ಮಧುಗಿರಿ : ಪಟ್ಟಣದ ತಾಲೂಕು ಕಛೇರಿ ಪಕ್ಕದಲ್ಲಿರುವ ಗುರುಭವನ
ಅಂಗಡಿ ಮಳಿಗೆಗಳ ಕಂದಾಯ 4.5ಲಕ್ಷ ರೂ. ಬಾಕಿಯಿದ್ದು ಪುರಸಭ
ಅಧಿಕಾರಿಗಳು ವಸೂಲಿ ಮಾಡಲು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು
ಪುರಸಭೆ ಸದಸ್ಯ ಎಂ.ಎಸ್.ಚಂದ್ರಶೇಖರ್ ಬಾಬು ಆರೋಪಿಸಿದ್ದಾರೆ.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ
ಮಾತನಾಡಿದ ಅವರು, ಈ ವಿಚಾರವಾಗಿ ಬಿಇಒ ರವರಿಗೆ ಪುರಸಭಾ
ವತಿಯಿಂದ 3 ಬಾರಿ ನೋಟಿಸ್ ನೀಡಿದ್ದರೂ ಸಹ ಯಾವುದೇ
ಉತ್ತರ ನೀಡಿಲ್ಲ ಪುರಸಭೆಗೆ ಬರುವ ಆದಾಯ ಮೂಲಗಳನ್ನು
ಹೀಗೆ ನಿರ್ಲಕ್ಷ್ಯಿಸುತ್ತಿರುವ ಆಧಿಕಾರಿಗಳು ತಮ್ಮ ಬೇಜವಾಬ್ಧಾರಿ ತನ
ವರ್ತಿಸುತ್ತಿದ್ದಾರೊ ಅಥವಾ ಯಾರಿಗಾದರು ಭಯ ಪಡುತ್ತಿದ್ದಾರೊ
ತಿಳಿಯದಾಗಿದೆ ಎಂದು ತಿಳಿಸಿದ ಅವರು ಇನ್ನೊಂದು ವಾರದಲ್ಲಿ
ಕಂದಾಯ ಪಾವತಿ ಮಾಡದ್ದಿದ್ದರೆ ಪುರಸಭೆ ಕಛೇರಿ ಮುಂದೆ ಧರಣಿ
ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುಮಾರು 32 ಅಂಗಡಿ ಮಳಿಗೆಗಳಿಂದ ಮಾಸಿಕ ಬಾಡಿಗೆ ಪಡೆಯುತ್ತಿದ್ದು,
ಪುರಸಭೆಗೆ ಕಂದಾಯ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ ಎಂದ
ಅವರು ಮಧ್ಯಮ ವರ್ಗದ ಜನತೆ ಮನೆ ಕಂದಾಯ, ನಲ್ಲಿನೀರಿನ
ಕಂದಾಯ ಬಾಕಿ ಉಳಿಸಿಕೊಂಡರೆ ಕ್ರಮ ಕೈಗೊಳ್ಳುವ ಅಧಿಕಾರಿಗಳು ಒಬ್ಬರ
ಮೇಲೆ ಮತ್ತೊಬ್ಬರು ಹೇಳಿಕೊಂಡು ಲಕ್ಷಾಂತರ ರೂಗಳ ಕಂದಾಯ
ಬಾಕಿ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು
ಕೂಡ ಮಧುಗಿರಿ ಪುರಸಭೆ ಕಂದಾಯ ಬಾಕಿ ವಸೂಲಿ ಮಾಡುವಂತೆ
ಕಂದಾಯಾಧಿಕಾರಿಗೆ ತಾಕೀತು ಮಾಡಿದ್ದರು. ಅಧಿಕಾರಿಗಳು ಕಂದಾಯ
ವಸೂಲಿ ಮಾಡದ್ದಿದ್ದರೆ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ
ಗಮನಕ್ಕೆ ತಂದು ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದರು.