ಮಧುಗಿರಿ : ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಸೇವಾ ಮನೋಭಾವದಿಂದ ಕೆಲಸ ಮಾಡಿದರೆ ಪರಮಾತ್ಮನು ಮೆಚ್ಚುತ್ತಾನೆ ಎಂದು ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.
ಪಟ್ಟಣದ ನೃಪತುಂಗ ವೃತ್ತದ ಬಳಿ ಇರುವ ನಮ್ಮ ಆಸ್ಪತ್ರೆ ಖಾಸಗಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಮಾನವೀಯತೆ ದೃಷ್ಟಿಯಿಂದ ಕೆಲಸ ಮಾಡಬೇಕು ಹಾಗೂ ಆಸ್ಪತ್ರೆಯ ಸೇವೆಯ ಬಗ್ಗೆ ಪ್ರತಿಯೊಬ್ಬರೂ ಮಾಡುನಾಡುವಂತಾಗಬೇಕು ಎಂದರು.
ಜನತೆಗೆ ಕೊರೊನಾ ಸಾಂಕ್ರಾಮಿಕ ರೋಗವು ಉತ್ತಮ ಪಾಠ ಕಲಿಸಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕಾರ ಅಗತ್ಯವಿದೆ. ಕೊರೊನಾ ವಿರುದ್ದ ಹೋರಾಡುತ್ತಿರುವ ವೈದ್ಯರ ಸೇವೆ ಶ್ಲಾಘನೀಯ. ಗ್ರಾಮೀಣ ಪ್ರದೇಶದಿಂದ ಬರುವ ರೋಗಿಗಳಿಗೆ ಹೆಚ್ಚು ಒತ್ತು ನೀಡಿ, ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದ ಅವರು, ಕಡು ಬಡವರಿಗೆ ಸಾಧ್ಯವಾದಷ್ಟು ಉಚಿತ ಸೇವೆ ಕಲ್ಪಿಸಬೇಕು ಎಂದು ತಿಳಿಸಿದರು.
ಜಿಲ್ಲಾ ವೈಧ್ಯಾಧಿಕಾರಿ ಡಾ.ನಾಗೇಂದ್ರಪ್ಪ ತಾಲೂಕು ವೈಧ್ಯಾಧಿಕಾರಿ ಡಾ.ರಮೇಶ್ ಬಾಬು . ವೈಧ್ಯರಾದ ಶ್ರೀನಿವಾಸ್ ಚಿರುಕುರಿ, ವೆಂಕಟೇಶ್, ನಂದನ್ ಜಿ.ಕೆ.ಜಯರಾಂ, ವ್ಯವಸ್ಥಾಪಕರಾದ ರವಿಕುಮಾರ್, ದಯನಂದ, ಮುಖಂಡರಾದ ಎಂ.ಜಿ.ಶ್ರೀನಿವಾಸಮುರ್ತಿ, ಅರ್.ಎ.ನಾರಯಣ್, ಎಸ್‌ಬಿಟಿ ರಾಮು ಹಾಗೂ ಮುಂತಾದವರು ಹಾಜರಿದ್ದರು.