ರಾಷ್ಟ್ರೀಯ ಸಬ್ ಜೂನಿಯರ್ ಈಜು ಚಾಂಪಿಯನ್‌ಷಿಪ್‌ಗೆ ಗಗನ್ ಆಯ್ಕೆ

ಹುಳಿಯಾರು: ಅಕ್ಟೋಬರ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಬ್ ಜೂನಿಯರ್ ಈಜು ಚಾಂಪಿಯನ್‌ಷಿಪ್‌ಗೆ ಹುಳಿಯಾರು ಮೂಲದ ಸಿ.ಎಂ.ಗಗನ ಆಯ್ಕೆಯಾಗಿದ್ದಾನೆ.
ಇತ್ತೀಚೆಗೆ ರಾಜ್ಯ ಈಜು ಸಂಸ್ಥೆ ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದಲ್ಲಿ ಆಯೋಜಿಸಿದ್ದ ಸಬ್ ಜೂನಿಯರ್ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ 11 ವರ್ಷದ ವಿಭಾಗದಲ್ಲಿ ಗಗನ್ ಭಾಗವಹಿಸಿದ್ದ.
ಈ ಸ್ಪರ್ಧೆಯಲ್ಲಿ 100 ಮೀ ಬ್ರೆಸ್ಟ್ ಸ್ಟೊಂಕ್‌ನಲ್ಲಿ ಬೆಳ್ಳಿ ಹಾಗೂ 50 ಮೀ ಬ್ರೆಸ್ಟ್ ಸ್ಟೊಂಕ್‌ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ರಾಷ್ಟ್ರೀಯ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಗಗನ ಹುಳಿಯಾರಿನ ಮೀಸೆಮಹಲಿಂಗಪ್ಪ ಅವರ ಮೊಮ್ಮಗನಾಗಿದ್ದು ಬೆಂಗಳೂರಿನ ಸ್ವಿಮ್ಮರ್ಸ್ ರೀಸರ್ಚ್ ಸೆಂಟರ್‌ನಲ್ಲಿ ಈಜು ತರಬೇತಿ ಪಡೆಯುತ್ತಿದ್ದ.
ಗಗನ್ ಸಾಧನೆಗೆ ಹುಳಿಯಾರಿನ ಎಕ್ಸಲೆಂಟ್ ಸ್ಪೋರ್ಟ್ಸ್ ಕ್ಲಬ್‌ನ ಅಶೋಕ್‌ಬಾಬು, ಮೆಡಿಕಲ್ ಸ್ಟೋರ್ ಗೋಪಾಲ್, ವಿವೇಕಾನಂದ, ವೆಂಕಟೇಶ್, ಶ್ರೇಯಸ್, ತೇಜಸ್, ಶೇಖರ್, ಅರುಣ್, ಅಜಿತ್, ಯೋಗೀಶ್ ಹರ್ಷ ವ್ಯಕ್ತಪಡಿಸಿ ರಾಷ್ಟ್ರ ಮಟ್ಟದಲ್ಲೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.