ರೈತ ಮಕ್ಕಳಿಗೆ “ಹೊಸ ಶಿಷ್ಯವೇತನ”: ಪ್ರಯೋಜನ ಪಡೆದುಕೊಳ್ಳುಲು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮನವಿ
ತುಮಕೂರು : ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೆçÃತ್ಸಾಹಿಸುವ ಸಲುವಾಗಿ “ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ” ಯೋಜನೆಯಡಿ ಸರ್ಕಾರ ಜಾರಿಗೆ ತಂದಿರುವ “ಹೊಸ ಶಿಷ್ಯವೇತನ” ಸೌಲಭ್ಯಕ್ಕಾಗಿ ಸ್ನಾತಕೋತ್ತರ ಕೋರ್ಸ್ಗಳವರೆಗೆ ಪ್ರವೇಶ ಪಡೆದಿರುವ ರೈತ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು/ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‌ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ ಪ್ರೋತ್ಸಾಹಧನವಾಗಿ 2500 ರಿಂದ 11000 ರೂ.ವರೆಗೆ ನೀಡಲಾಗುವುದು. ಈ ಸೌಲಭ್ಯವನ್ನು 2021-22ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ ಶಿಷ್ಯವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯವೇತನದ ರೂಪದಲ್ಲಿ ಪಾವತಿಸಲಾಗುವುದು.
ಪದವಿಯ ಮುಂಚೆ ಪಿಯುಸಿ/ಐಟಿಐ/ಡಿಪ್ಲೊಮೊ ಪ್ರವೇಶ ಪಡೆದ ಹುಡುಗರು/ಪುರುಷರಿಗೆ 2500 ರೂ. ಹಾಗೂ ಹುಡುಗಿಯರು/ಅನ್ಯಲಿಂಗದವರಿಗೆ 3000 ರೂ.; ಎಲ್ಲಾ ಬಿ.ಎ/ಬಿ.ಎಸ್‌ಸಿ./ಬಿ.ಕಾಂ./ ಎಂ.ಬಿ.ಬಿ.ಎಸ್./ಬಿ.ಇ./ಬಿ.ಟೆಕ್ (ವೃತ್ತಿಪರ ಕೋರ್ಸ್ಗಳನ್ನು ಹೊರತುಪಡಿಸಿ) ಪ್ರವೇಶ ಪಡೆದ ಹುಡುಗರು/ಪುರುಷರಿಗೆ 5000 ರೂ. ಹಾಗೂ ಹುಡುಗಿಯರು/ಅನ್ಯಲಿಂಗದವರಿಗೆ 5500 ರೂ.; ಎಲ್.ಎಲ್.ಬಿ./ಪ್ಯಾರ ಮೆಡಿಕಲ್/ ಬಿ.ಫಾರ್ಮ್/ ನರ್ಸಿಂಗ್ ಮತ್ತಿತರ ವೃತ್ತಿಪರ ಕೋರ್ಸ್ಗಳ ಪ್ರವೇಶ ಪಡೆದ ಹುಡುಗರು/ಪುರುಷರಿಗೆ 7500 ರೂ. ಹಾಗೂ ಹುಡುಗಿಯರು/ಅನ್ಯಲಿಂಗದವರಿಗೆ 8000 ರೂ. ಹಾಗೂ ಎಂ.ಬಿ.ಬಿ.ಎಸ್./ಬಿ.ಇ./ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶ ಪಡೆದ ಹುಡುಗರು/ಪುರುಷರಿಗೆ 10000 ರೂ. ಹಾಗೂ ಹುಡುಗಿಯರು/ಅನ್ಯಲಿಂಗದವರಿಗೆ 11000 ರೂ.ಗಳ ಶಿಷ್ಯವೇತನ ನೀಡಲಾಗುವುದು.
ಶಿಷ್ಯವೇತನ ಪಡೆಯಲಿಚ್ಛಿಸುವ ಅರ್ಹ ರೈತರ ಮಕ್ಕಳು https://ssp.postmatric.karnataka.gov.in/2122_ca/ ಲಿಂಕ್ ಮೂಲಕ ನೋಂದಾಯಿಸಬಹುದಾಗಿದೆ.
ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ (2021-22ನೇ ಸಾಲು) ನೋಂದಣಿ ಮಾಡಿರಬೇಕು. ಸರ್ಕಾರದ ಯಾವುದೇ ಶಿಷ್ಯವೇತನ ಪಡೆಯದ ವಿದ್ಯಾರ್ಥಿಗಳು ಈ ಶಿಷ್ಯವೇತನ ಪಡೆಯಲು ಅರ್ಹರಾಗಿರುತ್ತಾರೆ. ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಆಧಾರ್ ಸಂಖ್ಯೆ, ತಂದೆ ಮತ್ತು ತಾಯಿಯ ಆಧಾರ್ ಸಂಖ್ಯೆ, ವಿದ್ಯಾರ್ಥಿ ಹಾಗು ಪೋಷಕರ ಮೊಬೈಲ್ ಸಂಖ್ಯೆ ಹಾಗೂ ವಾಸಸ್ಥಳದ ವಿಳಾಸ, ವಿದ್ಯಾರ್ಥಿಯ ನೋಂದಣಿ ಸಂಖ್ಯೆ, SAT ID ಆ ಮತ್ತಿತರ ಅಗತ್ಯ ಮಾಹಿತಿಯನ್ನು ಒದಗಿಸಬೇಕು. ವಿದ್ಯಾರ್ಥಿಯ ತಂದೆ / ತಾಯಿ / ಸ್ವತ: ಭೂಹಿಡುವಳಿ ಹೊಂದಿರಬೇಕು. ಹಾಗೂ FRUITS ನೋಂದಣಿ ಸಂಖ್ಯೆ ಪಡೆದಿರಬೇಕು. ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿದ್ದು, ಕಡ್ಡಾಯವಾಗಿ NPCI mapping ಆಗಿರಬೇಕು.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಜಿಲ್ಲೆಯ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಎಂದು ಅವರು ತಿಳಿಸಿದ್ದಾರೆ.