಶಾಸ್ತ, ಅಯ್ಯಪ್ಪ ಈಶ್ವರನ ಮಗ ಎಂದರು.
ರಾಜ್ಯ ಕಾರ್ಯಕಾರಣಿಯಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂನ ಮಹಾ ಪೋಷಕರಾಗಿ ಅಯ್ಯಪ್ಪನ ಭಕ್ತರಿಗೆ ಮಾರ್ಗದರ್ಶನ ಮಾಡುವಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಅವರು ಮನವಿ ಮಾಡಿದರು, ಮನವಿಯನ್ನು ಪುರಸ್ಕರಿಸಿದ ವೀರೇಂದ್ರ ಹೆಗಡೆ ಅವರು ಮಹಾಪೋಷಕರಾಗಿ ಇರಲು ಸಭೆಯಲ್ಲಿಯೇ ಒಪ್ಪಿಗೆ ಸೂಚಿಸಿದರು.
ರಾಜ್ಯ ಕಾರ್ಯಕಾರಿಣಿಯಲ್ಲಿ ರಾಜ್ಯದ 22 ಜಿಲ್ಲೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕರ್ತರು, ಪ್ರತಿನಿಧಿಗಳು ಭಾಗವಹಿಸಿದ್ದರು.
ಶಾಸಕ ಹರೀಶ್ ಪೂಂಜ, ಎಸ್.ಶಿವರಾಂ ಗೌರವಾಧ್ಯಕ್ಷ, ವಿ.ಕೃಷ್ಣಪ್ಪ ಅಧ್ಯಕ್ಷರು ಸೇವಾ ಸಮಾಜ ಬೆಂಗಳೂರು, ಈರೋಡು ಎನ್.ರಾಜನ್ ರಾಷ್ಟ್ರೀಯ ಕಾರ್ಯದರ್ಶಿ, ಪದ್ಮಕುಮಾರ್ ಜೀ, ರಾಷ್ಟ್ರೀಯ ಪ್ರಭಾರಿ, ವಿನೋದ್ ಜೀ ರಾಷ್ಟ್ರೀಯ ಕೋಶಾಧಿಕಾರಿ, ದೊರೆಶಂಕರ್ ಜೀ, ಸಂಘಟನಾ ಕಾರ್ಯದರ್ಶಿ ತಮಿಳುನಾಡು, ಎಸ್.ಎನ್.ಕೃಷ್ಣಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ, ಗಣೇಶ್ ಪುದ್ವಾಲ್, ಮಂಗಳೂರು ಅಧ್ಯಕ್ಷರು, ರಾಧಾಕೃಷ್ಣ ಮೆಂಡನ್ ಅಧ್ಯಕ್ಷರು ಉಡುಪಿ ಮತ್ತು ಅಯ್ಯಪ್ಪ ಸ್ವಾಮಿ ಭಕ್ತರು ಇದ್ದರು.