ಬಾಪೂಜಿಯವರ ಸಮೃದ್ದ ಹಾಗೂ ಸೌಹಾರ್ದ ಭಾರತದ ಆಶಯ ಈಡೇರಬೇಕಾಗಿದೆ : ಕವಿತಾಕೃಷ್ಣ
ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಗಾಂಧೀ ಜಯಂತಿ ಆಚರಣೆ
ತುಮಕೂರು : ಛಿದ್ರಗೊಂಡಿರುವ ಮನಸ್ಸುಗಳನ್ನು ಬೆಸೆಯುವ ಕೆಲಸ ಜರೂರಾಗಿ ಆಗಬೇಕಿದೆ ಎಂದು ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಹೇಳಿದ್ದಾರೆ.
ನಗರದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಗಾಂಧೀ ಜಯಂತಿ ಆಚರಣೆ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಾಪೂಜಿಯವರ ವಿಚಾರಧಾರೆಗಳು ಹಾಗೂ ಅವರ ಕನಸಿನ ಭಾರತದ ಕಲ್ಪನೆಯಲ್ಲಿ ಮೂಡಿದ ಸಮೃದ್ದ ಹಾಗೂ ಸೌಹಾರ್ದ ಭಾರತದ ಆಶಯ ಈಡೇರಬೇಕಾಗಿದೆ ಎಂದು ತಿಳಿಸಿದರು.
ಸೂಜಿ ಮತ್ತು ವಜ್ರದ ಕತ್ತರಿ ಕಥೆಯನ್ನು ಹೇಳುವ ಮೂಲಕ ಕತ್ತರಿಸಿ ಚೂರುಚೂರು ಮಾಡುವ ವಜ್ರದ ಕತ್ತರಿ ಇಂದು ಬೇಕಿಲ್ಲ. ಛಿದ್ರಗೊಂಡಿರುವ ಮನಸ್ಸುಗಳನ್ನು ಬೆಸೆಯುವ, ಹರಿದು ಚಲ್ಲಾಪಿಲ್ಲಿಯಾಗಿರುವ ಬಟ್ಟೆಯನ್ನು ಒಲಿದು ಒಂದುಮಾಡುವ ಸೂಜಿಯಂತಹ ವ್ಯಕ್ತಿತ್ವ ಗಾಂಧೀಜಿಯವರದ್ದಾಗಿತ್ತು. ಹಾಗಾಗಿ ಮನಸ್ಸುಗಳನ್ನು ಬೆಸೆಯುವ ಕೆಲಸ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯರ‍್ಶಿ ಎಂ.ಬಸವಯ್ಯ, ಖಜಾಂಚಿ ಟಿ.ಪಿ.ಶಂಕರಲಿಂಗಪ್ಪ, ಪ್ರಾಚಾರ್ಯ ಕೃಷ್ಣಮೂರ್ತಿ, ಕಿಶೋರ್ ಕುಮಾರ್, ಸಿದ್ದಿಬಾಬು, ಮುಖ್ಯಶಿಕ್ಷಕಿ ಇಶ್ರತ್ ಜಬಿನಾ, ಉಪನ್ಯಾಸಕ ಎಚ್.ಗೋವಿಂದಯ್ಯ ಇದ್ದರು. ಹಿರಿಯ ಶಿಕ್ಷಕಿ ಎಚ್..ಬಿ.ವಸಂತ ಸ್ವಾಗತಿಸಿ ವಂದಿಸಿದರು.