ಕೊರಟಗೆರೆ : ಖತರ್ನಾಕ್ ಅಂರ್ತಜಿಲ್ಲಾ ಕಳ್ಳರ ಬಂಧನ,11ಲಕ್ಷ ವಶ
ದುಪ್ಪಟ್ಟು ಹಣದ ಆಸೆಗೆ ಅಪರಿಚಿತ ವ್ಯಕ್ತಿಗಳ ಬಲೆಗೆ ಬಿದ್ದ ಕೇಬಲ್ ಕಾರ್ಮಿಕ
ಕೊರಟಗೆರೆ:- 25ಲಕ್ಷಕ್ಕೆ 10ನಿಮಿಷದಲ್ಲಿ 35ಲಕ್ಷ ಹಣ.. 30ಲಕ್ಷಕ್ಕೆ 20ನಿಮಿಷದಲ್ಲಿ 50ಲಕ್ಷ ನಗದು ದುಪ್ಪಟ್ಟು ಮಾಡಿಕೊಡುವ ಆಮೀಷವೊಡ್ಡಿ ಕೇಬಲ್ ಕಾರ್ಮಿಕನನ್ನು ಯಾಮಾರಿಸಿ 16ಲಕ್ಷ, 40ಸಾವಿರ ನಗದು ಹಣವನ್ನು ಪಡೆದು ಪರಾರಿಯಾಗಿದ್ದ 3ಜನ ಅಂತಃಜಿಲ್ಲಾ ಆರೋಪಿಗಳನ್ನು ಸೆರೆಹಿಡಿದು ಬಂಧಿಸುವಲ್ಲಿ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ, ಪಿಎಸೈ ನಾಗರಾಜು ಮತ್ತು ಎಎಸೈ ಯೊಗೀಶ್ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದೆ.
ತುಮಕೂರು ನಗರ ಬ್ರಹ್ಮಸಂದ್ರ ಸಮೀಪದ ದೊಡ್ಡಪೇಟೆ ವಾಸಿಯಾದ ಕೇಬಲ್ ಕಾರ್ಮಿಕ ಅಶೋಕಕುಮಾರ್ ಎಂಬಾತ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ತುಮಕೂರು ಎಸ್ಪಿ ರಾಹುಲ್‌ಕುಮಾರ್ ಮತ್ತು ಮಧುಗಿರಿ ಡಿವೈಎಸ್ಪಿ ರಾಮಕೃಷ್ಣ ಮಾರ್ಗದರ್ಶನದಲ್ಲಿ 3ಜನ ಅಂರ್ತಜಿಲ್ಲಾ ಖತರ್ನಾಕ್ ಕಳ್ಳರನ್ನು ಕೊರಟಗೆರೆ ಪೊಲೀಸರ ತಂಡ ಬಂಧಿಸಿ ಅವರಿಂದ 11ಲಕ್ಷ 76ಸಾವಿರ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಹಾವೇರಿ ಜಿಲ್ಲೆ ಚಿಕ್ಕಕುರವತ್ತಿ ಗ್ರಾಮದ ನವೀನ್‌ಕುಮಾರ್(40), ತುಮಕೂರು ನಗರದ ಯಲ್ಲಾಪುರದ ವಾಸಿ ಗಂಗಾಧರ(43), ಪಾವಗಡ ತಾಲೂಕು ಅಚ್ಚಮ್ಮನಹಳ್ಳಿ ಗ್ರಾಮದ ರಾಮಕೃಷ್ಣ(56) ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೂಳಿದ ತುರುವೇಕೆರೆ ತಾಲೂಕು ಸಂಪಿಗೆ ಹೊಸಹಳ್ಳಿ ವಾಸಿಯಾದ ಮುತ್ತುರಾಜು ಮತ್ತು ದೊಡ್ಡಬಳ್ಳಾಪುರ ವಾಸಿಯಾದ ಗೋಪಿ ಬಂಧನಕ್ಕೆ ಕೊರಟಗೆರೆ ಪೊಲೀಸರ ತಂಡ ಈಗಾಗಲೇ ಹೆಚ್ಚಿನ ತನಿಖೆ ಪ್ರಾರಂಭಿಸಿದ್ದಾರೆ.ದುಪ್ಪಟ್ಟು ಹಣ ಮಾಡುವ ದುರಾಸೆಯಿಂದ ಅಪರಿಚಿತ ದೂರವಾಣಿ ಕರೆಗೆ ಯಾಮಾರಿದ ಕೇಬಲ್ ಕಾರ್ಮಿಕ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದ ಪಾರ್ಕಿಂಗ್‌ನ ಬಳಿ ದ್ವೀಚಕ್ರ ವಾಹನದಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಗಳಿಗೆ ತಮ್ಮ ಬಳಿಯಿದ್ದ ಹಣದ ಬ್ಯಾಗನ್ನು ನೀಡಿದ್ದಾರೆ. ಬ್ಯಾಗಿನಲ್ಲಿದ್ದ ಹಣವನ್ನು ಎಣಿಸುವಾಗ ಅಷ್ಟೇ ಹಣವಿರುವ ಮತ್ತೊಂದು ಬ್ಯಾಗನ್ನು ನೀಡಿ ಅರ್ಧಗಂಟೆ ಬಿಟ್ಟು ಮತ್ತೇ ಶಿರಾ ನಗರಕ್ಕೆ ಬರುವಂತೆ ತಿಳಿಸಿ ಸ್ಥಳದಿಂದ ಪರಾರಿ ಆಗಿದ್ದಾರೆ.ತಾವು ನೀಡಿದ ಹಣದ ಬ್ಯಾಗನ್ನು ಪರಿಶೀಲನೆ ನಡೆಸದೇ ಹಣದ ಆಸೆಗಾಗಿ ಮತ್ತೇ ಶಿರಾಗೆ ಬಂದ ದಂಪತಿಗಳು ಅರ್ಧಗಂಟೆ ಕಾದು ದೂರವಾಣಿ ಕರೆ ಮಾಡಿದರೇ ಅಪರಿಚಿತ ವ್ಯಕ್ತಿಗಳ ಮೊಬೈಲ್ ಸ್ವೀಚ್‌ಆಪ್ ಆಗಿವೆ. ಬ್ಯಾಗಿನಲ್ಲಿದ್ದ ಹಣವನ್ನು ನೋಡಿದರೇ ಹಣದ ಬದಲಾಗಿ ಕಂತೆ ರೂಪದ ವೈಟ್‌ಪೇಪರ್ ಕಂಡಿವೆ. ಮೊಸವಾದ ಅರಿವಾದ ಮೇಲೆ ತಕ್ಷಣ ಕೊರಟಗೆರೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಕಾರ್ಮಿಕನ ದೂರಿನ ಅನ್ವಯ ಪೊಲೀಸರು 3ಜನ ಆರೋಪಿಗಳನ್ನು ಬಂಧಿಸಿ ಇನ್ನೂಳಿದ ಆರೋಪಿಗಳ ಸೆರೆಗಾಗಿ ಬಲೆ ಬಿಸಿದ್ದಾರೆ.
ಕಾರ್ಯಚರಣೆಯಲ್ಲಿ ಪಾಲ್ಗೊಂಡ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ, ಪಿಎಸೈ ನಾಗರಾಜು, ಎಎಸೈ ಯೊಗೀಶ್, ಸಿಬ್ಬಂಧಿಗಳಾದ ವೆಂಕಟೇಶ್, ಗಂಗಾಧರಪ್ಪ, ರಾಮಣ್ಣ, ಚನ್ನಮಲ್ಲಿಕಾರ್ಜುನ, ರಮೇಶಬಾಬು, ನಸ್ರುಲ್ಲಖಾನ್ ಮತ್ತು ಸಿಬ್ಬಂಧಿವರ್ಗವನ್ನು ತುಮಕೂರು ಎಸ್ಪಿ ರಾಹುಲ್‌ಕುಮಾರ್ ಅಭಿನಂದಿಸಿದ್ದಾರೆ.