ಶಿರಾ : ಕೇಂದ್ರ ಸರಕಾರದ ಕೃಷಿ, ಎಪಿಎಂಸಿ ಮತ್ತು ವಿದ್ಯುತ್ ವಲಯ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ಸೆ. 27ರಂದು ಬಂದ್‌ಗೆ ಕರೆ ಕೊಟ್ಟಿದ್ದು ಅಂದು ಶಿರಾದಲ್ಲೂ ಕೂಡ ಬಂದ್ ಆಚರಿಸಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾ ಕರ‍್ಯಾಧ್ಯಕ್ಷ ಕೆ.ಎಸ್.ಧನಂಜಯರಾಧ್ಯ ತಿಳಿಸಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕೃಷಿಕಾಯ್ದೆ ರದ್ದು ಮಾಡಬೇಕು. ಕಳೆದ ಹತ್ತು ತಿಂಗಳಿನಿಂದ ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಕೈಬಿಡಬೇಕು ಮತ್ತು ವಿದ್ಯುಚ್ಛಕ್ತಿ ವಲಯವನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿ ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ, ದೇಶವ್ಯಾಪಿ ಕರೆ ನೀಡಿರುವ ಭಾರತ್ ಬಂದ್‌ಗೆ ಪೂರಕವಾಗಿ ಶಿರಾ ಬಂದ್‌ಗೆ ಕರೆ ನೀಡಲಾಗುತ್ತಿದೆ. ಕೇಂದ್ರ ಸರಕಾರಕ್ಕೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಹತ್ತು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಬಳಿ ಬಂದು ಸಮಸ್ಯೆ ಕೇಳಲು ಪ್ರಧಾನಮಂತ್ರಿಯವರಿಗೆ ಸಮಯವಿಲ್ಲ. ದೇಶವನ್ನು ಕಾಯುವ ಸೈನಿಕ ಹೇಗೆ ಮುಖ್ಯವೋ, ಆಹಾರ ಬೆಳೆಯುವ ರೈತ ಸಹ ಅಷ್ಟೆ ಮುಖ್ಯ. ಆದರೆ ರೈತರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೀಡಿರುವ ಶಿರಾ ಬಂದ್‌ಗೆ ಸರ‍್ವಜನಿಕರು, ಕೂಲಿಕರ‍್ಮಿಕರು, ವ್ಯಾಪಾರಸ್ಥರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಪ್ರಧಾನ ಕರ‍್ಯರ‍್ಶಿ ನಾದೂರು ಕೆಂಚಪ್ಪ ಮಾತನಾಡಿ ರೈತರಿಗೆ, ಜನಸಾಮಾನ್ಯರಿಗೆ ಮಾರಕವಾಗುವ ಮೂರು ಕಾಯ್ದೆ ಕುರಿತು ಹಮ್ಮಿಕೊಂಡಿರುವ ಶಿರಾ ಬಂದ್ ಯಶಸ್ವಿಗೊಳಿಸಲು ಎಲ್ಲರ ಸಹಕಾರ ಅಗತ್ಯ. ಸೆ. 27ರಂದು ಬೆಳಿಗ್ಗೆ 10ಕ್ಕೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ತೆರಳಲಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂರು ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲಿದ್ದಾರೆ. ವ್ಯಾಪಾರಸ್ಥರು ಶಿರಾ ಬಂದ್‌ಗೆ ತಮ್ಮ ವ್ಯಾಪಾರ ವಹಿವಾಟನ್ನು ಬಂದ್ ಮಾಡಿ ಸಹಕಾರ ನೀಡಬೇಕು ಎಂದು ಹೇಳಿದರು.
ಪತ್ರಿಕಾಗೊಷ್ಠಿಯ ರೈತ ಸಂಘದ ಅಧ್ಯಕ್ಷ ಬಿ.ಕೆ.ಲಕ್ಷö್ಮಣಗೌಡ, ಲಕ್ಕಣ್ಣ, ಜಗದೀಶ್ ಬರಗೂರು, ಪರುಸಪ್ಪ, ಜಯಣ್ಣ, ಕದಿರೆಹಳ್ಳಿ ನಾರಾಯಣಪ್ಪ, ಮುದ್ದೇನಹಳ್ಳಿ ಶಿವಲಿಂಗಮರ‍್ತಿ, ಚಿತ್ರಲಿಂಗಪ್ಪ, ಮೇಕೇರಹಳ್ಳಿ ಹನುಮಂತರಾಯಪ್ಪ, ಚಿಕ್ಕನಹಳ್ಳಿ ರಾಮೇಲಿಂಗಪ್ಪ, ಚಿಕ್ಕದಾಸರಹಳ್ಳಿ ಸೀನಪ್ಪ, ಬರಗೂರು ಜಯಣ್ಣ, ಗೋಣಿಹಳ್ಳಿ, ರಾಮಣ್ಣ, ಕೊಂಡಮ್ಮನಹಳ್ಳಿ ಗುರುಮರ‍್ತಿ ಮತ್ತಿತರರು ಹಾಜರಿದ್ದರು.