ವಿಧಾನಸಭೆಯಲ್ಲಿ ಅಸ್ಪುಶ್ಯತೆ ಬಗ್ಗೆ ಚರ್ಚೆ ನೆಡೆಯಲಿ : ಪಿ.ಎನ್.ರಾಮಯ್ಯ
ತುಮಕೂರು: ನಗರದ ಜಿಲ್ಲಾ ದಲಿತ ಸಂಘರ್ಷ
ಸಮಿತಿ ಕಛೇರಿಯಲ್ಲಿ ಜಿಲ್ಲಾ ದಲಿತ ಸಂಘರ್ಷ
ಸಮಿತಿ ಜಿಲ್ಲಾ ಅಧ್ಯಕ್ಷರಾದ ಪಿ.ಎನ್.ರಾಮಯ್ಯ
ನವರ ಅಧ್ಯಕ್ಷತೆಯಲ್ಲಿ ಅಸ್ಪುಶ್ಯತಾ ನಿರ್ಮೂಲನಾ
ಪ್ರತಿಭಟನಾ ಸಭೆ ನಡೆಸಲಾಯಿತು.
ರಾಜ್ಯದಲ್ಲಿ ನಿರಂತರವಾಗಿ ಎಸ್.ಸಿ/ಎಸ್.ಟಿ.
ಜನಾಂಗದ ಮೇಲೆ ಅಸ್ಪುಶ್ಯತೆ ಆಚರಣೆ
ನಡೆಯುತ್ತಲೇ ಇದೆ. ವಿಧಾನಸಭೆಯಲ್ಲಿ ಎಲ್ಲಾ
ಜಾತಿಯವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ
ನಡೆಸುತ್ತಿರುವುದರ ಬಗ್ಗೆ ಚರ್ಚೆ ನೆಡೆಸಲಾಗುತ್ತದೆ.
ನಿರಂತರವಾಗಿ ದಲಿತ ಜನಾಂಗದವರ ಮೇಲೆ
ಜಾತಿ ತಾರತಮ್ಯ ಅಸ್ಪೃಶ್ಯತೆ ಆಚರಣೆ ನೆಡೆಯುತ್ತದೆ
ಎಂದು ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ದೂರಿದರು.
ದೇಶ ಮತ್ತು ರಾಜ್ಯಗಳ ಎಸ್.ಸಿ./ಎಸ್.ಟಿ.
ಜನಾಂಗದವರ ಮೇಲೆ ಜಾತಿ ದೌರ್ಜನ್ಯ
ಕ್ರೌರ್ಯ, ಕೊಲೆ, ನೆಡೆಯುತ್ತವೆ. ಸರ್ಕಾರಗಳು
ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿವೆ.ದಲಿತರವ
ಮೇಲೆ ದೌರ್ಜನ್ಯ ನೆಡೆದಾಗ ಸ್ವಯಂ ಪ್ರೇರಿತವಾಗಿ
ನ್ಯಾಯಾಧೀಶರು ಎಸ್.ಸಿ/ಎಸ್.ಟಿ. ಆಯೋಗದ
ಅಧ್ಯಕ್ಷರು, ಮಾನವ ಹಕ್ಕು ಆಯೋಗದ ಅಧ್ಯಕ್ಷರು
ಕೇಸು, ದಾಖಲಿಸಿಕೊಳ್ಳುವ ಮೂಲಕ ಕಠಿಣ ಶಿಕ್ಷೆ
ವಿಧಿಸಬೇಕು ಎಂದು ಆಗ್ರಹಿಸಿದರು.
ನ್ಯಾಯಾಲಯಗಳಲ್ಲಿ ಪೊಲೀಸ್ ಠಾಣೆಗಳಲ್ಲಿ
ಸಂವಿಧಾನ ಹಕ್ಕುಗಳನ್ನು ಸಂರಕ್ಷಿಸಬೇಕು.
ಅಸ್ಪುಶ್ಯತೆ ಆಚರಣೆ ನೆಡೆಸುವವರ ವಿರುದ್ಧ ಕ್ರಮ
ತೆಗೆದುಕೊಳ್ಳಬೇಕು. ಎಸ್.ಸಿ/ಎಸ್.ಟಿ ಜನಾಮಗ
ಸಂಘಟಿತರಾಗುವ ಮೂಲಕ ಇಂತಹ ಅನಿಷ್ಠ
ಪದ್ಧತಿ ವಿರುದ್ಧ ಪ್ರತಿಭಟಿಸಬೇಕು ಎಂದು ಕರೆ
ನೀಡಿದರು.
ಈ ದೇಶದ ಪ್ರತಿ ಗ್ರಾಮಗಳಲ್ಲಿಯು ಅಸ್ಪುಶ್ಯತಾ
ನಿರ್ಮೂಲನಾ ಜಾಗೃತಿ ಕಾರ್ಯ ಕ್ರಮ ನೆಡೆಸಬೇಕು.
ಎಲ್ಲಾ ದೇವಾಲಯದ ಆಡಳಿತ ಮಂಡಳಿ ಮತ್ತು
ಅರ್ಚಕರ ಸಭೆ ನೆಡೆಸಬೇಕೆಂದು ಜಿಲ್ಲಾ ಪ್ರಧಾನ
ಕಾರ್ಯದರ್ಶಿ, ಪುಟ್ಟಸ್ವಾಮಿ ಸಲಹೆ ನೀಡಿದರು.
ದಲಿತ ಸಂಘಟನೆ ಮುಖಂಡರುಗಳಾದ
ಮಹೇಂದ್ರ, ನಟರಾಜು, ಚಂದ್ರಶೇಖರ್.ಡಿ.,
ಲಕ್ಷ್ಮೀನಾರಾಯಣ, ಮಾರುತಿ, ರಾಜೇಶ್,
ಸುನೀಲ್, ವಕ್ಕೋಡಿ ಶಿವಣ್ಣ, ಮಂಜುನಾಥ್,
ಹನುಮಂತರಾಜು, ಇನ್ನು ಮುಂತಾದವರು
ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.