ಅಪ್ಪರ್ ಭದ್ರ ಯೋಜನೆ ಅನುಷ್ಟಾನಕ್ಕೆ ಶೀಘ್ರ ಶಂಕುಸ್ಥಾಪನೆ : ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ
ಶಿರಾ ಭಾಗದ 65 ಕೆರೆಗಳಿಗೆ ನೀರು ತುಂಬಿಸುವ ನೀರಾವರಿ ಅಪ್ಪರ್ ಭದ್ರ ಯೋಜನೆ
ಶಿರಾ : ತಾಲೂಕಿನ ಮಹತ್ವಾಕಾಂಕ್ಷೆಯ ಅಪ್ಪರ ಭದ್ರ ಯೋಜನೆ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಸರಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಪೈಪ್ ಲೈನ್ ಮೂಲಕ ನೀರು ಹರಿಸಲು ಈಗಾಗಲೇ ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಪೈಪ್‌ಗಳನ್ನು ಸಂಗ್ರಹ ಮಾಡಲಾಗುತ್ತಿದ್ದು, ಅತಿಶೀಘ್ರದಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ಶಿರಾ ತಾಲೂಕಿನ ಸೊರೆಕುಂಟೆ, ಲಕ್ಷ್ಮೀಸಾಗರ, ಉದ್ದರಾಮನಹಳ್ಳಿ, ಬರಗೂರು ಗ್ರಾಮದ ಸುತ್ತ ಮುತ್ತ ಅಪ್ಪರ ಭದ್ರ ಯೋಜನೆಯಡಿ 65 ಕೆರೆಗಳಿಗೆ ನೀರು ಹರಿಸಲು ಪೈಪ್ ಲೈನ್ ಮಾಡಲು ಸಂಗ್ರಹಿಸಿರುವ ಸ್ಥಳಗಳಿಗೆ ಭೇಟಿ ನೀಡಿ, ಅಧಿಕಾರಿಗೊಂದಿಗೆ ಚರ್ಚಿಸಿ ಮಾತನಾಡಿದರು. ಅಪ್ಪರ್ ಭದ್ರ ಯೋಜನೆ ಪೂರ್ಣಗೊಂಡರೆ ಶಿರಾ ತಾಲೂಕಿಗೆ 2 ಟಿಎಂಸಿ ನೀರು ನಿಗಧಿಯಾಗಿದೆ. ಪ್ರತಿ ವರ್ಷ ಇಷ್ಟು ಪ್ರಮಾಣದ ನೀರು 65 ಕೆರೆಗಳಿಗೆ ಹರಿದರು ಶಿರಾ ಭಾಗ ಸಮೃದ್ಧಿ ಕಾಣಲಿದೆ. ಸದಾ ಬರಗಾಲ ಶಾಶ್ವತ ನೀರಾವರಿ ಯೋಜನೆಗಳಿಲ್ಲದೇ ಶಿರಾ ಬರದ ನಾಡು ಎಂಬ ನಾಮಕಿಂತ ಕೇಳಿದ್ದ ರೈತ ಮತ್ತು ಜನ ಸಾಮಾನ್ಯರಿಗೆ ಈ ಯೋಜನೆ 2023ರ ಒಳಗಾಗಿ ಶಿರಾ ಸಮೃದ್ಧಿ ನಾಡು ಎಂಬ ಹೆಗ್ಗಳಿಕೆ ಪಾತ್ರವಾಗಲಿದ್ದು, ಇಂತಹ ಮಹತ್ವಾಕಾಂಕ್ಷೆಯ ಯೋಜನೆ ನಮ್ಮ ಸರಕಾರ ಮಾಡುತ್ತಿರುವುದು ನಮಗೆ ಹೆಮ್ಮೆ ಅನಿಸುತ್ತದೆ ಎಂದರು.