ಮಧುಗಿರಿ

ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಸಂಘ ಬದ್ದವಾಗಿದೆ : ಜಿಲ್ಲಾಧ್ಯಕ್ಷ ಎನ್.ನರಸಿಂಹರಾಜು

ಗುರುವಂದನಾ ಮತ್ತು ವಿವಿಧ ಇಲಾಖೆಯ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಸಮಾರಂಭ

ಮಧುಗಿರಿ : ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿರುವ ಪ್ರತಿಯೊಬ್ಬರಿಗೂ ಶಿಕ್ಷಕರೇ ಮಾರ್ಗದರ್ಶಕರು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ವಿವಿಧ ಇಲಾಖೆಯ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯದಲ್ಲಿ ಅಕ್ಷರಗಳ ಅರಿವು ಮೂಡಿಸಿ ನಮ್ಮನ್ನು ತಿದ್ದಿ, ಬುದ್ದಿ ಮಾತು ಹೇಳಿ ಯೋಗ್ಯರನ್ನಾಗಿಸುವ ಶಿಕ್ಷಕರನ್ನು ನಾವು ಎಂದಿಗೂ ಮರೆಯುವಂತಿಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ಹೇಳಿಕೊಟ್ಟ ಪಾಠ-ಪ್ರವಚನಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಾಗ ಮಾನಸಿಕ ನೆಮ್ಮದ್ದಿ ಹಾಗೂ ಸಮಾಧಾನ ಸಿಗುತ್ತದೆ ಎಂದರು.
ಸರಕಾರಿ ನೌಕರರಾಗಿ ಸೇವೆ ಸಲ್ಲಿಸುವುದು ಪುಣ್ಯದ ಕೆಲಸ. ನೌಕರರು ಆತ್ಮಸಾಕ್ಷಿಯಿಂದ ಕೆಲಸ ನಿರ್ವಹಿಸಿದರೆ ನೆಮ್ಮದಿಯ ಬದುಕು ಬದುಕಬಹುದು. ನಿವೃತ್ತಿ ಹೊಂದಿದ ಮೇಲೆ ಅನೇಕ ಸಮಾಜ ಸೇವೆಗಳಲ್ಲಾಗಲಿ ಅಥವಾ ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮ ಜೀವನವನ್ನು ನಡೆಸುವುದು ಉತ್ತಮ ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ನರಸಿಂಹರಾಜು ಮಾತನಾಡಿ, ಸರ್ಕಾರಿ ನೌಕರರ ಅನೇಕ ಸಮಸ್ಯೆಗಳನ್ನು ಬಗೆಹರಿಸುತ್ತ ಬರುತ್ತಿದ್ದು, ಉಳಿದ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸಂಘ ಬದ್ದವಾಗಿದೆ. ನೌಕರರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಕಲಾಗಿದ್ದು, ನಿವೃತ್ತಿ ನಂತರ ಪಿಂಚಣಿ ಇತ್ಯರ್ಥಗೊಳಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ನೆಮ್ಮದಿ ಜೀವನ ನಡೆಸಲು ಪದಾಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ ಎಂದ ಅವರು, ನಿವೃತ್ತಿ ಹೊಂದಿದವರಿಗೆ ಸರಿಯಾದ ಸಮಯದಲ್ಲಿ ಪಿಂಚಣಿ ಆಗುವ ರೀತಿ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು. ಸರ್ಕಾರಿ ನೌಕರರಿಗೆ ಏನಾದರೂ ಸಮಸ್ಯೆಗಳಿದ್ದರೆ ತಾಲೂಕು ಸಂಘದಲ್ಲಿ ತಿಳಿಸಬೇಕು ಒಂದು ವೇಳೆ ಅಲ್ಲಿ ನಿಮ್ಮ ಸಮಸ್ಯೆ ಬಗೆಹರಿಯದಿದ್ದರೆ ಬಗೆಹರಿದರೆ ಜಿಲ್ಲಾ ಸಂಘದ ಗಮನಕ್ಕೆ ತಂದರೆ ಅಂತಹ ಸಮಸ್ಯೆಗಳನ್ನು ಬಗೆಹರಿಸಲು ನಾವು ಸಿದ್ಧರಿದ್ದೇವೆ ಎಂದರು.
ಈ ಸಂದರ್ಭದಲ್ಲಿ 90 ಮಂದಿ ನಿವೃತ್ತ ಶಿಕ್ಷಕರು ಹಾಗೂ 60 ಮಂದಿ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ ನಿರ್ದೇಶಕ ಕೃಷ್ಣಮೂರ್ತಿ, ಪುರಸಭಾ ಅಧ್ಯಕ್ಷ ತಿಮ್ಮರಾಜು, ನೌಕರರ ಸಂಘದ ಅಧ್ಯಕ್ಷ ವಿ.ಎಚ್.ವೆಂಕಟೇಶಯ್ಯ ಮಾತನಾಡಿದರು. ಇಓ ದೊಡ್ಡಸಿದ್ದಯ್ಯ, ಡಯಟ್ ಪ್ರಾಂಶುಪಾಲ ರಾಮಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ನಂಜುಂಡಯ್ಯ, ಸಿಡಿಪಿಒ ಅನಿತಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಹನುಮಂತರಾಯಪ್ಪ, ಪಶು ಇಲಾಖಾ ಸಹಾಯಕ ನಿರ್ದೇಶಕ ಡಾ.ಗಿರೀಶ್ ಬಾಬು ರೆಡ್ಡಿ, ವಾಣಿಜ್ಯ ತೆರಿಗೆ ಅಧಿಕಾರಿ ಆರ್.ಪ್ರಭಾಕರ ರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂಜಯ್, ಪ್ರೌಡಶಾಲ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಪುರಸಭಾ ಸದಸ್ಯರಾದ ಎಂ.ಎಲ್.ಗಂಗರಾಜು, ಎಂ.ಆರ್.ಜಗನ್ನಾಥ್, ಕೆ.ನಾರಯಣ್,  ಎಂ.ಎಸ್.ಚಂದ್ರಶೇಕರ್ ಬಾಬು, ನರಸಿಂಹಮೂರ್ತಿ, ನೌಕರರ ಸಂಘದ ಗೌರವಾಧ್ಯಕ್ಷ ಜಿ.ಜಯರಾಮಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಎನ್.ನಟರಾಜು, ರಾಜ್ಯ ಪರಿಷತ್ ಸದಸ್ಯ ಎಂ.ಎನ್.ಶಿವಕುಮಾರ್, ಖಜಾಂಚಿ ಚಿಕ್ಕರಂಗಪ್ಪ(ಚಕ್ರಿ), ಉಪಾಧ್ಯಕ್ಷರುಗಳಾದ ಹೆಚ್.ಆರ್.ಶಶಿಕುಮಾರ್, ಜಿ.ಗೋವಿಂದರಾಜು, ಕೆ.ಟಿ.ಸಿದ್ದೇಶ್ವರ, ದಿನೇಶ್, ಸುರೇಶ್, ಮುಖಂಡರಾದ ತಿಮ್ಮಣ್ಣ ಹಾಗೂ ಪದಾಧಿಕಾರಿಗಳು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker