ತಿಪಟೂರು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸ್ವಚ್ಚತೆಯೇ ಮಾಯ.. ?
ತಾಲ್ಲೂಕು ಪಂಚಾಯಿತಿ ಆವರಣದ ರಾಶಿ ರಾಶಿ ಕಸದ ಗುಡ್ಡೆಗಳಿಗೆ ಮುಕ್ತಿ ಕಾಣುವುದೇ..?
ತಿಪಟೂರು : ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು ಇಡೀ ದೇಶವು ಸ್ವಚ್ಚತೆಯಿಂದ ಶುಚಿತ್ವದಿಂದ ಇರಬೇಕು ಎಂದು ಸ್ವತಃ ಮೋದಿಯವರೇ ಕಸ ಗುಡಿಸುವ ಮೂಲಕ ಸ್ವಚ್ವ ಭಾರತ ಮಿಷನ್ ಎಂಬ ಕರ‍್ಯಕ್ರಮಕ್ಕೆ ಕಳೆದ ಆರು ವರ್ಷಗಳ ಹಿಂದೆ ಗಾಂಧೀ ಜಯಂತಿಯಂದು ಚಾಲನೆ ನೀಡಿದರು.
ಇದರ ಅನ್ವಯ ಎಲ್ಲಾ ಗ್ರಾಮ ಪಂಚಾಯಿತಿಯಿಂದ ಹಿಡಿದು ಕೇಂದ್ರ ಸರಕಾರದವರೆಗೂ ಸ್ವಚ್ಚತೆಯನ್ನು ಕಾಪಾಡಿ ಎಂದು ತಿಳಿಸಿದರೆ ಇದನ್ನು ಅನುಷ್ಠಾನ ತರಲು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಸಿಇಒ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದ್ದರೂ ಅವರೇ ಮರೆತು ಮಲಗಿದ್ದಾರೆ. ಇದಕ್ಕೆ ತಿಪಟೂರು ತಾಲ್ಲೂಕು ಪಂಚಾಯಿತಿಯೇ ಅಧಿಕಾರಿಗಳ ಬೇಜಾವ್ದಾರಿ ಮತ್ತು ಅಜಾಗರೋಕತೆ ಎದ್ದು ಕಾಣುತ್ತಿದೆ.
26 ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ತಿಪಟೂರು ತಾಲ್ಲೂಕು ಪಂಚಾಯಿತಿಗೆ ಪ್ರತಿನಿತ್ಯ ಸುಮಾರು ನೂರಾರು ಸಾರ್ವಜನಿಕರು ತಮ್ಮ ಕೆಲಸಗಳ ನಿಮಿತ್ತ ಬರುತ್ತಿದ್ದು, ಪಂಚಾಯಿತಿ ಆವರಣದ ಸುತ್ತ ಹರಿದು ಬಿಸಾಕಿದ ಕಾಗದದ ತುಂಡುಗಳು ಊಟ ಮಾಡಿದ ತಟ್ಟೆಗಳು ಅಲ್ಲಿ-ಅಲ್ಲಿಯೇ ಬಿದ್ದಿರುವುದು ಎದ್ದು ಕಾಣುತ್ತಿದೆ. ಕಟ್ಟಡದ ಸುತ್ತು –ಮುತ್ತ ನೀರು ನಿಂತು ಸೊಳ್ಳೆ ಹಾಗೂ ಸಾಂಕ್ರಾಮಿಕ ರೋಗಕ್ಕೆ ತಾಲ್ಲೂಕು ಪಂಚಾಯಿತಿಯೇ ದಾರಿ ಮಾಡಿಕೊಡುತ್ತಿದೆ.
ಕಚೇರಿ ಆವರಣದಲ್ಲಿರುವ ಶೌಚಾಲಯದಲ್ಲಿ ಸ್ವಚ್ಚತೆಯಿಲ್ಲದೆ ಇರುವುದರಿಂದ ಸಾರ್ವಜನಿಕರು ಅಧಿಕಾರಿಗಳನ್ನು ಶಪಿಸಿ. ಹೋಟೇಲ್, ಮರಗಿಡಗಳನ್ನು ಆಶ್ರಯ ಪಡೆಯಬೇಕಾಗಿದೆ.
ಇತ್ತೀಚೀಗಷ್ಟೆ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಿಗೆ ತಾಲ್ಲೂಕು ಪಂಚಾಯಿತಿ ವತಿಯಿಂದ ಹಾಗೂ ಗ್ರಾಮ ಪಂಚಾಯಿತಿ ಆಡಳಿತದ ತರಬೇತಿಯನ್ನು ನೀಡಿದ್ದು ಯಾವ ಮಟ್ಟಿಗೆ ಸ್ವಚ್ಚತೆ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಸಾರ್ವಜನಿಕರು ಚರ್ಚೆ ಮಾಡುತ್ತಿದ್ದಾರೆ.
ವರದಿ : ಪ್ರಶಾಂತ್ ಕರೀಕೆರೆ