ಸಂಘಟಿತರಾಗಿ ಬಿಜೆಪಿ ಪಕ್ಷದ ಗೆಲುವಿಗೆ ಶ್ರಮಿಸಿ : ಕೆ.ಎಸ್.ಕಿರಣ್‌ಕುಮಾರ್
ಬಿಜೆಪಿ ಪಕ್ಷದ ಟಿಕೇಟ್ ಬಗ್ಗೆ ಕಾರ್ಯಕರ್ತರಿಗೆ ಗೊಂದಲಬೇಡ
ಹುಳಿಯಾರು: ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮುಂದಿನ ವಿಧಾನಸಭೆ ಚುನಾವಣೆಯ ಬಿಜೆಪಿ ಪಕ್ಷದ ಟಿಕೇಟ್ ಬಗ್ಗೆ ಗೊಂದಲ ಬೇಡ ಪಕ್ಷದ ವರಿಷ್ಟರು ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ತಿಳಿಸಿದರು.
ಹುಳಿಯಾರು ಸಮೀಪದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಸೋಮವಾರದಂದು ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಚಿಕ್ಕನಾಯಕನಹಳ್ಳಿ ಬಿಜೆಪಿ ಮಂಡಲದ ವತಿಯಿಂದ ಏರ್ಪಡಿಸಿದ್ದ ಆರೋಗ್ಯ ಸ್ವಯಂ ಸೇವಾ ಶಿಬಿರ ಅಭಿಯಾನ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.
ವಿಧಾನಸಭೆ ಚುನಾವಣೆಯ ಟೀಕೆಟ್ ಬಗ್ಗೆ ಈಗಾಗಲೆ ಬಿಜೆಪಿ ಪಕ್ಷದ ವರಿಷ್ಟರು ಗಮನಹರಿಸಿದ್ದು ಸೂಕ್ತವಾದ ಒಳ್ಳೆಯ ತೀರ್ಮಾನವನ್ನ ಸಮಯಕ್ಕೆ ಸರಿಯಾಗಿ ತಿಳಿಸುತ್ತಾರೆ. ಇದರ ಬಗ್ಗೆ ಯಾರಿಗು ಅಪನಂಬಿಕೆ, ಗೊಂದಲ ಬೇಡ. ಪಕ್ಷದ ಒಳ್ಳೆಯ ಕೆಲಸವನ್ನ ನಾವು ಮುಂದುವರೆಸಿಕೊಂಡು ನಡೆಸೋಣ, ಪಕ್ಷದ ಅಭಿವೃದ್ದಿ ಕೆಲಸಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಮೂಲಕ ಪಕ್ಷ ಸಂಘಟನೆಗೆ ಗಮಹರಿಸುವಂತೆ ತಿಳಿಸಿದರು.
ಮುಂದೆ ಬರಲಿರುವ ತಾಪಂ.ಚುನಾವಣೆಗೆ ಕ್ಷೇತ್ರಗಳ ಪುರ್ನವಿಂಗಡನೆ ಮತ್ತು ಮೀಸಲಾತಿ ಬದಲಾಯಿಸುವ ಬಗ್ಗೆ ಈಗಾಗಲೆ ನಡೆದಿರುವ ಸರಕಾರದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕ್ಷೇತ್ರ ಪುರ್ನವಿಂಗಡನೆ ಮತ್ತು ಮೀಸಲಾತಿ ಯಾವುದೇ ಬರಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರು ಶ್ರಮಿಸುವ ಮೂಲಕ ಬಿಜೆಪಿ ಪಕ್ಷದ ಆಡಳಿತ ಚುಕ್ಕಾಣಿ ಇಡಿಯುವಂತೆ ಕಾರ್ಯಪ್ರವೃತ್ತರಾಗೋಣ ಎಂದರು.
2008ರ ನಂತರ ನನಗೆ ಯಾವುದೆ ಅಧಿಕಾರ ಇಲ್ಲದಿದ್ದರು ಸಹಾ ಕೆಲವು ತಿಂಗಳ ಹಿಂದೆ ನಡೆದ ಶೆಟ್ಟಿಕೆರೆ ಕೆರೆಯ ಹೇಮವತಿ ಭಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಸಾಕಷ್ಟು ಜನರು ಸೇರಿದ್ದು ನನಗೆ ಆತ್ಮಥೈರ್ಯ ತಂದಿದೆ. ಈ ಅಪಾರ ಜನರ ನಂಬಿಕೆಯನ್ನ ನಾನು ಉಳಿಸಿಕೊಳ್ಳುತ್ತೇನೆ. ಜನರ ನೋವಿಗೆ ನಾನು ಸ್ಪಂಧಿಸುವಂತ ಕಾರ್ಯವನ್ನ ನಡೆಸುತ್ತೇನೆಂದರು.
ಮುಂದಿನ ಚುನಾವಣೆಗಳು ಸಮೀಪಿಸುತ್ತಿವೆ, ಎಲ್ಲರು ಸಂಘಟಿತರಾಗಿ ಬಿಜೆಪಿ ಪಕ್ಷದ ಗೆಲುವಿಗೆ ಶ್ರಮಿಸಿ ಎಂದರು.
ಜಿಪಂ.ಮಾಜಿ ಸದಸ್ಯ ಪಂಚಾಕ್ಷರಿ ಮಾತನಾಡಿ ಮುಂದಿನ ವಿಧಾನ ಸಭೆ ಚುನಾವಣೆಗೆ ಕೆ.ಎಸ್.ಕಿರಣ್ ಕುಮಾರ್ ಸ್ಪರ್ಧೆ ಖಚಿತ ಯಾರಿಗು ಗೊಂದಲ ಬೇಡ ಎಲ್ಲರು ಸಂಘಟಿತರಾಗಿ ಕಿರಣ್‌ಕುಮಾರ್ ರವರನ್ನ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರನ್ನಾಗಿ ನೋಡೊಣ ಎಲ್ಲರು ಇಂದಿನಿಂದಲೆ ಸಂಘಟಿತರಾಗಿ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ ವಹಿಸಿದ್ದರು, ಜಿಲ್ಲಾ ಯುವ ಮೋರ್ಚ್ ಉಪಾಧ್ಯಕ್ಷ ಗುರುಪ್ರಸಾದ್, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಖಾ ಶಿವಕುಮಾರ್, ಆರ್ಯವೇದ ವೈದ್ಯರಾದ ಡಾ.ಸೌಭಾಗ್ಯ, ಮುಖಂಡರಾದ ಕವಿತಾ ಕಿರಣ್, ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಗುರುವಾಪುರ ದೇವರಾಜ್ ಹಾಜರಿದ್ದರು.