ತುರುವೇಕೆರೆ : ಮಾದಿಹಳ್ಳಿಯ ಬದರಿಕಾಶ್ರಮ ಶ್ರೀ ರಾಮಕೃಷ್ಣ ಸೇವಾಶ್ರಮಕ್ಕೆ ಹಸ್ತಾಂತರ
ತುರುವೇಕೆರೆ : ತಾಲೂಕಿನ ಮಾದಿಹಳ್ಳಿ ಬದರಿಕಾಶ್ರಮದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸತ್ಚಾರಿತ್ರ್ಯ ಸದ್‌ಗುಣ, ಸದ್ವರ್ತನೆ, ಸದ್‌ವಿವೇಕದಂತಹ ಸಂಸ್ಕಾರಯುತ ಮೌಲ್ಯಗಳನ್ನು ಮಕ್ಕಳಲ್ಲಿ ಕಲಿಸಿಕೊಡಲಾಗುತ್ತದೆ ಎಂದು ಮಾದಿಹಳ್ಳಿ ರಾಮಕೃಷ್ಣ ಮಠದ ಮುಖ್ಯಸ್ಥ ಬೋದಸ್ವರೂಪಾನಂದಜಿ ಹೇಳಿದರು.
ತಾಲ್ಲೂಕಿನ ಮಾದಿಹಳ್ಳಿ ಸಮೀಪದ ಓಂಕಾರಾನಂದಜಿ ಸ್ವಾಮೀಜಿ ನೇತೃತ್ವದ ಬದಿಕಾಶ್ರಮವನ್ನು ಕೋಲ್ಕತ್ತದ ಬೇಲೂರು ಮಠದ ರಾಮಕೃಷ್ಣಾಶ್ರಮಕ್ಕೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಸುಮಾರು 200ಕ್ಕೂ ಅಧಿಕ ರಾಮಕೃಷ್ಣಾಶ್ರಮ ಮಠಗಳ ಶಾಖೆಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಸಾಕಷ್ಟು ವಿಸ್ತರಿಸಿಕೊಂಡಿವೆ. ವಿದೇಶಗಳಲ್ಲಿ ಹಾಗು ದೇಶದ ವಿವಿಧ ಭಾಗಗದ ರಾಮಕೃಷ್ಣಾಶ್ರಮ ಮಠಗಳಲ್ಲಿ ಭಕ್ತರಿಗೆ ಆಧ್ಯಾತ್ಮಿಕ ಮತ್ತು ಸಾಂತ್ವನದ ಕೇಂದ್ರಗಳಾಗಿ ಹೆಚ್ಚು ಕಾಳಜಿಯಿಂದ ಕೆಲಸ ಮಾಡುತ್ತಿವೆ. ಆಶ್ರಮದಲ್ಲಿ ಮಕ್ಕಳಿಗೆ ಆದರ್ಶ, ಸಂಯಮ, ಶಿಸ್ತು, ಆಧ್ಯಾತ್ಮ ಇಂತಹ ಮೌಲ್ವಿಕ ಗುಣಗಳನ್ನು ಬೆಳೆಸುವುದರ ಜೊತೆಗೆ ಮಠದ ಆಸುಪಾಸಿನ ಗ್ರಾಮಗಳ ಸೇವಾ ಕರ‍್ಯವನ್ನು ಸಹ ಮಾಡಲಾಗುತ್ತಿದೆ. ಇತ್ತೀಚೆಗೆ ಬದರಿಕಾಶ್ರಮವು ರಾಮಕೃಷ್ಣಸೇವಾಶ್ರಮ ಸಮರ್ಪಿಸಿಕೊಳ್ಳೂವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಸೇವಾ ಕಾರ‍್ಯ ಮತ್ತ ಆಧ್ಯಾತ್ಮಿಕ ಸಂಪರ್ಕದ ಕೊಂಡಿಯಾಗಿ ರಾಮಕೃಷ್ಣಾಶ್ರಮ ಮಠವು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಪ್ರೊ.ವೋಡೇಪಿಕೃಷ್ಣಾ ಮಾತನಾಡಿ, ಬದಿಕಾಶ್ರಮವು ಒಂದು ಒಳ್ಳೆಯ ಆಶ್ರಮ ಪರಂಪರೆಯನ್ನು ಹೊಂದಿದೆ. ಇಲ್ಲಿನ ಸಾಧು ಸಂತರ ಸ್ಪರ್ಶದಿಂದ ಮಕ್ಕಳಲ್ಲಿ ಒಳ್ಳೆಯ ದೈವಿಕ ಗುಣಗಳು ಬೆಳೆದು ಅವರು ಮುಂದೆ ಸಮಾಜದ ಆಸ್ತಿಯಾಗಿ ಪರಿವರ್ತನೆಯಾಗ ಬೇಕೆಂದು ಎಂದರಲ್ಲದೆ ತ್ಯಾಗ, ದುಡಿಮೆಯ ಪಾವಿತ್ರತೆ, ಆಧ್ಯಾತ್ಮಿಕತೆ, ಧರ್ಮಧ ಸಮನ್ವಯ ಎಲ್ಲರೂ ಒಂದೇ ಎಂದು ಸಾರುವ ಪರಮಹಂಸ, ವಿವೇಕಾನಂದರ ಆದರ್ಶಗಳ ಬಗ್ಗೆ ತಿಳಿಸಿಕೊಟ್ಟರು.
ಇದೇ ವೇಳೆ ಬದರಿಕಾಶ್ರಮದ ಓಂಕಾರಾನಂದಜಿ ಸ್ವಾಮೀಜಿ ಅವರನ್ನು ಅಭಿನಂದಿಸಲಾಯಿತು. ಕೊಲ್ಕತ್ತಾ ಬೇಲೂರಿನ ರಾಮಕೃಷ್ಣ ಮಿಷನ್‌ನ ಟ್ರಸ್ಟಿ ಮುಕ್ತಿಧಾನಂದಜಿ ಮಹಾರಾಜ್, ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಜೀತಕಾಮಾನಂದಜಿ ಮಹಾರಾಜ್, ಬೆಂಗಳೂರಿನ ನಿತ್ಯಸ್ತಾನಂದಜಿಮಹಾರಾಜ್, ಪ್ರಾಂಶುಪಾಲ ಶ್ರೀನಿವಾಸ್, ಗಾಂಧಿ ಆಧ್ಯಯನ ಕೇಂದ್ರದ ಜಿ.ಬಿ.ಶಿವರಾಜ್, ಸನ್ಯಾಸಿ ನಾರಾಯಣ್, ಮಕ್ಕಳು ಮತ್ತು ಭಕ್ತರು ಉಪಸ್ಥಿತರಿದ್ದರು.