ತಿಪಟೂರು : ಪ್ರತಿಯೊಬ್ಬ ಹಾಲು ಉತ್ಪಾದಕರು ರಾಸು ವಿಮಾ ಹಾಗೂ ಜೀವಾ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಮಾಜಿ ಶಾಸಕ ಕೆ. ಷಡಕ್ಷರಿ ತಿಳಿಸಿದರು.
ನಗರದ ನಂದಿನಿ ಕ್ಷೀರ ಭವನದ ಸಬಾಂಗಣದಲ್ಲಿ ಆಯೋಜನೆ ಮಾಡಿದ್ದು ಹಾಲು ಉತ್ಪಾದಕ ರೈತರಿಗೆ ಸುಮಾರು ಇಪ್ಪತ್ತು ಲಕ್ಷಗಳ ವಿವಿಧ ಸವಲತ್ತುಗಳ ಚೆಕ್ ವಿತರಿಸಿ ಮಾತನಾಡಿದರು.
ಸಾರ್ವಜನಿಕರಿಗೆ ವಾಹನ ವಿಮೆ, ಬೆಳೆ ವಿಮೆ, ರಾಸು ವಿಮೆ, ಅಪಘಾತ ವಿಮೆ ಹೀಗೆ ಹಲವಾರು ವಿಮೆ ಸೌಲಭ್ಯಗಳು ಲಭ್ಯವಿದ್ದು ಕೋವಿಡ್ ಕಾಲದಲ್ಲಿ ಇವುಗಳ ಪ್ರಯೋಜನವನ್ನು ತಮ್ಮ ಕುಟುಂಬವನ್ನು ಆರ್ಥಿಕತೆಯಿಂದ ಮುನ್ನಡೆಸಿ ತಮ್ಮ ಕಾಯಕವನ್ನು ನಿಲ್ಲಸದೆ ಮುಂದುವರೆಸಿ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಹಾಲು ಮಂಡಳದ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ಮಾತನಾಡಿ ತುಮೂಲ್ ವತಿಯಿಂದ ಹಾಲು ಉತ್ಪಾದಕರಿಗೆ ರಾಸು ವಿಮಾ ಯೋಜನೆ, ಉತ್ಪಾದಕ ಕೋವಿಡ್‌ನಿಂದ ಮೃತ ಪಟ್ಟರೆ ಒಂದು ಲಕ್ಷ ಮರಣ ಪರಿಹಾರ, ವಿಧ್ಯಾರ್ಥಿನಿಯರಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆ, ಹುಲ್ಲು ಬವಣೆಗೆ ಪರಿಹಾರ ನೀಡಲಾಗುತ್ತಿದೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ಒಂದು ಕೋಟಿ ಮೂವತ್ತೇಳು ಲಕ್ಷ ರೂಗಳ 3570 ಚದರ ಅಡಿಗಳ ಕ್ಷೀರ ಭವನ ನಿರ್ಮಾಣ ಮಾಡುವುದಕ್ಕೆ ಮಾಜಿ ಶಾಸಕರು ಸಹಾಯ ಮಾಡಿದ್ದು ಮುಂದಿನ ದಿನಗಳಲ್ಲಿ ಶಂಕು ಸ್ಥಾಪನೆ ಮಾಡಲಾಗುವುದು ಎಂದರು.
ಚೆಕ್ ವಿತರಿಸಿ ಮಾತನಾಡಿದ ತಾ ಪಂ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ಎಲ್ಲಾ ದಿನಸಿ ಪದಾರ್ಥಗಳ ಬೆಲೆಗಳು ಗಗನಕ್ಕೆ ಹೇರಿದ್ದು ರೈತರಲ್ಲಿ ಕೋಳ್ಳುವ ಸ್ಥಿತಿ ಸಂಕಷ್ಟವಾಗಿದೆ, ಸರ್ಕಾರಗಳು ರೈತರ ಸಾರ್ವಜನಿಕರ ಹಿತ ಕಾಯಬೇಕಾಗಿದ್ದು ಅವರ ಹೊಣೆಯಾಗಿದೆ ಎಂದರು. ಹಾಗೂ ಸರ್ಕಾರ ಹಾಗೂ ಪಶು ಇಲಾಖೆ ಸರಿಯಾದ ಸಮಯಕ್ಕೆ ಜಾನುವಾರಗಳಿಗೆ ವ್ಯಾಕ್ಸಿನ್‌ಗಳನ್ನು ನೀಡದೇ ಇರುವುದರಿಂದ ರಾಸುಗಳ ಮರಣಗಳು ಸಹ ಅತಿ ಹೆಚ್ಚಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ವಿಸ್ತರಣಾಧಿಕಾರಿ ಮಲ್ಲಿಕಾರ್ಜುನ್, ಶಶಿಕಲಾ, ಶ್ರೀಲಕ್ಷ್ಮೀ, ಸಾಗರ್ ಸಿಬ್ಬಂದಿ ನವೀನ್ ತಾಲ್ಲೂಕು ವಿವಿದ ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳು, ರೈತರು ಹಾಜರಿದ್ದರು.